ಬೆಂಗಳೂರಿನಲ್ಲಿ ಕೇಬಲ್ ಬಿಲ್ ಸದ್ದಿಲ್ಲದೇ ಹೆಚ್ಚಳ!

ಸುಮಾರು ಏಳು ವರ್ಷಗಳಿಂದ ಕೇಬಲ್ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ಸಭೆ ನಡೆಸಿದ ಬೆಂಗಳೂರು ಮಹಾನಗರ ಕೇಬಲ್ ಆಪರೇಟರ್‌ಗಳು 20ರಿಂದ 30 ರೂ. ದರವನ್ನು ಹೆಚ್ಚಿಸಿದ್ದಾರೆ. ನಗರದ ಕೆಲವು ಪ್ರದೇಶಗಳಲ್ಲಿ ನೂತನ ದರವನ್ನು ಈ ತಿಂಗಳಿನಿಂದಲೇ ಜಾರಿಗೆ ತಂದಿದ್ದು, ಮಾರ್ಚ್ ನಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ. [ಸೆಟ್‌ಟಾಪ್ ಬಾಕ್ಸ್ ಗೆ ಎಷ್ಟು ಹಣ ಕೊಟ್ಟಿದ್ದೀರಿ?]
ನಗರದ ಬನಶಂಕರಿ, ಜಯನಗರ, ಮಲ್ಲೇಶ್ವರಂ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪರಿಷ್ಕೃತ ದರ ಈಗಾಗಲೇ ಜಾರಿಗೆ ಬಂದಿದ್ದು ಜನರು 20ರಿಂದ 30 ರೂ. ದರ ಹೆಚ್ಚು ಪಾವತಿ ಮಾಡಿದ್ದಾರೆ. ಉಳಿದ ಪ್ರದೇಶಗಳಲ್ಲೂ ನೂತನ ದರ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಮಾರ್ಚ್ ತಿಂಗಳಿನಲ್ಲಿ ಜನರು ನೂತನ ದರ ಪಾವತಿ ಮಾಡಬೇಕಾಗುತ್ತದೆ.
ಸೇವಾ ಶುಲ್ಕ ಹಾಗೂ ಮನರಂಜನಾ ತೆರಿಗೆಯನ್ನು ಪಾವತಿಸಬೇಕಾದ ಎಂಎಸ್‌ಒಗಳು, ಅದನ್ನು ಗ್ರಾಹಕರ ಮೇಲೆ ಹೇರುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಶೇಕಡ 12.36 ರಷ್ಟು ಸೇವಾ ತೆರಿಗೆ ಹಾಗೂ ಶೇಕಡ 6ರಷ್ಟು ಮನರಂಜನಾ ತೆರಿಗೆ ಪಾವತಿ ಮಾಡಬೇಕಾಗಿದೆ. ಜೊತೆಗೆ ಏಳು ವರ್ಷಗಳಿಂದ ದರ ಹೆಚ್ಚಿಸಿಲ್ಲ ಎಂದು ಕೇಬಲ್ ಆಪರೇಟರ್ ಗಳು ದರ ಹೆಚ್ಚಳಕ್ಕೆ ಸಮರ್ಥನೆ ನೀಡಿದ್ದಾರೆ.
ಕೇಬಲ್ ಆಪರೇಟರ್ ಗಳಿಗೆ ಬೆಂಗಳೂರಿನಲ್ಲಿ ಸದ್ಯ ಗ್ರಾಹಕರು ಸರಾಸರಿ 250ರೂ ಪಾವತಿ ಮಾಡುತ್ತಿದ್ದಾರೆ. ಆದರೆ, ನೂತನ ದರದ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. 20 ಅಥವ 30 ರೂ. ಹೆಚ್ಚಳವಾಗುವುದು ಖಾತ್ರಿಯಾಗಿದೆ. ಆದ್ದರಿಂದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಿಂದ ಗ್ರಾಹಕರು ನೂತನ ದರವನ್ನು ನೀಡಲು ಸಿದ್ಧರಾಗಬೇಕಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications