ಸರ್ಕಾರಿ ಐಟಿಐನಲ್ಲಿ ಬಾಷ್ ನಿಂದ ಕೌಶಲ್ಯ ಕೇಂದ್ರ ಆರಂಭ
ಬೆಂಗಳೂರು, ಮೇ 27: ಭಾರತೀಯ ಉದ್ಯಮಗಳು ವಿಕಸನಗೊಂಡಿವೆ; ಕಾರ್ಮಿಕರು ತಮ್ಮ ತಾಂತ್ರಿಕ ಜ್ಞಾನವನ್ನು ಸುಧಾರಣೆ ಮಾಡಿಕೊಳ್ಳಲು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಾಷ್ ಲಿಮಿಟೆಡ್ ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ) ನಲ್ಲಿ 'ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್' ಅನ್ನು ಆರಂಭಿಸುವ ಮೂಲಕ ಕಾರ್ಮಿಕರಿಗೆ ಬೆಂಬಲವಾಗಿ ನಿಲ್ಲಲು ಮುಂದಡಿ ಇಟ್ಟಿದೆ.
ಈ ಕೇಂದ್ರಕ್ಕೆ ಮಾಡೆಲ್-ಬ್ಲಾಕ್1 ಎಂದು ಹೆಸರಿಡಲಾಗಿದ್ದು, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ & ಉದ್ಯಮಶೀಲತ್ವ ಇಲಾಖೆಯ ಡೈರೆಕ್ಟರ್ ಜನರಲ್ ಆಫ್ ಟ್ರೇನಿಂಗ್(ಡಿಜಿಟಿ), ಅಡಿಶನಲ್ ಸೆಕ್ರೆಟರಿ ರಾಜೇಶ್ ಅಗರ್ ವಾಲ್ ಮತ್ತು ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು ಉದ್ಘಾಟಿಸಿದರು.
ಈ ಕೇಂದ್ರವು ಪ್ರಸ್ತುತದ ಮತ್ತು ಭವಿಷ್ಯದ ಐ.ಟಿ.ಐ ವಿದ್ಯಾರ್ಥಿಗಳಿಗೆ ಕೈಗಾರಿಕೆ ಸಂಬಂಧಿತ ಕೌಶಲ್ಯಗಳನ್ನು ಕಲಿಸಿಕೊಡುವ ಭಾರತದ ಅತಿದೊಡ್ಡ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಒಂದು ಭಾಗವಾಗಲಿದೆ.
ಬಾಷ್‍ನ ಈ ಮಾಡೆಲ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಮೆಕ್ಯಾಟ್ರೊನಿಕಲ್ ಲ್ಯಾಬ್, ಮಾಡರ್ನ್ ಮ್ಯಾನ್ಯುಫ್ಯಾಕ್ಚರಿಂಗ್ ಲ್ಯಾಬ್, ಮಾಡರ್ನ್ ಕಾರ್ಪೆಂಟರಿ ಲ್ಯಾಬ್ ಮತ್ತು ಮಾಹಿತಿ & ಸಂಹವನ ತಂತ್ರಜ್ಞಾನ (ಐಸಿಟಿ) ಲ್ಯಾಬ್ ಸೇರಿದಂತೆ ಏಳು ಕಲಿಕಾ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ಸ್ಯಾಮ್‍ಸಂಗ್‍ನೊಂದಿಗಿನ ಸಹಭಾಗಿತ್ವದ ಹ್ಯಾಂಡ್-ಹೆಲ್ಡ್ ಫೋನ್ ಮತ್ತು ಆಡಿಯೋ-ವಿಶ್ಯುವಲ್ ಲ್ಯಾಬ್ & ಹೋಂ ಅಪ್ಲೈಯನ್ಸಸ್ ಲ್ಯಾಬ್ ಸಹ ಇರಲಿದೆ.

ಡಿಜಿಟಿ ಅಡಿಷನಲ್ ಸೆಕ್ರೆಟರಿ ರಾಜೇಶ್
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜೇಶ್ ಅಗರ್ವಾಲ್ ಅವರು, "ಭಾರತಾದ್ಯಂತ ಐಟಿಐಗಳಲ್ಲಿ ಆಗುತ್ತಿರುವ ರೂಪಾಂತರಗಳನ್ನು ನೋಡಲು ನಮಗೆ ಸಂತಸವೆನಿಸುತ್ತಿದೆ. ಈ ಸಂಸ್ಥೆಗಳ ಪ್ರಮುಖ ಅಂಶವೆಂದರೆ ಕೈಗಾರಿಕೆಗಳಿಗೆ ಸಂಪರ್ಕ ಹೊಂದಿರುವುದಾಗಿದೆ ಮತ್ತು ಇದಕ್ಕೆ ಈ ಐಟಿಐ ಸಾಕ್ಷಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಮುಂಬರುವ ದಿನಗಳಲ್ಲಿ ಇಂತಹ ಅಭಿವೃದ್ಧಿ ಕೇಂದ್ರಗಳಿಗೆ ಸಾಕಷ್ಟು ಹೂಡಿಕೆ ಮತ್ತು ಬೆಂಬಲ ದೊರೆಯಲಿದೆ ಎಂಬ ವಿಶ್ವಾಸ ನಮಗಿದೆ'' ಎಂದರು.

ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಭಟ್ಟಾಚಾರ್ಯ
ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಭಟ್ಟಾಚಾರ್ಯ ಅವರು ಮಾತನಾಡಿ, "ಕೈಗಾರಿಕಾ ಕ್ಷೇತ್ರದಲ್ಲಿ ಆಗುತ್ತಿರುವ ವಿಕಸನವು ಕೇವಲ ಪ್ರಸ್ತುತದ್ದಲ್ಲದೇ ಭವಿಷ್ಯದ ಟ್ರೆಂಡ್‍ಗಳನ್ನೂ ಅಳವಡಿಸಿಕೊಳ್ಳುವ ಮೂಲಕ ಕಾರ್ಮಿಕರನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಐಟಿಐ ಇಂತಹ ಅಗತ್ಯತೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಾಷ್‍ನ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಅನ್ನು ಆರಂಭಿಸಲಾಗಿದ್ದು, ಈ ಪ್ರಯತ್ನದಲ್ಲಿ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ದೇಶದ ಭವಿಷ್ಯದ ಕಾರ್ಮಿಕ ಶಕ್ತಿಯನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ನೆರವಾಗುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ'' ಎಂದು ತಿಳಿಸಿದರು.

ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಹೊಸ ಸೇರ್ಪಡೆ
ಬಾಷ್‍ನ ಕೌಶಲ್ಯಾಭಿವೃದ್ಧಿ ಪ್ರಯತ್ನಕ್ಕೆ ಈ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಹೊಸ ಸೇರ್ಪಡೆಯಾಗಿದೆ. ಇದರ ಮೂಲಕ ಕಾರ್ಮಿಕ ಶಕ್ತಿಯನ್ನು ಸುಧಾರಣೆ ಮಾಡಿ ಕೈಗಾರಿಕೆಗೆ ಬೆಂಬಲ ನೀಡಿದಂತಾಗುತ್ತದೆ. ಈ ಉದ್ಘಾಟನಾ ಸಮಾರಂಭದ ನಂತರ ಪಾಲ್ಗೊಂಡಿದ್ದ ಗಣ್ಯರು ತರಬೇತಿ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಾಷ್ ಲಿಮಿಟೆಡ್‍ಗೆ ಶಾಲೆಯಿಂದ ಹೊರಗುಳಿದ ಯುವಪೀಳಿಗೆಗೆ ಉದ್ಯೋಗ ಕಲ್ಪಿಸುವ ತುಡಿತವಿದೆ. ಈ ಹಿನ್ನೆಲೆಯಲ್ಲಿ ಬ್ರಿಡ್ಜ್ ಎಂಬ ಕಾರ್ಯಕ್ರಮದ ಮೂಲಕ ಇಂತಹ ಯುವ ಸಮುದಾಯಕ್ಕೆ ಸೂಕ್ತರೀತಿಯ ಅಲ್ಪಾವಧಿಯ ತರಬೇತಿ ಕೋರ್ಸ್‍ಗಳನ್ನು ನೀಡಿ ಅವರನ್ನು ಉದ್ಯೋಗವಂತರನ್ನಾಗಿ ಮಾಡುತ್ತಿದೆ.

1,396 ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ
ಭಾರತ ಸರ್ಕಾರದೊಂದಿಗೆ ಬಾಷ್‍ನ ಸಹಭಾಗಿತ್ವದಡಿ 1,396 ಐಟಿಐಗಳನ್ನು ಮೇಲ್ದರ್ಜೆಗೇರಿಸುವ ಅತಿದೊಡ್ಡ ಯೋಜನೆಯಾಗಿದೆ. ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಕಾರ್ಯಕ್ರಮವಾಗಿದ್ದು, ಕರ್ನಾಟಕದಲ್ಲಿ 28 ಐಟಿಐಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ 10 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. ಈ ಕಾರ್ಯಕ್ರಮದಡಿ "ಮಾದರಿ ಐಟಿಐ"ಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications