ಸ್ತನ ಕ್ಯಾನ್ಸರ್ ಹೆಚ್ಚಳ; ಬೆಂಗಳೂರಿನದ್ದು ಎರಡನೇ ಸ್ಥಾನ

ಬೆಂಗಳೂರು, ಅಕ್ಟೋಬರ್ 10: ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಿರುವ ಮಹಿಳೆಯರ ಸಂಖ್ಯೆ ಬೆಂಗಳೂರು ನಗರ ಪ್ರದೇಶದಲ್ಲಿ ಏರಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಪ್ರತಿ ವರ್ಷ 26,000 ರಿಂದ 30,000 ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಚಲಿತದಲ್ಲಿದೆ ಎಂದು ಅಂದಾಜಿಸಲಾಗಿದೆ.

ಈಚಿನ ವರ್ಷಗಳಲ್ಲಿ, ದೇಶದಲ್ಲಿಯೇ ಅತಿ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಣ ಚೆನ್ನೈನಲ್ಲಿ ಕಂಡುಬಂದಿದ್ದು, ಬೆಂಗಳೂರು ಅತಿ ಹೆಚ್ಚು ಸ್ತನ ಕ್ಯಾನ್ಸರ್ ಪ್ರಕರಣಗಳಿರುವ ಎರಡನೇ ನಗರವಾಗಿ ಗುರುತಿಸಿಕೊಂಡಿದೆ. ಬೆಂಗಳೂರು ನಗರ ಪ್ರದೇಶದಲ್ಲಿ ಪ್ರತಿ ವರ್ಷ ಸುಮಾರು 1688 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. 4558 ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಚಲಿತದಲ್ಲಿವೆ.

ಬೆಂಗಳೂರಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕ್ಯಾನ್ಸರ್‌ನ ಸಾಮಾನ್ಯ ರೂಪವಾಗಿದೆ (ಶೇ 28). ಇದರೊಂದಿಗೆ ನಗರದಲ್ಲಿ ಪ್ರತಿ ವರ್ಷ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 4.2ರಷ್ಟು ಹೆಚ್ಚಳವನ್ನು ಕಾಣಬಹುದಾಗಿದೆ.

 Breast Cancer Cases Rising In Bengaluru

1982ರಲ್ಲಿ ಒಂದು ಲಕ್ಷ ಜನಸಂಖ್ಯೆಯಲ್ಲಿ 15% ಇದ್ದ ಸ್ತನ ಕ್ಯಾನ್ಸರ್ ಪ್ರಕರಣ, ಈಚಿನ ವರ್ಷದಲ್ಲಿ 40.5%ಗೆ ಏರಿಕೆಯಾಗಿದೆ. ಈ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕಿದ್ವಾಯಿ ಮೆಮೋರಿಯನ್ ಇನ್‌ಸ್ಟಿಟ್ಟಯೂಟ್ ಆಫ್ ಆಂಕಾಲಜಿ ನಿರ್ದೇಶಕ ಡಾ. ಸಿ. ರಾಮಚಂದ್ರನ್, 'ಡೆಕ್ಕನ್ ಹೆರಾಲ್ಡ್‌'ಗೆ ಮಾಹಿತಿ ನೀಡಿದ್ದಾರೆ.

ಕಿದ್ವಾಯಿಯಲ್ಲಿ ಪ್ರತಿ ವರ್ಷ ಸುಮಾರು 800 ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತವೆ. 'ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಶೇ50ಕ್ಕಿಂತ ಹೆಚ್ಚು ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದ ರೋಗಲಕ್ಷಣದೊಂದಿಗೆ ಬರುತ್ತಿದ್ದಾರೆ. ಇದು ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಆರಂಭಿಕ ಹಂತದಲ್ಲಿ ಪತ್ತೆಯಾದಲ್ಲಿ ಆ ಕ್ಯಾನ್ಸರ್ ಅನ್ನು ಗುಣಪಡಿಸುವ ಅವಕಾಶವು ಶೇ 90ರಷ್ಟಿರುತ್ತದೆ. ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿ, ಭಾರತದಲ್ಲಿ ಸ್ತನ ಕ್ಯಾನ್ಸರ್‌ನಿಂದ ಬದುಕುಳಿಯುವ ಪ್ರಮಾಣವು ಕಡಿಮೆಯಾಗಿದೆ. ಅಮೆರಿಕ (89%), ಬ್ರಿಟನ್ (82%)ಕ್ಕೆ ಹೋಲಿಸಿದರೆ, ಐದು ವರ್ಷಗಳಲ್ಲಿ ಒಟ್ಟಾರೆ ಕ್ಯಾನ್ಸರ್‌ಗೆ ತುತ್ತಾಗಿ ಬದುಕುಳಿಯುವ ಪ್ರಮಾಣವು ಶೇ 65-70ರಷ್ಟಿದೆ' ಎಂದು ಅವರು ಹೇಳಿದ್ದಾರೆ.

ಅತಿ ಬೇಗನೇ ಋತುಸ್ರಾವ, ತಡವಾದ ಋತುಬಂಧ, ಸಂತಾನೋತ್ಪತ್ತಿ ಅಂಶಗಳು, ಗರ್ಭನಿರೋಧಕ ಬಳಕೆ, ಹಾರ್ಮೋನು ಬದಲಾವಣೆ ಚಿಕಿತ್ಸೆ, ಮದ್ಯ ಸೇವನೆ, ಬೊಜ್ಜು, ತೂಕ ಹೆಚ್ಚಾಗುವುದು ಹಾಗೂ ಕೊಬ್ಬಿನ ಅಂಶ ಸ್ತನಕ್ಯಾನ್ಸರ್‌ ತರಬಲ್ಲ ಅಪಾಯಕಾರಿ ಅಂಶಗಳಾಗಿವೆ. ವಯಸ್ಸು, ಎತ್ತರ ಹಾಗೂ ಕಾಯಿಲೆಯ ಇತಿಹಾಸವನ್ನು ಮಾರ್ಪಡಿಸಲು ಸಾಧ್ಯವಿಲ್ಲ. ಸುಮಾರು 5-10% ಸ್ತನ ಕ್ಯಾನ್ಸರ್ ಪ್ರಕರಣಗಳು ಆನುವಂಶಿಕವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

 Breast Cancer Cases Rising In Bengaluru

BRCA1 ಅಥವಾ BRCA2ನಲ್ಲಿ ಆನುವಂಶಿಕ ರೂಪಾಂತರಗಳಂಥ ಅಪಾಯಕಾರಿ ಅಂಶಗಳು ಸ್ತನ ಕ್ಯಾನ್ಸರ್‌ಗೆ ಸಾಮಾನ್ಯ ಕಾರಣವಾಗಿದೆ (40-80% ಹೆಚ್ಚಿನ ಅಪಾಯವಿದೆ). ಬೊಜ್ಜು, ದೇಹದ ತೂಕದಲ್ಲಿ ಬದಲಾವಣೆ, ಗರ್ಭಧಾರಣೆ ಸಮಯದಲ್ಲಿನ ವಯಸ್ಸು ಕೂಡ ಇತರೆ ಅಂಶಗಳಾಗಿವೆ.

ಕರ್ನಾಟಕದಲ್ಲಿ ಕ್ಯಾನ್ಸರ್
78,384 ಹೊಸ ಕ್ಯಾನ್ಸರ್ ಪ್ರಕರಣಗಳು
1,74,000 ಪ್ರಚಲಿತ ಕ್ಯಾನ್ಸರ್ ಪ್ರಕರಣಗಳು
43,640 ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳು
9,837 ಸ್ತನ ಕ್ಯಾನ್ಸರ್ ಪ್ರಕರಣಗಳು (ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳಲ್ಲಿ 22%)
26,560 ಪ್ರಚಲಿತ ಸ್ತನ ಕ್ಯಾನ್ಸರ್ ಪ್ರಕರಣಗಳು

ಬೆಂಗಳೂರು (ಜನಸಂಖ್ಯಾ ಆಧರಿತ ಕ್ಯಾನ್ಸರ್)
ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳು-6431
ಸ್ತನ ಕ್ಯಾನ್ಸರ್ ಪ್ರಕರಣಗಳು 1688 (ಮಹಿಳೆಯರ ಒಟ್ಟಾರೆ ಪ್ರಕರಣಗಳಲ್ಲಿ 26%)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+