ಕಾಂಗ್ರೆಸ್ ಶಾಸಕರೊಬ್ಬರ ಫಾರ್ಮ್ ಹೌಸ್‌ನಲ್ಲಿ ಕಾರಿನ 1 ಲಕ್ಷ ಮೌಲ್ಯದ 4 ಟೈರ್‌ಗಳ ಕಳ್ಳತನ
ಬೆಂಗಳೂರು, ಜುಲೈ, 13: ಸಾಮಾನ್ಯ ಜನರ ಕಾರು, ಬೈಕ್‌ಗಳು ಕಳ್ಳತನ ಆಗುವುದನ್ನು ನಾವು ಕೇಳಿರುತ್ತೇವೆ. ಆದರೆ ಇದೀಗ ವಿಚಿತ್ರ ಎಂಬಂತೆ ಶಾಸಕರೊಬ್ಬರಿಗೆ ಸೇರಿದ ಫಾರ್ಮ್ ಹೌಸ್‌ನಲ್ಲಿ ಕಾರಿನ ಟೈರ್‌ಗಳನ್ನು ಕದ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು-ತುಮಕೂರು ಮುಖ್ಯರಸ್ತೆಯ ದಾಸನಾಪುರ ಬಳಿಯಿರುವ ಮಾಜಿ ಸಚಿವ ಹಾಗೂ ಹಳಿಯಾಳ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಅವರ ಫಾರ್ಮ್‌ಹೌಸ್‌ನಲ್ಲಿ ಕಳೆದ ಶನಿವಾರ ದುಷ್ಕರ್ಮಿಗಳು ಹೊಸ ಕಾರಿನ ಟೈರ್‌ಗಳನ್ನು ಕಳ್ಳತನ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಖದೀವರು ಭದ್ರತೆಯ ನಡುವೆಯೂ 4 ರಿಮ್‌ಗಳ ಕೆಳಗೆ ಇಟ್ಟಿಗೆಗಳನ್ನಿಟ್ಟು ಟೈರ್‌ಗಳನ್ನು ಕಳ್ಳತನ ಮಾಡಿದ್ದಾರೆ. ಹಿರಿಯ ರಾಜಕಾರಣಿ ದೇಶಪಾಂಡೆ ಅವರ ಪುತ್ರ ಪ್ರಸಾದ್ ಆರ್.ದೇಶಪಾಂಡೆ ಕಾರ್ ಡೀಲರ್‌ಶಿಪ್ ಹೊಂದಿದ್ದು, ನಗರದ ಮೂರು ಸ್ಥಳಗಳಲ್ಲಿ ಶೋರೂಂಗಳನ್ನು ಹೊಂದಿದ್ದಾರೆ. ಕಂಪನಿಯ ಬಿಡದಿ ಘಟಕದಿಂದ ತರುವ 4 ಚಕ್ರದ ವಾಹನಗಳಿಗೆ ಫಾರ್ಮ್‌ಹೌಸ್ ಅನ್ನು ಸ್ಟಾಕ್‌ಯಾರ್ಡ್‌ನಂತೆ ಬಳಕೆ ಮಾಡಲಾಗುತ್ತದೆ.
ಇನ್ನೂ ಸ್ಟಾಕ್ ಯಾರ್ಡ್ ಉಸ್ತುವಾರಿ ಎ.ಎಸ್.ಹರೀಶ್ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಆಲೂರು ಕ್ರಿಕೆಟ್ ಸ್ಟೇಡಿಯಂ ಬಳಿ ದೇಶಪಾಂಡೆ ಅವರ ಫಾರ್ಮ್ ಹೌಸ್ ಇದ್ದು, ಪ್ರಸಾದ್ ಆರ್ ದೇಶಪಾಂಡೆ ಕಾರು ಆಟೋಮೊಬೈಲ್ ಡೀಲರ್ ಆಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮತ್ತು ಹೆಬ್ಬಾಳದಲ್ಲಿ ಶೋರೂಂಗಳನ್ನು ಹೊಂದಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ 6 ಮಂದಿ ಸೆಕ್ಯೂರಿಟಿ ಗಾರ್ಡ್‌ಗಳಿದ್ದು, ಅವರು ದಿನವಿಡೀ ಪಾಳಿಯಲ್ಲಿ ಕೆಲಸ ಮಾಡುತ್ತಾರೆ.
ದುಷ್ಕರ್ಮಿಗಳು ಮ್ಯಾಗ್ ಎಸ್‌ಯುವಿಯಿಂದ ಟೈರ್‌ಗಳನ್ನು ಕಳ್ಳತನ ಮಾಡಿದ್ದಾರೆ. ಭದ್ರತಾ ಮೇಲ್ವಿಚಾರಕರು ಸ್ಟಾಕ್ ಯಾರ್ಡ್‌ನಲ್ಲಿ ಸುತ್ತಾಡಿದಾಗ ರಾತ್ರಿ 10ರಿಂದ ಬೆಳಗ್ಗೆ 8ರ ನಡುವೆ ನಡೆದ ಕಳ್ಳತನ ಬೆಳಕಿಗೆ ಬಂದಿದೆ. ಇನ್ನು ಕಳುವಾದ ಚಕ್ರಗಳ ಬೆಲೆ ಸುಮಾರು 1 ಲಕ್ಷ ರೂಪಾಯಿ ಆಗಿದ್ದು, ಇದುವರೆಗೂ ಯಾವ ಕಳ್ಳರ ಬಂಧನ ಆಗಿಲ್ಲ ಎಂದು ತಿಳಿದುಬಂದಿದೆ.
ಇದೇ ರೀತಿಯ ಘಟನೆ ನಡೆದಿರುವುದು ಇದು ಎರಡನೇ ಬಾರಿ. ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳು ದ್ವಿಚಕ್ರ ವಾಹನಗಳ ಟೈರ್‌ಗಳನ್ನು ಕದ್ದೊಯ್ದಿದ್ದರು. ಒಳಗಿನವರ ಕೈವಾಡದ ಸಾಧ್ಯತೆಯನ್ನು ನಾವು ತಳ್ಳಿಹಾಕುವುದಿಲ್ಲ. ಕಾಂಪೌಂಡ್ ಗೋಡೆಯ ಎತ್ತರವು ತುಂಬಾ ಕಿರಿದಾಗಿರುವುದರಿಂದ ಹೊರಗಿನವರು ಸುಲಭವಾಗಿ ಆವರಣವನ್ನು ಪ್ರವೇಶಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications