ಬೆಂಗಳೂರು: ಬಿಬಿಎಂ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಬೆಂಗಳೂರು, ಜೂ.17: ಬಿಬಿಎಂ ವಿದ್ಯಾರ್ಥಿನಿಯನ್ನು ಇಬ್ಬರು ಯುವಕರು ಕಾರಿನಲ್ಲಿ ನಗರದ ಹೊರವಲಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
ನಗರದ ಖಾಸಗಿ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ಮತ್ತು ರಾಜು ವಿರುದ್ಧ ದೂರು ನೀಡಿದ್ದಾಳೆ. ಸೋಮವಾರ ಬೆಳಗ್ಗೆ 4 ಗಂಟೆಗೆ ಕಾರಿನಲ್ಲಿ ಕನಕಪುರ ರಸ್ತೆಗೆ ಕರೆದುಕೊಂಡು ಹೋಗಿ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಫೇಸ್‌ಬುಕ್‌ನಲ್ಲಿ ಪರಿಚಯ:
ಬಿಬಿಎಂ ವಿದ್ಯಾರ್ಥಿನಿ ಮತ್ತು ಅಭಿಷೇಕ್ ನಡುವೆ 10 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಭಾನುವಾರ ರಾತ್ರಿ ಅಭಿಷೇಕ್ ಕಾರಿನಲ್ಲಿ ಪ್ರಯಾಣಿಸಲು ಯುವತಿಯನ್ನು ಆಹ್ವಾನಿಸಿದ್ದಾನೆ. ಅದರಂತೆ ಯುವತಿ ಕಾರಿನಲ್ಲಿ ಪ್ರಯಾಣಿಸಿದ್ದು ತಲಘಟ್ಟಪುರದಲ್ಲಿ ಅಭಿಷೇಕ್ ಮತ್ತು ಆತನ ಸ್ನೇಹಿತ ರಾಜು ಸೇರಿ ರೇಪ್ ಮಾಡಿದ್ದಾರೆ. ಬಳಿಕ ಬ್ಯಾಟರಾಯನಪುರಕ್ಕೆ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.[ಬೆಂಗಳೂರು: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ]
ಯುವತಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪರಿಚಯದ ಸ್ನೇಹಿತರು ಆಗಿದ್ದರಿಂದ ಯುವತಿ ಕಾರಿನಲ್ಲಿ ಪ್ರಯಾಣ ಬೆಳಿಸಿದ್ದು, ಕೃತ್ಯ ನಡೆಯುವ ಸಂದರ್ಭದಲ್ಲಿ ಮೂವರು ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications