ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ವಾಹನ ಸವಾರರೇ ಎಚ್ಚರಿಕೆ! ವೇಗ ಮಿತಿ ಮೀರಿದರೆ ಬೀಳುತ್ತೆ ಕೇಸ್!

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೆದ್ದಾರಿಯಲ್ಲಿ ವೇಗವಾಗಿ ಹೋದರೆ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ರಾಮನಗರ ಪೊಲೀಸರು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಸ್ಪೀಡ್ ರಾಡಾರ್ ಗನ್ ಮೂಲಕ ವಾಹನಗಳ ವೇಗವನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಸೋಮವಾರದಿಂದಲೇ ರಾಮನಗರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ವೇಗ ಮಿತಿ ಮೀರಿ ಚಲಿಸುವ ವಾಹನಗಳ ಸವಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ವೇಗವಾಗಿ ಚಲಿಸಿದರೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Booking Cases for Speeding on Bengaluru-Mysore Expressway Utilizing Speed Radar Guns

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಿತಿ ಮೀರಿದ ವೇಗದಲ್ಲಿ ಚಲಿಸುವ ವಾಹನಗಳನ್ನು ಸ್ಪೀಡ್ ರಾಡಾರ್ ಬಳಸಿಕೊಂಡು ಪತ್ತೆ ಹಚ್ಚಲಾಗುತ್ತಿದ್ದು, ಪ್ರಕರಣ ದಾಖಲಿಸಲಾಗುತ್ತಿದೆ. ಈ ಕ್ರಮ ತೆಗೆದುಕೊಂಡಿರುವ ರಾಮನಗರ ಎಸ್‌ಪಿ ಮತ್ತು ಅವರ ತಂಡವನ್ನು ಶ್ಲಾಘಿಸುತ್ತೇನೆ. ಜೀವ ಉಳಿಸಲು ಸಂಚಾರ ನಿಯಮಗಳನ್ನು ಪಾಲಿಸಿ, ದಂಡದ ಹಣವನ್ನು ಉಳಿಸಲು ಅಲ್ಲ" ಎಂದು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.

ದುಬಾರಿ ಟೋಲ್ ಜೊತೆ, ಯಾಮಾರಿದ್ರೆ ಫೈನ್!

ಈಗಾಗಲೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದುಬಾರಿ ಟೋಲ್ ವಸೂಲಿ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಗಣಂಗೂರು ಬಳಿ ಎರಡನೇ ಟೋಲ್ ವಸೂಲಿ ಆರಂಭಿಸಿದ್ದು, ನೀವು ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಲು 320 ರೂಪಾಯಿ ಟೋಲ್ ದರ ಪಾವತಿಸಬೇಕಿದೆ. ಇದರ ಜೊತೆಗೆ ವೇಗಮಿತಿ ಮೀರಿ ವಾಹನ ಚಲಾಯಿಸಿದರೆ ಪ್ರಕರಣ ದಾಖಲಾಗುವ ಜೊತೆ ಅದಕ್ಕೂ ದಂಡ ಕಟ್ಟಬೇಕಾಗುತ್ತದೆ.

ಅಪಘಾತ ಪ್ರಮಾಣ ಕಡಿಮೆ ಮಾಡಲು ಕಸರತ್ತು

ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತಗಳ ಸಂಖ್ಯೆಯಿಂದ ಭಾರಿ ಟೀಕೆಗೆ ಒಳಗಾಗಿದೆ. ಜನವರಿಯಿಂದ ಈವರೆಗೆ ಈ ಹೆದ್ದಾರಿಯಲ್ಲಿ 500ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು 60ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಗ್ರಾಮಗಳ ಜನ ರಸ್ತೆ ದಾಟಲು ಅಂಡರ್ ಪಾಸ್ ನಿರ್ಮಾಣ ಮಾಡಿಲ್ಲ, ಕೆಲವು ಕಡೆ ಅಂಡರ್ ಪಾಸ್‌ಗಳನ್ನು ಹಳ್ಳಿಗಳಿಂದ ದೂರದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ರಸ್ತೆಗೆ ಹಾಕಿರುವ ಬೇಲಿಯನ್ನು ಮುರಿದು ಜನ ರಸ್ತೆ ದಾಟುತ್ತಿರುವುದು ಕೂಡ ಅಪಘಾತಗಳಿಗೆ ಕಾರಣವಾಗಿದೆ.

ಭಾರತದಲ್ಲಿ ಮಾತ್ರ ಇದೆಲ್ಲಾ ಸಾಧ್ಯ!

ಎಕ್ಸ್‌ಪ್ರೆಸ್‌ವೇನಲ್ಲಿ ಬ್ಯಾರಿಕೇಡ್ ಅಳವಡಿಸಿ, ವೇಗವಾಗಿ ಚಲಿಸುವ ವಾಹನಗಳಿಗೆ ದಂಡ ವಿಧಿಸುವ ಕ್ರಮಕ್ಕೆ ಟೀಕೆ ಕೂಡ ವ್ಯಕ್ತವಾಗಿದೆ. ವೇಗವಾಗಿ ಸಾಗಲು ಎಕ್ಸ್‌ಪ್ರೆಸ್‌ವೇ ಮಾಡಿ ನಂತರ ಬ್ಯಾರಿಕೇಡ್ ಅಳವಡಿಸಿ, ವೇಗವಾಗಿ ಚಲಿಸಿದರೆ ದಂಡ ಹಾಕುವುದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಟ್ವಿಟರ್ ಬಳಕೆದಾರರೊಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಮಾತ್ರವಲ್ಲದೆ, "ನಾನು ಇಂದು ಬೆಳಿಗ್ಗೆ ಈ ಹೆದ್ದಾರಿಯಲ್ಲಿ ಕನಿಷ್ಠ 6 ಸ್ಥಳಗಳಲ್ಲಿ ಜನ ರಸ್ತೆ ದಾಟುವುದನ್ನು ನೋಡಿದೆ. ಅವರು ಸುರಕ್ಷಿತವಾಗಿ ರಸ್ತೆ ದಾಟಲು ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿ" ಎಂದು ಅಲೋಕ್ ಕುಮಾರ್ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+