Breaking: ಜಯದೇವ ನಿರ್ದೇಶಕ ಸಿ.ಎನ್. ಮಂಜುನಾಥ್ ಸೇವಾ ಅವಧಿ ವಿಸ್ತರಿಸಿದ ಸರ್ಕಾರ
ಬೆಂಗಳೂರು ಜುಲೈ.12: ನಿವೃತ್ತಿಯಾಗಬೇಕಿದ್ದ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಈ ಕುರಿತು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದಾರೆ. ನಗರದ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವೆ ನಾಳೆ (ಜುಲೈ 19)ಮಂಗಳವಾರಕ್ಕೆ ಮುಗಿಯಬೇಕಿತ್ತು.

ಆದರೆ ಡಾ.ಸಿ.ಎನ್. ಮಂಜುನಾಥ್ ಅವರನ್ನೆ ಸೇವೆಯಲ್ಲಿ ಮುಂದುವರಿಸುವಂತೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಹಲವಾರು ಗಣ್ಯರು ಸರ್ಕಾರದ ಮೇಲೆ ಒತ್ತಡ ತಂದಿದ್ದರು ಎಂದು ತಿಳಿದು ಬಂದಿದೆ.

ಅಲ್ಲದೇ ಕೋವಿಡ್ ಕಾಲದಲ್ಲಿ ಸಿ.ಎನ್.ಮಂಜುನಾಥ್ ಅವರ ಸೇವೆ ಪರಿಗಣಿಸಿದ ರಾಜ್ಯ ಸರ್ಕಾರ ಅವರ ಸೇವಾ ಅವಧಿಯನ್ನು ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಿ ನಿವೃತ್ತಿಗೂ ಒಂದು ಮುನ್ನವೇ ಘೋಷಿಸಿದೆ. ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುವುದು ಒಂದೇ ಬಾಕಿ ಇದೆ.ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿಯೂ ಸಹ ಡಾ.ಸಿ ಎನ್ ಮಂಜುನಾಥ್ ಅವರ ಸೇವಾ ಅವಧಿ ವಿಸ್ತರಿಸಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಅವರು ಸಹ ಒಂದು ವರ್ಷ ಅವರ ಸೇವಾವಧಿ ವಿಸ್ತರಿಸಿದ್ದಾರೆ.
ಮಂಜುನಾಥ್ ಅವರ ಕಾರ್ಯವೈಖರಿ, ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ವೈದ್ಯರನ್ನು ನಡೆಸಿಕೊಳ್ಳುವ ರೀತಿ, ರೋಗಿಗಳಿಗೆ ನೀಡುತ್ತಿದ್ದ ಅವರ ಸ್ಪಂದನೆ ಎಲ್ಲಿರಗೂ ಮೆಚ್ಚುಗೆಯಾಗಿತ್ತು. ಕೋವಿಡ್ ಅಲೆ ಕುರಿತು ಅವರ ಎಚ್ಚರಿಕೆ ಸಂದೇಶಗಳು ಸತ್ಯದಿಂದ ಕೂಡಿದ್ದವು.
Recommended Video
ಎಲ್ಲಿಕ್ಕಿಂತ ಮಿಗಿಲಾಗಿ ಅವರ ಮಾನವೀಯತೆ ಗುಣ, ಸರಳ ನಿಜಕ್ಕೂ ಮೆಚ್ಚುವಂತದ್ದು. ಕಡಿಮೆ ವೆಚ್ಚದಲ್ಲಿ ಬಡವರಿಗೆ ಕೆಲವೊಮ್ಮೆ ಹಣವಿಲ್ಲದಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ಉದಾಹರಣೆ ಸಾಕಷ್ಟಿವೆ.
ಈ ಎಲ್ಲ ಕಾರಣಗಳಿಂದ ಅವರನ್ನು ಪುನಃ ಜಯದೇವ ಹೃದ್ರೋಗ ಆಸ್ಪತ್ರೆ ಸೇವೆಯಲ್ಲಿ ಒಂದು ವರ್ಷ ಮುಂದುವರಿಯುವಂತೆ ರಾಜ್ಯ ಸರ್ಕಾರ ಘೋಷಿಸಿದೆ ಎಂದು ತಿಳಿದು ಬಂದಿದೆ.












Click it and Unblock the Notifications