ಆಟೋದೊಳಗೆ ರಕ್ತಸಿಕ್ತ ಸ್ಥಿತಿಯಲ್ಲಿ ಚಾಲಕನ ಶವ ಪತ್ತೆ, ಕೊಲೆ ಶಂಕೆ
ಬೆಂಗಳೂರು, ಮೇ 31: ಆಟೋ ಒಂದರಲ್ಲಿ ಚಾಲಕನ ಶವ ಪತ್ತೆಯಾಗಿದ್ದು ಇದು ಸಹಜ ಸಾವಲ್ಲ ಕೊಲೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಲಿಂಗರಾಜಪುರ ನಿವಾಸಿ ಸ್ಟೀಫನ್ ರಾಜ್ (34)ಮೃತ ವ್ಯಕ್ತಿ, ಹಲವು ಕೊಲೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದ, ತಮಿಳುನಾಡು ಮೂಲದವನಾಗಿದ್ದ ಈತ ಮಕ್ಕಳು, ಪತ್ನಿಯೊಂದಿಗೆ ಬೆಂಗಳೂರಲ್ಲಿ ನೆಲೆಸಿದ್ದ.
ಪೊಲೀಸರ ಮಾಹಿತಿ ಪ್ರಕಾರ ರಾಜ್ ರಾತ್ರಿ ಆಟೋದಲ್ಲಿ ಮಲಗಿರುವಾಗ ಆತನನ್ನು ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಆತನನ್ನು ಕೊಲೆಗೈಯಲಾಗಿದೆ. ಆಟೋದಿಂದ ರಕ್ತ ಸುರಿಯುತ್ತಿದ್ದುದನ್ನು ಕಂಡ ಯಾರೋ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಆತನ ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಬೇಸಿಗೆ ರಜೆ ಕಳೆಯಲು ಊರಿಗೆ ಹೋಗಿದ್ದ, ಮಂಗಳವಾರ ಸಂಜೆ ವಾಪಸಾಗಿದ್ದ, ಕೆಲಸಕ್ಕೆ ಹಾಜರಾಗಿದ್ದ, ಆದರೆ ಆತನ ಕೊಲೆ ಹಿಂದಿರುವ ಕಾರಣ ಅಸ್ಪಷ್ಟವಾಗಿದೆ. ಹಳೆಯ ದ್ವೇಷವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.











Click it and Unblock the Notifications