ಶಿಕ್ಷಣ, ಕಲೆ & ಕ್ರೀಡೆ ಜೊತೆಗೆ ಸಮಾಜ ನಿರ್ಮಾಣಕ್ಕೂ ಬದ್ಧರಾಗಿರಿ: ಶಾಸಕ ಸತೀಶ್ ರೆಡ್ಡಿ
ಯುವಕರು ಶಿಕ್ಷಣ, ಕಲೆ ಹಾಗೂ ಕ್ರೀಡೆಯ ಜೊತೆಗೆ ಸಮಾಜ ನಿರ್ಮಾಣಕ್ಕೂ ಬದ್ಧರಾಗಿರಬೇಕು ಎಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ಸಲಹೆ ನೀಡಿದರು. ಬೆಂಗಳೂರಿನ ಪ್ರತಿಷ್ಠಿತಿ ಎಚ್‌ಎಸ್‌ಆರ್ ಲೇಔಟ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ 2025-26ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡೆ ಮತ್ತು ಯುವ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿದರು.
ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಶೈಕ್ಷಣಿಕ ಸಾಧನೆ ಮಾಡಬೇಕು. ಸರ್ಕಾರಿ ಸಂಸ್ಥೆಗಳಲ್ಲಿ ಈಗ ಅತ್ಯುತ್ತಮವಾದ ಶಿಕ್ಷಣ ದೊರೆಯುತ್ತಿದ್ದು ಅದರ ಸದುಪಯೋಗ ಪಡೆಯಬೇಕು. ಬೆಂಗಳೂರು ನಗರದಲ್ಲಿ ಅತ್ಯುತ್ತಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳ ಪೈಕಿ ಎಚ್‌ಎಸ್‌ಆರ್ ಕಾಲೇಜು ಕೂಡ ಸೇರಿರುವುದು ಹೆಮ್ಮೆಯ ವಿಚಾರ. ಯುವಕರ ಶಕ್ತಿ, ಕಲೆ ಮತ್ತು ಕ್ರೀಡೆಯ ಮೆಲುಕು ಮಾತ್ರವಲ್ಲದೆ ಸಮಾಜ ನಿರ್ಮಾಣಕ್ಕೂ ಶಕ್ತಿಯುತ ಅಸ್ತ್ರ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಸಮಾಜಕ್ಕೆ ಮಾದರಿಯಾಗಬೇಕು ಎಂಬುದು ನನ್ನ ಹಾರೈಕೆ ಎಂದು ಶಾಸಕ ಸತೀಶ್ ರೆಡ್ಡಿ ಅವರು ಪ್ರತಿಪಾದಿಸಿದರು.

ಎಚ್‌ಎಸ್‌ಆರ್ ಬಡಾವಣೆಯ ಸರ್ಕಾರಿ ಕಾಲೇಜು
ಆಧುನಿಕ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದ್ದು, ತಂತ್ರಜ್ಞಾನ ಅಳವಡಿಸಿಕೊಂಡು ಈ ಸಮಯದಲ್ಲಿ ಶಿಕ್ಷಣ ಪಡೆಯುವ ಅಗತ್ಯತೆ ಇದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ, ಪ್ರಮುಖವಾಗಿ ನಮ್ಮ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಲ್ಲಾ ರೀತಿಯ ಸೌಲಭ್ಯ ಇದೆ. ವಿದ್ಯಾರ್ಥಿಗಳು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯ ಬಳಸಿಕೊಂಡು ತಮ್ಮ ಶಿಕ್ಷಣ ಪೂರೈಸಬೇಕು ಎಂದು ಶಾಸಕರು ಈ ವೇಳೆ ಸಲಹೆ ನೀಡಿದರು. ಎಚ್‌ಎಸ್‌ಆರ್ ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಉನ್ನತವಾದ ಕೆಲಸ ಪಡೆದಿದ್ದು, ಬೆಂಗಳೂರು ನಗರದಲ್ಲಿ ಈ ಕಾಲೇಜು ಉತ್ತಮ ಹೆಸರು ಪಡೆದಿದೆ.
ಕಾಲೇಜಿನ ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ
ಕಾರ್ಯಕ್ರಮ ಉದ್ಘಾಟನೆಯಲ್ಲಿ ನಗರಸಭಾ ಮಾಜಿ ಸದಸ್ಯರಾದ ಶ್ರೀನಿವಾಸ ರೆಡ್ಡಿ ಅವರು ಸೇರಿದಂತೆ, ಮುನಿರಾಜು, ಕಾಲೇಜು ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಎಚ್‌ಎಸ್‌ಆರ್ ಲೇಔಟ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಎಚ್‌ಎಸ್‌ಆರ್ ಬಡಾವಣೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಪ್ರೋತ್ಸಾಹವನ್ನ ನೀಡುತ್ತಾ ಬರುತ್ತಿದ್ದು, ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಈ ಮೂಲಕ ಬೆಂಬಲಿಸಲಾಗುತ್ತಿದೆ.












Click it and Unblock the Notifications