BWSSB ನೇಮಕಾತಿ: ಸಹಾಯಕ ಅಭಿಯಂತರ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್, ದಾಖಲೆ ಪರಿಶೀಲನೆಗೆ ಆಹ್ವಾನ, ದಿನಾಂಕ
ಬೆಂಗಳೂರು: ಬೆಂಗಳೂರು ಜಲಮಂಡಳಿ ಮತ್ತು ನೀರು ಸರಬರಾಜು ಮಂಡಳಿ ( BWSSB) ನೇರ ನೇಮಕಾತಿಗೆ ಸಂಬಂಧಿಸಿದಂತೆ ಈ ಹಿಂದೆ ತಾತ್ಕಾಲಿಕ ಮುಖ್ಯ ಆಯ್ಕೆಪಟ್ಟಿ ಹಾಗೂ ತಾತ್ಕಾಲಿಕ ಹೆಚ್ಚುವರಿ ಪಟ್ಟಿಗಳನ್ನು ಪ್ರಕಟಿಸಲಾಗಿತ್ತು. ಇದೀಗ ಜಲಮಂಡಳಿಯು 15-11-2025 ಹಾಗೂ 20-05-2026 ರ ನೇರ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ 'ಬಿ' ದರ್ಜೆಯ ಸಹಾಯಕ ಅಭಿಯಂತರರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಿದೆ.
ದಾಖಲೆ ಪರಿಶೀಲನೆಯನ್ನು ದಿನಾಂಕ: 12-10-2026 ರಿಂದ 14-10-2026 ರವರೆಗೆ ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ತಮಗೆ ನಿಗಧಿಪಡಿಸಿರುವ ದಿನದಂದು ಪೂರಕ ದಾಖಲೆಗಳೊಂದಿಗೆ ಹಾಜರಾಗುವಂತೆ ಅಭ್ಯರ್ಥಿಗಳಿಗೆ ಇಂದು ಮಂಗಳವಾರ (ಸೆಪ್ಟೆಂಬರ್ 29) ಸೂಚನೆ ಕೊಟ್ಟಿದೆ.

ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಸದ್ಯ ನಡೆಯಲಿರುವ ದಾಖಲೆ ಪರಿಶೀಲನೆಗೆ ಪರಿಗಣಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ ದಿನಾಂಕ, ಸಮಯ, ಸ್ಥಳ ಮತ್ತಿತರ ಮಾಹಿತಿಗೆ ಮಂಡಳಿಯ ಅಧಿಕೃತ ವೆಬ್ ಸೈಟ್ www.bwssb.gov.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.
ಜಲಮಂಡಳಿ ನೇರ ನೇಮಕಾತಿ ಕುರಿತು..
ಬೆಂಗಳೂರು ನೀರು ಪೂರೈಕೆ ಸಂಸ್ಥೆ ಕಳೆದ ವರ್ಷ 224 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಇತರ ಹುದ್ದೆಗಳಿಗೆ ವರ್ಷದ ಹೀಮದೆ ನವೆಂಬರ್‌ನಲ್ಲಿ (2025) ಅರ್ಜಿ ಆಹ್ವಾನ ಮಾಡಿತ್ತು. ಜುಲೈ 2026ರಲ್ಲಿ ಮೊದಲ ಹಂತದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗಿತ್ತು.
ಒಟ್ಟು ಹುದ್ದೆಗಳಲ್ಲಿ ಬೆಂಗಳೂರು ಜಲಮಂಡಳಿಯು ಎಲೆಕ್ಟ್ರಿಷಿಯನ್ ಗ್ರೇಡ್-1 ಹಾಗೂ ಗ್ರೇಡ್-2 ಮುಂತಾದ 210 ಗ್ರೂಪ್-ಸಿ ಹುದ್ದೆಗಳಿಗೆ 2026ರ ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 30 ರವರೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿಗದಿಯಾಗಿದೆ ಎಂದು ಇತ್ತೀಚೆಗೆ ಜಲಮಂಡಳಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ನೇಮಕಾತಿಯ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿದ್ದ, ಇದೀಗ ನಿರ್ದಿಷ್ಟ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications
