'ಹಿಂದೂ ಕಾರ್ಯಕರ್ತರ ಗುರಿಯಾಗಿಸಿ ಕಿರುಕುಳ: CM ಮೇಲೆ ₹500 ಕೋಟಿ ಕಿಕ್ ಬ್ಯಾಕ್ ಆರೋಪ'

ಬೆಂಗಳೂರು, ಏಪ್ರಿಲ್ 09: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗುರಿಯನ್ನಾಗಿಸಿಕೊಂಡು ಪೊಲೀಸ್ ದೌರ್ಜನ್ಯಗಳು ಪುನರಾವರ್ತನೆ ಯಾಗುತ್ತಲೇಯಿದೆ. ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಕಾರ್ಯಕರ್ತರ ವಿರುದ್ಧ ನಿರಂತರ ಕಿರುಕುಳ ನೀಡಲಾಗುತ್ತಿದೆ. ವಿನಯ್ ಸೋಮಯ್ಯ ಪ್ರಕರಣ ಬೆನ್ನಲ್ಲೆ ಮತ್ತೊಬ್ಬ ಕಾರ್ಯಕರ್ತನ ಹಲ್ಲೆ ಬಳಿಕ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುಡುಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸ್ವತಃ ಜಿಲ್ಲಾ ಎಸ್.ಪಿಯೇ ಹಿಂದೂ ಸಂಘಟನೆಯ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಬಿವೈ. ವಿಜಯೇಂದ್ರ ಅವರು, ಈ ನಡೆ ಅತ್ಯಂತ ಅಮಾನವೀಯ. ಅಧಿಕಾರ ದುರ್ಬಳಕೆ ಹಾಗೂ ಪೊಲೀಸ್ ದಬ್ಬಾಳಿಕೆಯನ್ನು ಸಾಕ್ಷೀಕರಿಸಿದೆ.

BY Vijayendra Outrage on Congress govt Over Harassment Assault on BJP and Hindu Workers

ಬೆಂಗಳೂರಿನಲ್ಲಿ ಇತ್ತೀಚೆಗೆ ಮೃತಪಟ್ಟಿದ ಖಾಸಗಿ ಕಂಪನಿ ಉದ್ಯೋಗಿ, ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣ ಹಸಿಯಾಗಿರುವಾಗಲೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸ್ವತಃ ಜಿಲ್ಲಾ ಎಸ್.ಪಿಯೇ ಹಿಂದೂ ಸಂಘಟನೆಯ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಅವರ ಮೇಲೆ ಹಲ್ಲೆ ಆಗಿದೆ.

ಪ್ರಲಾಪ ತೋರಿಸಿದ ಎಸ್‌ಪಿ ವಿರುದ್ಧ ಸರ್ಕಾರ ಮೌನ

ಇಷ್ಟಾಗಿಯೂ ಹಿಂದೂ ಕಾರ್ಯಕರ್ತರ ಮೇಲೆ ಪ್ರಲಾಪ ತೋರಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಜರುಗಿಸದೇ ಮೌನ ವಹಿಸಿದೆ. ಈ ಘಟನೆಯಲ್ಲಿ ಕಾಂಗ್ರೆಸ್ ಸರ್ಕಾರ ನಡೆದುಕೊಂಡ ನಡೆ ಅತ್ಯಂತ ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು.

ನಾಡಿನಲ್ಲಿನ ಈ ಸರ್ಕಾರದ ಈ ಧೋರಣೆ ಹಾಗೂ ವರ್ತನೆಯನ್ನು ಇನ್ನುಮುಂದೆ ಸಹಿಸಿ ಕೂರಲಾಗದು. ಸದ್ಯ ಮುಂದುವರೆದಿರುವ ಜನಾಕ್ರೋಶ ಯಾತ್ರೆಯಲ್ಲಿ ಈ ಬಗ್ಗೆ ದನಿಯೆತ್ತಲಾಗುವುದು ಎಂದು ಅವರು ಎಚ್ಚರಿಸಿದರು. ಈಗಾಗಲೇ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಅದರಲ್ಲಿ ಸರ್ಕಾರದ ನಡೆ, ಹಿಂದೂ ಮತ್ತು ಬಿಜೆಪಿ ಪರ ಕಾರ್ಯಕರ್ತದ ಮೇಲಿನ ದೌರ್ಜನ್ಯದ ಬಗ್ಗೆ ಬಿಜೆಪಿ ಬೆಳಕು ಚೆಲ್ಲಲಿದೆ. ಸರ್ಕಾರ ನಿರ್ಧಾರ, ನಿಲುಗಳನ್ನು ಜನರಿಗೆ ಬಹಿರಂಗಡಿಸಲು ಮುಂದಾಗಿದೆ.

ಸಿಎಂ ಮೇಲೆ ₹500 ಕೋಟಿ ಕಿಕ್‌ ಬ್ಯಾಕ್‌ ಆರೋಪ

ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿರುವ ಬಿಜೆಪಿಯು, ಬಿಲದಿಂದ ಒಂದೊಂದೆ ಹೆಗ್ಗಣಗಳು ಹೊರ ಬಂದ ರೀತಿ ಭಂಡ ಹಾಗೂ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಗರಣಗಳು ಒಂದೊಂದಾಗಿ ಹೊರ ಬರುತ್ತಿವೆ. ರಾಮಗಢ ಮಿನರಲ್ಸ್‌ ಸೇರಿ ಒಟ್ಟು 8 ಗಣಿಗಳಿಗೆ ಅನುಮತಿ ನೀಡಲು ಸ"ಮಜಾವಾದಿ" ಸಿದ್ದರಾಮಯ್ಯ ಅವರು ಬರೋಬ್ಬರಿ ₹500 ಕೋಟಿ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂಬ ದೂರು ದಾಖಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಪುಟಗಳು ದಿನಕ್ಕೊಂದರಂತೆ ಬಹಿರಂಗವಾಗುತ್ತಿವೆ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಬಿಜೆಪಿಯು ಪೋಸ್ಟ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+