ಮೆಟ್ರೋ ನಿಲ್ದಾಣ ಬಳಿ ಕನ್ನಡ ಹಬ್ಬಕ್ಕೆ ರಾಕ್ ಸಂಗೀತ
ಬೆಂಗಳೂರು, ಅ.31 : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ರೈಲ್ವೇ ನಿಲ್ದಾಣದ ಬಳಿಯ ಬೆಂಗಳೂರು ಸಂತೆಯ ರಂಗಮಂದಿರದಲ್ಲಿ sನವೆಂಬರ್ 3ರಂದು ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಡೇ ಜಾಮ್ ತಂಡದವರಿಂದ ಕನ್ನಡ, ರಾಕ್ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಲ್ಲದೆ ಕನ್ನಡ ರಾಕ್ ಸಂಗೀತ ಕಾರ್ಯಕ್ರಮ ಸಂಜೆ 6ರಿಂದ ರಾತ್ರಿ 8ರವರೆಗೆ ನಡೆಯಲಾಗಿದೆ.
ಸರ್ವಸ್ವ ಕಾರ್ಯಕ್ರಮದಲ್ಲಿ ಗಾಯಕಿ ಸಂಗೀತ ರಾಜೀವ್ ನೇತೃತ್ವದಲ್ಲಿ ಕನ್ನಡ ರಾಕ್ ಬ್ಯಾಂಡ್ ನಡೆಯಲಿದ್ದಾರೆ. ಲೂಸಿಯಾ ಸಿನಿಮಾಕ್ಕೆ ಕೂಡ ಇವರು ಹಾಡಿದ್ದಾರೆ. ಸಾಗರ್ ಗುರುರಾಜ್ ಅವರು ಅದ್ಭುತವಾಗಿ ಕೀಬೋರ್ಡ್ ವಾದನ ಮಾಡಲಿದ್ದಾರೆ. ಇವರು ಈಗಾಗಲೇ 200 ಸಾರ್ವಜನಿಕ ಪ್ರದರ್ಶನ ನೀಡಿದ್ದು ಸಾಕಷ್ಟು ಹೆಸರು ಗಳಿಸಿರುತ್ತಾರೆ.

ಮೈಸೂರು ಯುವ ದಸರಾ, ಸುವರ್ಣ ಟೀವಿ, ಅಂತಾರಾಷ್ಟ್ರೀಯ ಹಬ್ಬ, ಸೇನಾ ಕಾರ್ಯಕ್ರಮ, ಕಾಲೇಜು ಹಬ್ಬಗಳು, ಕಾರ್ಪೋರೇಟ್ ಹಬ್ಬಗಳು, ಪ್ರಸಿದ್ಧ ಶಾಪಿಂಗ್ ಮಾಲ್‍ಗಳಲ್ಲಿ ಪ್ರದರ್ಶನ ನೀಡಿರುತ್ತಾರೆ. ಮೈಸೂರು ಯುವ ದಸರಾದಲ್ಲಿ ಪ್ರಸಿದ್ಧ ಗಾಯಕ ಶಿವಮಣಿ, ಮತ್ತು ಪ್ರಸಿದ್ಧ ಗೋಲ್ಕುಂಡಿ ಅವರೊಂದಿಗೆ ಕಾರ್ಯಕ್ರಮ ನೀಡಿದ್ದಾರೆ.
ಕಿರಣ್ ರವೀಂದ್ರನಾಥ್ ಅವರು ಮೂಸ್ಯಿಕ್ ಕಂಪೋಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೆಲವೊಂದು ಅದ್ಭುತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಯಂಗ್‍ಜಾಸನ್ ಡಿಸೋಜ ಅವರು ಲೀಡ್ ಗಿಟಾರಿಸ್ಟ್ , ಹರೀಶ್ ಚೌತಾಯಿ ಬೇಸ್ ಗಿಟಾರಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೆಂಕಟೇಶ್ ಡೀ.ಸಿ ಇವರು ಪ್ರಸಿದ್ದ ಉತ್ತಮ ಬರಹಗಾರರು, ವಾದ್ಯಗಾರರು, ಹಾಡುಗಾರಿಕೆ, ಹಾಡುಗಳ ರಚನೆಯಲ್ಲಿ ಪ್ರಸಿದ್ಧಿ ಪಡೆದಿರುತ್ತಾರೆ. ಹಲವಾರು ಹಬ್ಬಗಳಲ್ಲಿ ಉತ್ತಮ ಹಾಡುಗಾರಿಕೆ ಪ್ರದರ್ಶನ ನೀಡಿರುತ್ತಾರೆ. ಕನ್ನಡ ಹಾಡುಗಾರಿಕೆಗೆ ಹೊಸ ರೂಪ ನೀಡುವತ್ತ ಗಮನ ಸೆಳೆಯುತ್ತಿದ್ದಾರೆ.












Click it and Unblock the Notifications