ಜು.22ರಂದು ರಮಾಕಾಂತ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ
ಬೆಂಗಳೂರು, ಜು.18: ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯರಿಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಜು.22ರಂದು ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನಡೆಯಲಿದೆ.
ವಿದ್ವಾನ್ ರುದ್ರಪಟ್ನಂ ಎಸ್ ರಮಾಕಾಂತ್ ಅವರಿಂದ ಸಂಗೀತ ಕಾರ್ಯಕ್ರಮ ಮೂಡಿಬರಲಿದ್ದು, ವಯೋಲಿನ್‌ನಲ್ಲಿ ವಿದ್ವಾನ್ ಮೈಸೂರು ಶ್ರೀಕಾಂತ್, ಮೃದಂಗದಲ್ಲಿ ವಿದ್ವಾನ್ ಎವಿ ಆನಂದ್, ಖಂಚಿರದಲ್ಲಿ ವಿದ್ವಾನ್ ಎನ್ ಅಮೃತ್ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮವು ಜು.22ರಂದು ಸಂಜೆ 5.30ಕ್ಕೆ ಆರಂಭಗೊಳ್ಳಲಿದ್ದು, ಬನಶಂಕರಿ ಎರಡನೇ ಹಂತದಲ್ಲಿರುವ ಸಿದ್ದಣ್ಣ ಲೇಔಟ್‌ನ ರಾಮ ಲಲಿತ ಕಲಾ ಮಂದಿರದಲ್ಲಿ ನಡೆಯಲಿದೆ.

ಸಂಗೀತ ಪ್ರಿಯರಿಗಿದು ಸದವಕಾಶವಾಗಿದೆ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕೇಳದವರಿಲ್ಲ, ಇಷ್ಟಪಡದವರಿಲ್ಲ, ದೇವರ ಮೇಲಿನ ಹಾಡುಗಳು, ಭಾವಗೀತೆಗಳಂತೂ ಕೇಳುತ್ತಲೇ ಇರಬೇಕೆನ್ನುವಷ್ಟು ಆಸಕ್ತಿ ಮೂಡಿಸುತ್ತದೆ.












Click it and Unblock the Notifications