ಕತ್ರಿಗುಪ್ಪೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮನೆಗೆ ಕನ್ನ

ಕತ್ರಿಗುಪ್ಪೆ ಮುಖ್ಯರಸ್ತೆಯ ಮನೆಯಲ್ಲಿ ವಾಸವಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸಂಪತ್‌ಕುಮಾರ್ ಜು.30ರಂದು ಕುಟುಂಬ ಸಮೇತ ಶಿವಮೊಗ್ಗಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಹಣ ಹಾಗೂ ಆಭರಣಗಳನ್ನು ದೋಚಿದ್ದಾರೆ. ಆ.4 ಸೋಮವಾರ ಮುಂಜಾನೆ ಸಂಪತ್‌ಕುಮಾರ್ ಮನೆಗೆ ಬಂದು ಮುಂಬಾಗಿಲು ತೆಗೆದು ಒಳಗೆ ಹೋದಾಗ, ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.
ಕಳ್ಳತನದ ಬಗ್ಗೆ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ದೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಸಂಪತ್ ಕುಮಾರ್ ಅವರ ಪತ್ನಿ ಊರಿನಿಂದ ಹಿಂತಿರುಗಿದ ನಂತರವಷ್ಟೇ ಮನೆಯಲ್ಲಿ ಕಳ್ಳತನ ವಾಗಿರುವ ಹಣ, ಆಭರಣಗಳ ಮೌಲ್ಯ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications