ಸೆ.22ರಂದು ಅಪ್ಪ ಮಗನ ಪುಸ್ತಕ ಬಿಡುಗಡೆ

ಹಲವಾರು ಲೇಖಕರು ತಮ್ಮ ಕೃತಿಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಆದರೆ, ಸೆ.22ರಂದು ಭಾನುವಾರ ಬೆಂಗಳೂರಿನಲ್ಲಿ ವಿಶೇಷವಾದ ಪುಸ್ತಕ ಬಿಡುಗಡೆ ಸಮಾರಂಭ ನಡೆಯುತ್ತಿದೆ. ಅದು, ತಂದೆ-ಮಗನ ಪುಸ್ತಕಗಳು (ಟಿ ಎಸ್ ಗೋಪಾಲ್ - ಟಿ ಜಿ ಶ್ರೀನಿಧಿ) ಒಂದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವುದು! ಇಂತಹ ಪ್ರಸಂಗಗಳು ನಮ್ಮಲ್ಲಿ ಎಷ್ಟಿವಿವೆಯೋ ತಿಳಿಯದು, ಕಡಿಮೆ ಎಂಬುದಂತೂ ಸತ್ಯ.
ಸೆಪ್ಟೆಂಬರ್ 22ರ ಭಾನುವಾರ ಬೆಳಿಗ್ಗೆ ಟಿ.ಜಿ. ಶ್ರೀನಿಧಿ ಅವರ ಹತ್ತನೆಯ ಪುಸ್ತಕ 'ಕ್ಲಿಕ್ ಮಾಡಿ ನೋಡಿ!' ಬಿಡುಗಡೆಯಾಗುತ್ತಿದೆ. ಛಾಯಾಗ್ರಹಣದ ಸ್ವರೂಪವನ್ನೇ ಬದಲಿಸಿರುವ ಡಿಜಿಟಲ್ ಕ್ಯಾಮೆರಾಗಳು ನಮ್ಮ ಮುಂದಿಡುವ ಸಾಧ್ಯತೆಗಳಲ್ಲಿ ಕೆಲವನ್ನು ಪರಿಚಯಿಸುವ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿದೆ.
ಪುಸ್ತಕ ಬಿಡುಗಡೆ : ಸೆಪ್ಟೆಂಬರ್ 22, 2013ರ ಭಾನುವಾರ
ಸಮಯ : ಬೆಳಿಗ್ಗೆ 10 ಗಂಟೆಗೆ [ಉಪಾಹಾರ ಬೆಳಿಗ್ಗೆ 9:30ಕ್ಕೆ]
ಸ್ಥಳ : ನಯನ ಸಭಾಂಗಣ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು - 2
ಇದೇ ಸಮಾರಂಭದಲ್ಲಿ ನವಕರ್ನಾಟಕದ ಇನ್ನೂ ಐದು ಕೃತಿಗಳು ಲೋಕಾರ್ಪಣೆಯಾಗಲಿವೆ. ಟಿ. ಎಸ್. ಗೋಪಾಲ್ ಅವರ 'ಕಾಡು ಕಲಿಸುವ ಪಾಠ', ಟಿ. ಆರ್. ಅನಂತರಾಮುರವರ 'ಜ್ವಾಲಾಮುಖಿ' ಹಾಗೂ ಡಾ. ಬಿ. ಎಸ್. ಶೈಲಜಾ ಅವರ 'ಧೂಮಕೇತು' ಕೃತಿಗಳು ಈ ಸಾಲಿನಲ್ಲಿವೆ. ನಾಗೇಶ ಹೆಗಡೆಯವರು ಕೃತಿಗಳನ್ನು ಅನಾವರಣ ಮಾಡಲಿದ್ದಾರೆ. 'ಕಾಡಿನೊಳಗೊಂದು ಜೀವ' ಕೃತಿಯ ಲೇಖಕ ಕೆ. ಎಂ. ಚಿಣ್ಣಪ್ಪನವರು ಅಂದಿನ ಮುಖ್ಯ ಅತಿಥಿ.
ಈ ಕಾರ್ಯಕ್ರಮದಲ್ಲಿ ಎಲ್ಲ ಪುಸ್ತಕ ಪ್ರೇಮಿಗಳು ದಯಮಾಡಿ ಭಾಗವಹಿಸಬೇಕೆನ್ನುವುದು ಟಿ.ಜಿ. ಶ್ರೀನಿಧಿ ಅವರ ಆತ್ಮೀಯ ಕೋರಿಕೆ. ತಪ್ಪದೆ ಬನ್ನಿ.












Click it and Unblock the Notifications