Bengaluru Flood: 'ಬ್ರ್ಯಾಂಡ್ ಬೆಂಗಳೂರು' ಹೆಸರು ಬದಲಿಸಿದ ಮಳೆ! ವ್ಯಾಪಕ ಟೀಕೆ: ಹವಾಮಾನ ವರದಿ

ಬೆಂಗಳೂರು, ಮಾರ್ಚ್ 23: ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಶನಿವಾರ ಸುರಿದ ಕೆಲವೇ ನಿಮಿಗಳ ಮಳೆಗೆ ರಸ್ತೆಗಳು ಜಲಾವೃತ್ತಗೊಂಡವು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಸಂಚಾರ ಅಸ್ತವ್ಯವಸ್ತವಾಯಿತು. ನಗರದ ಈ ನಿರ್ವಹಣೆಗೆ ಆಕ್ರೋಶ ವ್ಯಕ್ತವಾಗಿದೆ, ಇದು 'ಬ್ರ್ಯಾಂಡ್ ಬೆಂಗಳೂರು' (Brand Bengaluru) ಅಲ್ಲ ಇದು 'ಪ್ರವಾಹ ಬೆಂಗಳೂರು' (Flood Benglauru) ಎಂದು ಲೇವಡಿ ಮಾಡಲಾಗಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತವನ್ನು ಬಿಜೆಪಿ ಟೀಕಿಸಿದೆ.

ಶನಿವಾರ ಬೆಂಗಳೂರಲ್ಲಿ ಸುರಿದ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾದವು. ರಸ್ತೆ ಮೇಲೆ ನಿಂತಿದ್ದ ಮೊಣಕಾಲುದ್ದ ಕೊಳಚೆ ನೀರು ಮಿಶ್ರಿತ ಮಳೆ ನೀರಿನಲ್ಲೇ ವಾಹನಗಳು, ಆಟೋ, ಬಸ್‌ಗಳು, ಡೆಲಿವರಿ ಬಾಯ್‌ಗಳು ಅದರಲ್ಲಿಯೇ ಸಂಚರಿಸಿದ್ದು ಕಂಡು ಬಂತು. ನಗರದ ಪ್ರಮುಖ ರಸ್ತೆಗಳೇ ಜಲಾವೃತಗೊಂಡಿದ್ದನ್ನು ಉಲ್ಲೇಖಿಸಿ ಬಿಜೆಪಿಯು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

Brand Bengaluru has Turned to Flood Bengaluru Due to Only One Rain BJP Criticises

'ಬ್ರ್ಯಾಂಡ್ ಬೆಂಗಳೂರು' ಹೆಸರಿನಡಿ ಸರ್ಕಾರ ನಗರವನ್ನು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದೆ. ಇಲ್ಲಿ ನೋಡಿದರೆ ಪ್ರವಾಹ ಬೆಂಗಳೂರು ಸೃಷ್ಟಿಯಾಗಿದೆ. ಜನರು ಸಂಚರಿಸಲು ಜಲಂತರ್ಗಾಮಿ ನೌಕೆ ಹಾಗೂ ಜೆಟ್ ಸ್ಕೀಯಿಂಗ್‌ಗಳು ಬೇಕಾಗುತ್ತವೆ ಎಂದು ಬಿಜೆಪಿ ಎಕ್ಸ್ ಖಾತೆ ಮೂಲಕ ವ್ಯಂಗ್ಯವಾಡಿದೆ. ಹತ್ತೇ ಹತ್ತು ನಿಮಿಷ ಬೆಂಗಳೂರಿನಲ್ಲಿ ಮಳೆ ಬಂದರೆ ಆಗುವ ಸಮಸ್ಯೆಗಳು, ವಸ್ತು ಸ್ಥಿತಿಗಳನ್ನು ಅಣುಕಿಸಿದೆ.

ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿಕೆ ಶಿವಕುಮಾರ್ ಅವರು, ಈ ಹೊಸ ನೀರಿನ ಮಾರ್ಗಗಳಲ್ಲಿ ವಾಹನಗಳ ಸಂಚರಿಸಲು ಸಂಚಾರ ಸಿಗ್ನಲ್ ಗಳ ಬದಲಾಗಿ ಲೈಟ್‌ಹೌಸ್‌ಳಾಗಿ ಬದಲಾಯಿಸುವ ಸಮಯ ಬಂದಿದೆ. ಏಕೆಂದರೆ ಅವರುಗಳೇ ಸಂಚಾರಕ್ಕೆ ನ್ಯಾವಿಗೇಟ್ ಮಾಡಲಿವೆ ಎಂದು ಬಿಜೆಪಿ ಸರ್ಕಾರದ ಕಾಲೆಳೆದಿದೆ.

Brand Bengaluru has Turned to Flood Bengaluru Due to Only One Rain BJP Criticises

ಬೆಂಗಳೂರಿನ ಮಳೆ ಸಮಸ್ಯೆಗೆ ಮುಕ್ತಿ ಯಾವಾಗ?

ಪ್ರತಿ ಭಾರಿ ಮಳೆ ಬಂದಾಗ ತಗ್ಗು ಪ್ರದೇಶಗಳು, ಪ್ರಮುಖ ಜಂಕ್ಷನ್, ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ, ಒತ್ತುವರಿ ಜಾಗ, ರಾಜಕಾಲುವೆ, ವಾಟರ್‌ಲಾಗಿಂಗ್ ನಂತಹ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಳೆಗೆ ಒಳಚರಂಡಿಗಳು ಉಕ್ಕಿ ಹರಿದು ಜನ ಸಂಚಾರಕ್ಕೆ, ನಿವಾಸಕ್ಕೆ ತೊಂದರೆ ಉಂಟು ಮಾಡುತ್ತವೆ. ಬೆಂಗಳೂರಿನ ಈ ಸಮಸ್ಯೆ ಎಂದಿಗೂ ಬದಲಾಗದು ಎಂಬ ಮಾತು ಸಹ ಇದೆ.

ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಮಾತ್ರವಲ್ಲದೇ ಯಾವುದೇ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೂ ಬೆಂಗಳೂರಿನಲ್ಲಿ ಪ್ರವಾಹ ಸಮಸ್ಯೆ, ಸಂಚಾರ ದಟ್ಟಣೆ ಸಮಸ್ಯೆ ತಾತ್ಕಾಲಿಕವಾಗಿ ನಿಯಂತ್ರಿಸಬಹುದೇ ಹೊರತು, ಕಡಿಮೆ ಮಾಡಲು ಸಾಧ್ಯವಿಲ್ಲ. ಆ ಮಟ್ಟಿನ ಸಮಸ್ಯೆಗಳು ನಗರದಲ್ಲಿ ಜೀವಂತವಾಗಿವೆ ಎಂಬುದು ವಾಸ್ತವ ಸತ್ಯ.

ಶನಿವಾರ ಸಂಜೆ ನಂತರ ಬೆಂಗಳೂರಿನ ಚೌಡೇಶ್ವರಿ, ಜಕ್ಕೂರು, ಯಲಹಂಕ, ಹಗದೂರು, ವಿದ್ಯಾರಣಪುರ, ಬಿಳೆಕಳಿ, ಬಿಟಿಎಂ ಬಡಾವಣೆ ಸೇರಿದಂತೆ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಈ ವರ್ಷ ನಗರದಲ್ಲಿ ಸುರಿದ ಅತ್ಯಧಿಕ ಮಳೆ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+