ಬೆಂಗಳೂರಿನ ಚರ್ಚ್‌ನಲ್ಲಿ ಅಸಲಿಗೆ ನಡೆದಿದ್ದಾರೂ ಏನು?

ಬೆಂಗಳೂರು, ಜನವರಿ 21: ಬೆಂಗಳೂರಿನ ಕೆಂಗೇರಿಯಲ್ಲಿ ಚರ್ಚಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿರುವುದು ಕಳ್ಳನೊಬ್ಬನ ಕರಾಮತ್ತು ಎಂದು ತಿಳಿದು ಬಂದಿದೆ.

ಕೆಂಗೇರಿಯ 'ಸಂತ ಫ್ರಾನ್ಸಿಸ್‌' ಚರ್ಚ್‌ನಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ನುಗ್ಗಿ, ಕಿಟಗಿ ಗಾಜುಗಳು, ಬಾಗಿಲುಗಳನ್ನು ಒಡೆದಿದ್ದಾರೆ. ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂಬ ಸುದ್ದಿಗಳು ಮಂಗಳವಾರ ಬೆಳಿಗ್ಗೆ ಹರಿದಾಡಿದ್ದವು. ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಕಳ್ಳನೊಬ್ಬನ ಕೃತ್ಯ ಎಂಬುದಾಗಿ ಗೊತ್ತಾಗಿದೆ.

Burglary Attempt In Bengaluru Church

ಸಿಸಿಟಿವಿ ದಾಖಲೆಗಳ ಪ್ರಕಾರ, ಕಳ್ಳನೊಬ್ಬ ಚರ್ಚ್ ನ ಮುಖ್ಯ ಬಾಗಿಲು ಮುರಿದು ಒಳ ನುಗ್ಗಿದ್ದಾನೆ. ನಂತರ ಪ್ರಾರ್ಥನಾ ಮಂದಿರದಲ್ಲಿನ ಎರಡು ಕಪಾಟುಗಳನ್ನೂ ಸಹ ಮುರಿದಿದ್ದಾನೆ. ಕಪಾಟಿನಲ್ಲಿ ಏನೂ ಸಿಗದಿದ್ದಕ್ಕೆ ಚರ್ಚ್‌ನಲ್ಲಿನ ಕುರ್ಚಿ ಮೇಜುಗಳನ್ನು ಪುಡಿ ಪುಡಿ ಮಾಡಿ ಅಲ್ಲಿಂದ ಕಾಲು ಕಿತ್ತಿದ್ದಾನೆ.

Burglary Attempt In Bengaluru Church

ಚರ್ಚ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಈ ಘಟನೆ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಯಾರೋ ಕೋಮು ಭಾವನೆ ಕೆರಳಿಸಲು ಈ ರೀತಿ ಮಾಡಿದ್ದಾರೆ ಎನ್ನಲಾಗಿತ್ತು. ಕೆಂಗೇರಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+