Video Viral: ಕಾರುಗಳ ಮುಖಾ ಮುಖಿ ಡಿಕ್ಕಿ: ಲಕ್ಷ ಲಕ್ಷ ಹಣ ಕಟ್ಟಿದ್ದೇಕೆ ಕಾರು ಮಾಲೀಕ!
ಬೆಂಗಳೂರು, ಮಾರ್ಚ್ 03: ಬೆಂಗಳೂರಿನಂತ ಸಂಚಾರ ದಟ್ಟಣೆಗಳ ನಗರದಲ್ಲಿ ರಸ್ತೆ ಅಪಘಾತಗಳು ಘಟಿಸುವುದು ಮಾಮೂಲು. ಇಲ್ಲೊಬ್ಬ ಕಾರು ಚಾಲಕ ರಾತ್ರಿ ಹೊತ್ತಿನಲ್ಲಿ ಬೇರೊಂದು ಕಾರಿಗೆ ಮುಖಾ ಮುಖಿ ಡಿಕ್ಕಿ ಹೊಡೆದಿದ್ದಾರೆ. ತಾನು ಮಾಡಿದ ತಪ್ಪಿಗೆ ಬರೋಬ್ಬರಿ 3.8 ಲಕ್ಷ ಮೊತ್ತ ಪಾವತಿಸಿದ್ದಾನೆ. ಇಂಥದ್ದೊಂದು ಘಟನೆ ಬೆಂಗಳೂರಿನ ಕಮ್ಮನಹಳ್ಳಿ ಜಂಕ್ಷನ್‌ನಲ್ಲಿ ಇತ್ತೀಚೆಗೆ ತಡರಾತ್ರಿ ನಡೆದಿದೆ.
ಬೆಂಗಳೂರು ಸಂಚಾರಿ ಪೊಲೀಸರ ನಿತ್ಯವು ವಾಹನ ದಟ್ಟಣೆ ನಿವಾರಿಸಲು ಹರಸಾಪಡುತ್ತಾರೆ. ಈ ಮಧ್ಯೆ ಸಂಚಾರ ನಿಯಮ ಉಲ್ಲಂಘಿಸುವವರು, ರಸ್ತೆ ಅಪಘಾತ ಮಾಡುವವರಿಂದ ಮತ್ತೊಂದು ರೀತಿಯ ಕಿರಿ ಕಿರಿ ಅನುಭವಿಸಿರುತ್ತಾರೆ. ಸದ್ಯ ತಡರಾತ್ರಿ ಎರಡು ಕಾರುಗಳು ಮುಖಾ ಮುಖಿ ಡಿಕ್ಕಿ ಹೊಡೆದ ಪ್ರಕರಣ ಬೆಳಕಿಗೆ ಬದಿದೆ. ಇದರಲ್ಲಿ ಓರ್ವ ಕಾರು ಮಾಲೀಕನ ಅಜಾರಗೂಕತೆ ಗೊತ್ತಾಗಿದೆ. ಅಪಘಾತ ದೃಶ್ಯಗಳು ಡಿಕ್ಕಿ ಹೊಡೆಸಿಕೊಂಡ ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಸಲಿಗೆ ಆಗಿದ್ದೇನು?
ಕಮ್ಮನಹಳ್ಳಿ ಜಂಕ್ಷನ್‌ನಲ್ಲಿ ರಾತ್ರಿ ಎಲ್ಲ ವಾಹನಗಳು ಸರಾಗವಾಗಿ ಹೋಗುತ್ತಿದ್ದವು. ವಿಡಿಯೋ ಸೆರೆ ಹಿಡಿದ ಕ್ಯಾಮೆರಾ ಹೊಂದಿರುವ ಕಾರು ಸಹ ಎಡಬದಿಯಲ್ಲಿ ಚಲಿಸುತ್ತಿತ್ತು. ನೋಡು ನೋಡುತ್ತಲೇ ಫೋಕಸ್ ಲೈಟ್ ಎದುರಾಯಿತು. ದಿಢೀರನೇ ಈ ಕಾರಿಗೆ ಎದುರಿನಿಂದ ಬಂದು ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಕಾರಿನ ಮಾಲೀಕರ ಪಾನಮತ್ತನಾಗಿದ್ದ. ಹೀಗಾಗಿ ಆತ ತನ್ನ ಎಡಬದಿಗೆ ಚಲಿಸುವ ಬದಲಾಗಿ, ಎದುರು ಬರುತ್ತಿರುವ ಕಾರಿಗೆ ಡಿಕ್ಕಿ ಹೊಡೆದಿರುವುದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಿಸುತ್ತದೆ. ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದ್ದು ಗೊತ್ತಾಗಿದೆ. ತನ್ನ ಈ ತಪ್ಪಿಗೆ ಆ ಕಾರು ಮಾಲೀಕ ರೂ. 3.8 ಲಕ್ಷಕ್ಕೂ ಹೆಚ್ಚು ಮೊತ್ತ ಪಾವತಿಸಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ @3rdEyeDude ಹ್ಯಾಂಡಲ್‌ನಿಂದ ವಿಡಿಯೋ ಹಂಚಿಕೊಳ್ಳಲಾಗಿದೆ.
Car owner pays pays 3.8L+ amount for drunk driving crash 😳
— ThirdEye (@3rdEyeDude) March 2, 2025
A drunk driver smashed head-on at Kammanahalli junction, leaving police unable to file an accident case, only a drunken driving charge forcing the stunned owner to shell out a fortune to repair his car via insurance. pic.twitter.com/Oi5IucTM6T
ಗುದ್ದಿದ ತಪ್ಪಿಗೆ ಕಾರು ರಿಪೇರಿ ಖರ್ಚು ಭರಿಸಿದ ಚಾಲಕ
ಕುಡಿದು ವಾಹನ ಚಲಾಯಿಸಿದ ಚಾಲಕನ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ಈ ಅಪಘಾತದಿಂದಾಗಿ ಪೊಲೀಸರಿಗೆ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ. ಬದಲಾಗಿ ಪಾನಮತ್ತ ಚಾಲಕನಿಂದ ಕಾರಿನ ಖರ್ಚು ರಿಪೇರಿಗೆ ಹಣ ಕೊಡಿಸಲಾಗಿದೆ. ಎದುರಿನ ಕಾರಿಗೆ ಗುದ್ದಿಕ್ಕೆ ಮುಂದಿನ ಬಾನೆಟ್, ಇಂಜಿನ್ ಕಡೆಗಳಲ್ಲಿ ಆದ ನುಜ್ಜು ಗುಜ್ಜು ಸರಿ ಮಾಡಿಸಿ, ರಿಪೇರಿ ಖರ್ಚು ಕೊಡಿಸಲಾಗಿದೆ. ಜೊತೆಗೆ ಪಾನಮತ್ತ ವಾಹನ ಸವಾರಿಗೆ ದಂಡ ಸೇರಿ ಒಟ್ಟು 3.8 ಲಕ್ಷಕ್ಕೂ ಅಧಿಕ ಮೊತ್ತ ಪಾವತಿಸಿದ್ದಾನೆ ಎಂದು ವರದಿ ಆಗಿದೆ.












Click it and Unblock the Notifications