ಕವಿ ಡುಂಡಿರಾಜ್ ಗೆ ಅರವತ್ತರ ಸಂಭ್ರಮ, ಮೇ 7ಕ್ಕೆ ಅಭಿನಂದನೆ
ಕವಿ ಡುಂಡಿರಾಜ್ ಅವರಿಗೆ 60 ವರ್ಷ ತುಂಬಿದ ಸಂದರ್ಭಕ್ಕೆ ಮೇ 7ರಂದು ಸಂಜೆ 4.30ಕ್ಕೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಅಭಿನಂದನೆ ಹಾಗೂ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ
ಬೆಂಗಳೂರು, ಮೇ 2: ಹನಿಗವನಗಳು ಹಾಗೂ ಪತ್ರಿಕೆಗಳ ಅಂಕಣದಿಂದ ಜನಪ್ರಿಯರಾದ ಡುಂಡಿರಾಜ್ ಅವರಿಗೆ ಈಗ 60ನೇ ವಯಸ್ಸಿನ ಸಂತಸ. ಈ ಸಂದರ್ಭದಲ್ಲಿ ಉಪಾಸನಾ ಟ್ರಸ್ಟ್ ಹಾಗೂ ಎಚ್ ಡುಂಡಿರಾಜ್ ಅಭಿನಂದನಾ ಸಮಿತಿಯು ಮೇ 7ರಂದು ಸಂಜೆ 4.30ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿವೆ.
ಡುಂಡಿರಾಜ್ ಅವರ ಎರಡು ಪುಸ್ತಕಗಳ ಬಿಡುಗಡೆ, ಗೀತಗಾಯನ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕವಿ ಎಚ್ಎಸ್ ವೆಂಕಟೇಶ್ ಮೂರ್ತಿ ವಹಿಸಿದ್ದರೆ, ಡಾ.ಚಂದ್ರಶೇಖರ ಕಂಬಾರ ಪುಸ್ತಕಗಳ ಬಿಡುಗಡೆ ಮಾಡುವರು. ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿನಂದನಾ ಭಾಷಣ, ಬಿ.ಆರ್.ಲಕ್ಷ್ಮಣರಾವ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.[ಸಿಂಗಪುರದಲ್ಲಿ ಅನುರಣಿಸಿದ ಹಾಸ್ಯ, ಕಾವ್ಯ, ಗಾಯನ]

ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ನಾಗಚಂದ್ರಿಕಾ ಭಟ್, ಮೇಘನಾ ಭಟ್ ಹಾಗೂ ಉಪಾಸನಾ ವಿದ್ಯಾರ್ಥಿಗಳಿಂದ ಗೀತಗಾಯನ ನಡೆಯಲಿದೆ. ಸಂಜೆ 4.30ರಿಂದ 5ರವರೆಗೆ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿದೆ. 5ರಿಂದ 5.45ರವರೆಗೆ ಗೀತಗಾಯನ ನಡೆಯಲಿದೆ. ಸಂಜೆ 5.45ಕ್ಕೆ ಪುಸ್ತಕ ಲೋಕಾರ್ಪಣೆ ಹಾಗೂ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications