Brand Bengaluru: ಬಿಬಿಎಂಪಿ ಬಜೆಟ್‌ನಲ್ಲಿ "ಬ್ರಾಂಡ್ ಬೆಂಗಳೂರು" ಯೋಜನೆಗಳಿಗೆ ಮೀಸಲಿಟ್ಟ ಹಣ ಎಷ್ಟು ಸಾವಿರ ಕೋಟಿ?
ಬೆಂಗಳೂರು, ಫೆಬ್ರವರಿ, 29: ಇಂದು (ಫೆಬ್ರವರಿ 29) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2024-25ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಹಾಗಾದರೆ ಈ ಬಜೆಟ್‌ನ ಗಾತ್ರ ಎಷ್ಟು, ಇದರಲ್ಲಿ ಬ್ರಾಂಡ್ ಬೆಂಗಳೂರು ಯೋಜನೆಗಳಿಗೆ ಎಷ್ಟು ಹಣವನ್ನು ಮೀಸಲಿಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಿಬಿಎಂಪಿ ಅಧಿಕಾರಿಗಳು 12,371.63 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಬಿಬಿಎಂಪಿ ಬಜೆಟ್‌ನಲ್ಲಿ ಬ್ರಾಂಡ್ ಬೆಂಗಳೂರು ಯೋಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಹೊಸ ಮಾರ್ಗದರ್ಶಿ ಮೌಲ್ಯಾಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ. ಚುನಾಯಿತ ಕೌನ್ಸಿಲ್ ಅನುಪಸ್ಥಿತಿಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮಂಡಿಸುತ್ತಿರ ಇದು ನಾಲ್ಕನೇ ವರ್ಷದ ಬಜೆಟ್ ಆಗಿದೆ.

ಬ್ರ್ಯಾಂಡ್ ಬೆಂಗಳೂರಿಗೆ ಮೀಸಲಿಟ್ಟ ಹಣ ಎಷ್ಟು?: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ "ಬ್ರಾಂಡ್ ಬೆಂಗಳೂರು" ಯೋಜನೆಗೆ ಬಿಬಿಎಂಪಿ ಪ್ರಾಮುಖ್ಯತೆ ನೀಡಿದೆ. ಬ್ರಾಂಡ್ ಬೆಂಗಳೂರು ಪರಿಕಲ್ಪನೆಯನ್ನು ವಿಭಾಗಗಳಾಗಿ ವಿಂಗಡಣೆ ಮಾಡಿದೆ ಮತ್ತು ಈ ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ಬ್ರಾಂಡ್ ಬೆಂಗಳೂರು ಯೋಜನೆಗೆ ಒಟ್ಟು 1,580 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ.
ಬ್ರಾಂಡ್ ಬೆಂಗಳೂರಿನ ವಿಭಾಗಗಳಿವು
* ಸುಗಮ ಸಂಚಾರ, ಬೆಂಗಳೂರು
* ಸ್ವಚ್ಛ ಬೆಂಗಳೂರು
* ಹಸಿರು ಬೆಂಗಳೂರು
* ಆರೋಗ್ಯಕರ ಬೆಂಗಳೂರು
* ಶಿಕ್ಷಣ ಬೆಂಗಳೂರು
* ಟೆಕ್ ಬೆಂಗಳೂರು
* ವಿಬ್ರಾಂತ್ ಬೆಂಗಳೂರು
* ಜಲ ಭದ್ರತೆ ಬೆಂಗಳೂರು
ದೀರ್ಘಕಾಲೀನ ಪರಿಹಾರವನ್ನು ಕಂಡುಹಿಡಿಯಲು, ಬೆಂಗಳೂರು ನಗರ ಸಮಗ್ರ ಚಲನಶೀಲತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಬಜೆಟ್ ಹೇಳುತ್ತದೆ. ಬಿಸಿಸಿಎಂಪಿಗಾಗಿ, ನಗರ ಸುರಂಗ ಯೋಜನೆ ಸೇರಿದಂತೆ ನಗರದ ವಿವಿಧ ರಸ್ತೆ ಯೋಜನೆಗಳ ವಿವರವಾದ ಯೋಜನಾ ವರದಿಗಳನ್ನು ಸಲ್ಲಿಸಲು ತಜ್ಞರ ಸಲಹಾ ಗುಂಪನ್ನು ನೇಮಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ 2 ಸ್ಥಳಗಳಲ್ಲಿ ಸುರಂಗಗಳನ್ನು ನಿರ್ಮಿಸುವ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 200 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ. ಇನ್ನು ದಟ್ಟಣೆಯನ್ನು ಕಡಿಮೆ ಮಾಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ತಿಳಿಸಿದೆ.
ಬಳ್ಳಾರಿ ರಸ್ತೆಯಿಂದ ಬೇಗೂರು ಮೂಲಕ ಸಾದಹಳ್ಳಿ ಗೇಟ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ ಹಾಗೂ ಸಾತನೂರು ಮೀಸಗಾನಹಳ್ಳಿಯಿಂದ ಮತ್ತೊಂದು ರಸ್ತೆ ನಿರ್ಮಿಸಲು ಟಿಡಿಆರ್ ಆಧಾರದ ಮೇಲೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.
ಇನ್ನು ಲಘು ವಾಹನ ಸಂಚಾರಕ್ಕೆ ರಸ್ತೆ ಪಥಗಳು ಮತ್ತು ಮಳೆನೀರು ಚರಂಡಿಯ ಎರಡೂ ಬದಿಗಳಲ್ಲಿ ಸೈಕಲ್ ಪಥಗಳನ್ನು ನಿರ್ಮಿಸಲು ಮೂರು ವರ್ಷಗಳಲ್ಲಿ 600 ಕೋಟಿ ರೂಪಾಯಿ ಹಾಗೂ ಸುಮಾರು 145 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆಗಳನ್ನು 2 ವರ್ಷಗಳ ಅವಧಿಯಲ್ಲಿ ಜಿಒಕೆ ಅನುದಾನ 800 ಕೋಟಿ ರೂಪಾಯಿಗಳ ಅನುದಾನ ಮತ್ತು ಬಿಬಿಎಂಪಿಯ ಆಂತರಿಕ ಸಂಪನ್ಮೂಲ 900 ಕೋಟಿ ರೂಪಾಯಿಗಳ 300 ಕೋಟಿ ರೂಪಾಯಿಗಳೊಂದಿಗೆ ಕೈಗೊಳ್ಳಲಾಗುವುದು ಎಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications