• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹೃದಯ ಭಾಗಕ್ಕೆ ನ.26 ರಂದು ನೀರು ವ್ಯತ್ಯಯ: BWSSB

|
Google Oneindia Kannada News

ಬೆಂಗಳೂರು, ನವೆಂಬರ್ 25: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿ ನವೆಂಬರ್ 26ರಂದು ಶನಿವಾರ ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ. ಅಂದು ನಗರದ ಹಲವೆಡೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಜಲಮಂಡಳಿಯು, ಶನಿವಾರ ಕಾವೇರಿ ನೀರು ಸರಬರಾಜು ಆಗುವ 700 ಎಂಎಂ ವ್ಯಾಸದ ನೀರಿನ ಕೊಳವೆಗೆ ಇಎಂಎಫ್ ಮೀಟರ್ ಅಳವಡಿಸುವ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ನವೆಂಬರ್ 26ರಂದು ಬೆಂಗಳೂರು ಹಲವು ಕಡೆಗಳಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆವರೆಗೆ ಕಾವೇರಿ ನೀರು ಸರಬರಾಜಿನಲ್ಲಿ ಕೊರತೆ ಉಂಟಾಗಲಿದೆ ಎಂದು ಮಂಡಳಿ ತಿಳಿಸಿದೆ.

ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್‌ಗೆ ನೋಟಿಸ್‌ ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್‌ಗೆ ನೋಟಿಸ್‌

ನೀರು ವ್ಯತ್ಯಯದ ಸ್ಥಳಗಳು: ಬೆಂಗಳೂರು ಹೃದಯ ಭಾಗದ ಸ್ಥಳಗಳಲ್ಲಿ ಒಂದು ನೀರಿನ ವ್ಯತ್ಯಯ ಉಂಟಾಗಲಿದೆ. ಶಿವಾಜಿನಗರ, ಇನ್‌ಫೆಂಟ್ರಿ ರಸ್ತೆ, ಅಲಿ ಆಸ್ಕರ್ ರಸ್ತೆ, ರಾಜಭವನ ರಸ್ತೆ, ಕಬ್ಬನ್ ರಸ್ತೆ ಮತ್ತು ಬನ್ನಪ್ಪ ಉದ್ಯಾನ, ಕಬ್ಬನ್ ಪೇಟೆ, ಕುಂಬಾರ್ ಪೇಟೆ ಪ್ರದೇಶಗಳು.

ಅದೇ ರೀತಿ ಕಾಮರಾಜ ರಸ್ತೆ, ವೀರಪಿಳೈ ರಸ್ತೆ, ಸೇಂಟ್ ಮಾಕ್ಸ್‌ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್‌, ಕೆ. ಆರ್‌. ಮಾರುಕಟ್ಟೆ ಹಾಗೂ ವಿಧಾನಸೌಧ, ವಿಕಾಸಸೌಧ, ಎಂಎಸ್‌ ಬಿಲ್ಡಿಂಗ್ ಮತ್ತು ಸುಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಸೃಷ್ಟಿಯಾಗಲಿದೆ. ಈ ಸಂಬಂಧ ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

English summary
Few Parts of Bengaluru Face Cauvery Water Shutdown on November 26th, Bengaluru Water Supply and Sewerage Board (BWSSB) said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X