Breaking:ಬೆಂಗಳೂರಿನ ವಿವಿಧೆಡೆ ಇಂದು ಕಾವೇರಿ ನೀರು ವ್ಯತ್ಯಯ: BWSSB
ಬೆಂಗಳೂರು, ಅಕ್ಟೋಬರ್ 07: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಲ್ಕನೇ ಹಂತದ ಒಂದನೆ ಘಟ್ಟದ ವ್ಯಾಪ್ತಿಯಲ್ಲಿ ತುರ್ತು ಕೊಳವೆ ಮಾರ್ಗದ ಜೋಡಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಕ್ಟೋಬರ್ 07ರಂದು ನಗರದಲ್ಲಿ ಈ ಕೆಳಗಿನ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾವೇರಿ ನೀರು ವ್ಯತ್ಯಯದ ಸ್ಥಳಗಳು: ಜೆ.ಪಿ.ನಗರ ನಾಲ್ಕನೇ ಹಂತದಿಂದ 8 ಹಂತ, ಪುಟ್ಟೇನಹಳ್ಳಿ, ಜರಗನಹಳ್ಳಿ, ಆರ್‌ಬಿಐ
ಲೇಔಟ್, ಪಾಂಡುರಂಗ ನಗರ, ಅರಕೆರೆ, ಮೈಕೋ ಬಡಾವಣೆ, ದೊರೆಸ್ವಾಮಿಪಾಳ್ಯ, ಕೊತ್ತನೂರುದಿಣ್ಣೆ, ವೆಂಕಟಾದ್ರಿ ಲೇಔಟ್, ಚುಚ್ಚಘಟ್ಟ, ಕೋಣನಕುಂಟೆ, ಎಸ್‌ಬಿಎಂ ಲೇಔಟ್, ಸುಪ್ರೀಂ ರೆಸಿಡೆನ್ಸಿ ಲೇಔಟ್, ಲೇಕ್ ಸಿಟಿ, ನಾದಮ್ಮ ಲೇಔಟ್, ರೋಟರಿ ನಗರ, ಕೋಡಿಚಿಕ್ಕನಹಳ್ಳಿ, ಎಚ್‌ಎಸ್ಆರ್ ಲೇಔಟ್ ಒಂದರಿಂದ ಮತ್ತು ಏಳನೇ ವಲಯದವರೆಗಿನ ಪ್ರದೇಶಗಳು, ಅಗರ ವಿಲೇಜ್, ಮಂಗಮ್ಮನಪಾಳ್ಯ, ಮದೀನ ನಗರ, ಐಟಿಐ ಲೇಔಟ್, ಹೊಸಪಾಳ್ಯ ಪ್ರದೇಶಗಳು.

ರಾಜಕಾಲುವೆಗೆ ಒಳಚರಂಡಿ ನೀರು, ಹೆಚ್ಚಿನ ತನಿಖೆಗೆ ಹೈಕೋರ್ಟ್ ಆದೇಶ
ಬಂಡೇಪಾಳ್ಯ, ನಾಲ್ಕನೇ ಟಿ ಬ್ಲಾಕ್ ಜಯನಗರ, ಬಿ.ಜಿ.ರಸ್ತೆ ಪಾರ್ಟ್ ಆಫ್ ಮೂರನೇ ಹಂತ ಎರಡನೇ ಘಟ್ಟ, ಬಿಜಿ.ರಸ್ತೆ
ಈಸ್ಟ್ ರಸ್ತೆ, ಎನ್ಎಸಿ ಲೇಔಟ್, ತಿಲಕನಗರ, ಜಯದೇವ ಆಸ್ಪತ್ರೆ, ಬಿಟಿಎಂ ಎರಡು ಮತ್ತು ಮೂರನೇ ಹಂತ, ಕೆ.ಎಸ್.ಕಾಲೋನಿ, ಮಡಿವಾಳ, ತಾವರೆಕೆರೆ, ಐಕ್ಯೂಬ್ ನಗರ, ನಾರಾಯಣಪ್ಪ ಗಾರ್ಡನ್, ಡಾಲರ್ಸ್ ಕಾಲೋನಿ, ಸೋಮೇಶ್ವರ ಕಾಲೋನಿ, ವೆಂಕಟಾಪುರ, ಟೀಚರ್ಸ್ ಕಾಲೋನಿ, ಸಿದ್ದಾರ್ಥ ಕಾಲೋನಿ, ಕೋರಮಂಗಲ ನಾಲ್ಕನೇ ಇ ಬ್ಲಾಕ್ ಮತ್ತು ಜೆ ಬ್ಲಾಕ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆ ತಿಳಿಸಿದೆ.












Click it and Unblock the Notifications