ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸುಪ್ರಸಿದ್ಧ ಬನಶಂಕರಿ ದೇವಿ ಒಡವೆ ಕಳ್ಳತನ

|
Google Oneindia Kannada News

ಬೆಂಗಳೂರು, ಜೂ. 19 : ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಬೆಂಗಳೂರಿನ ಪ್ರತಿಷ್ಠಿತ ಬನಶಂಕರಿ ದೇವಾಲಯದಿಂದ 14 ಗ್ರಾಂ ಚಿನ್ನವನ್ನು ಕಳವು ಮಾಡಲಾಗಿದೆ. ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಅರ್ಚಕರು ಮತ್ತು ಪರಿಚಾರಕರೇ ಕಳುವು ಮಾಡಿದ್ದಾರೆ ಎಂಬುದು ಆರೋಪ.

ಶುಕ್ರವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ದೇವಾಲಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ದೇವಾಲಯದ ಅರ್ಚಕರು, ಪರಿಚಾರಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದು, ಅಧಿಕಾರಿಗಳ ಮುಂದೆಯೂ ಈ ಕುರಿತು ಹೇಳಿಕೆ ನೀಡಿದ್ದಾರೆ.

banashankari

ದೇವಾಲಯದ ಪ್ರಧಾನ ಅರ್ಚಕ ಸತ್ಯನಾರಾಯಣ ಶಾಸ್ತ್ರೀ, ಪರಿಚಾರಕ ಸೋಮಶೇಖರ ಶರ್ಮಾ, ಸಹಾಯಕ ಅರ್ಚಕ ನಾಗರಾಜ ರಾವ್ ಮತ್ತು ಸತೀಶ್ ಅವರು ದೇವರ ಕಿರೀಟ ಮತ್ತು ಪಾದುಕೆಯಲ್ಲಿದ್ದ 14 ಗ್ರಾಂ ಚಿನ್ನವನ್ನು ಕಳುವು ಮಾಡಿದ್ದಾರೆ ಎಂಬುದು ಆರೋಪ. ಎಲ್ಲ ನಾಲ್ವರನ್ನು ಮುಜರಾಯಿ ಇಲಾಖೆ ವಿಶೇಷ ಡಿಸಿ ವೆಂಕಟಾಚಲಪತಿ ಅವರು ಅಮಾನತು ಗೊಳಿಸಿದ್ದಾರೆ. [ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]

ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವಿ.ಶಂಕರ್ ಅವರು, 'ಇತ್ತೀಚೆಗೆ ದೇವಾಲಯದ ಶತಮಾನೋತ್ಸವವನ್ನು ಆಚರಣೆ ಮಾಡಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ ಭಕ್ತರು ದೇವಿಯ ವಿಗ್ರಹದ ಪಾದುಕೆಯಲ್ಲಿ 6 ಗ್ರಾಂ ಚಿನ್ನ ಕತ್ತರಿಸಿ ತೆಗೆಯಲಾಗಿದೆ ಎಂದು ದೂರು ನೀಡಿದ್ದರು, ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ' ಎಂದು ಹೇಳಿದರು. [18 ಕೆಜಿ ಚಿನ್ನ ಕದ್ದು ದನದ ಕೊಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದರು!]

English summary
Bengaluru Deputy Commissioner V. Shankar visited Bengaluru Banashankari temple along with Muzrai department officers. Many devotees of temple alleged that gold gold ornaments missing form temple and temple main priest and other involved in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X