ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

800 ಹಳೆಯ ಬಸ್‌ಗಳನ್ನು ಗುಜರಿಗೆ ಸೇರಿಸಲಿದೆ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 800 ಹಳೆಯ ಬಸ್‌ಗಳನ್ನು ಗುಜರಿಗೆ ಕಳಿಸಲು ಮುಂದಾಗಿದೆ. 1000 ಹೊಸ ಬಸ್ಸುಗಳು ಸಂಸ್ಥೆಗೆ ಸೇರಲಿವೆ. ಆದರೆ, ಎಲೆಕ್ಟ್ರಿಕ್ ಬಸ್‌ ಸಂಚಾರದ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ.

ಮಧ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್ಸುಗಳು ಕೆಟ್ಟು ನಿಲ್ಲುವುದನ್ನು ತಡೆಯಲು ಸಂಸ್ಥೆ ಮುಂದಾಗಿದೆ. ಆದ್ದರಿಂದ, 11 ವರ್ಷ ಹಳೆಯ ಅಥವ 8.5 ಲಕ್ಷ ಕಿ.ಮೀ. ಸಂಚಾರ ನಡೆಸಿರುವ ಬಸ್ಸುಗಳನ್ನು ಗುಜರಿಗೆ ಕಳಿಸಲಾಗುತ್ತಿದೆ. ಸುಮಾರು 800 ಬಸ್‌ಗಳನ್ನು ಗುರುತಿಸಲಾಗಿದೆ.

ಬಸ್‌ ಪ್ರಯಾಣ ದರ ಹೆಚ್ಚಳ ಪ್ರಸ್ತಾವಕ್ಕೆ ಕುಮಾರಸ್ವಾಮಿ ನಕಾರಬಸ್‌ ಪ್ರಯಾಣ ದರ ಹೆಚ್ಚಳ ಪ್ರಸ್ತಾವಕ್ಕೆ ಕುಮಾರಸ್ವಾಮಿ ನಕಾರ

ಬಿಎಂಟಿಸಿ 1000 ಹೊಸ ಬಸ್ಸುಗಳನ್ನು ಸಂಸ್ಥೆಗೆ ಸೇರಿಸಿಕೊಳ್ಳಲು ಮುಂದಾಗಿದೆ. ಆದರೆ, ಇದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಒಪ್ಪಿಗೆ ಬೇಕಾಗಿದೆ. ಡೀಸೆಲ್ ಬಸ್ಸುಗಳ ಖರೀದಿಗೆ ನ್ಯಾಯಾಧೀಕರಣದ ಒಪ್ಪಿಗೆ ನೀಡಿಲ್ಲ.

ಬಸ್ ಬಿಡಲು ಜ್ಯೋತಿಷ್ಯ ಕೇಳಿದ ಬಿಎಂಟಿಸಿ ಚಾಲಕ: ಬಂದೊದಗಿದೆ ಸಂಕಷ್ಟಬಸ್ ಬಿಡಲು ಜ್ಯೋತಿಷ್ಯ ಕೇಳಿದ ಬಿಎಂಟಿಸಿ ಚಾಲಕ: ಬಂದೊದಗಿದೆ ಸಂಕಷ್ಟ

ಬಿಎಂಟಿಸಿ ಮಾಲಿನ್ಯ ರಹಿತವಾದ ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಮಾಡಲು ಮುಂದಾಗಿತ್ತು. ಆದರೆ, ಅಧಿಕಾರಿಗಳು ಮತ್ತು ಸಚಿವ ಡಿ.ಸಿ.ತಮ್ಮಣ್ಣ ನಡುವಿನ ಪ್ರತಿಷ್ಠೆಯಿಂದಾಗಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರದ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ...

ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಕಳವು!ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಕಳವು!

ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ

ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ

ಹಳೆಯ ಬಸ್ಸುಗಳು ಇನ್ನೂ ಸಂಚಾರ ನಡೆಸುತ್ತಿವೆ. ಆದ್ದರಿಂದ, ಆಗಾಗ ರಸ್ತೆಯಲ್ಲಿ ಕೆಟ್ಟು ನಿಂತು ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗುತ್ತಿವೆ. 2012-13ನೇ ಸಾಲಿನಲ್ಲಿ 3488 ಕೆಟ್ಟುನಿಂತ ಪ್ರಕರಣಗಳು ದಾಖಲಾಗಿದ್ದವು. ಈಗ ಅದು ಕಡಿಯಾಗುತ್ತಾ ಬಂದಿದೆ. 2017-18ರಲ್ಲಿ 2024 ಪ್ರಕರಣ ದಾಖಲಾಗಿವೆ.

ಹಳೆಯ ಬಸ್‌ಗಳು ಗುಜರಿಗೆ

ಹಳೆಯ ಬಸ್‌ಗಳು ಗುಜರಿಗೆ

ಬಸ್ಸುಗಳು ರಸ್ತೆಯಲ್ಲಿ ಕೆಟ್ಟು ನಿಂತು ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೇವೆ ನೀಡಲು ಬಿಎಂಟಿಸಿ ಮುಂದಾಗಿದೆ. ಆದ್ದರಿಂದ, ಹಳೆಯ ಬಸ್ಸುಗಳನ್ನು ಗುಜರಿಗೆ ಹಾಕಲಾಗುತ್ತದೆ. ಹೊಸ ಬಸ್ ಸೇರಿಸಿಕೊಳ್ಳುವುದು ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ಇದರಲ್ಲಿ ಸೇರಿದೆ.

ಹೊಸ ಬಸ್‌ಗಳ ಖರೀದಿ

ಹೊಸ ಬಸ್‌ಗಳ ಖರೀದಿ

ಹೊಸ 1000 ಬಸ್‌ಗಳನ್ನು ಸೇರಿಸಿಕೊಳ್ಳಲು ಬಿಎಂಟಿಸಿ ಮುಂದಾಗಿದೆ. ಆದರೆ, ಅದಕ್ಕೆ ಹಸಿರು ನ್ಯಾಯಾಧೀಕರಣದ ಒಪ್ಪಿಗೆ ಬೇಕಾಗಿದೆ. 2014-15ರಲ್ಲಿ 298, 2016-17ರಲ್ಲಿ 1406 ಬಸ್ಸುಗಳನ್ನು ಸೇರಿಸಿಕೊಳ್ಳಾಗಿದೆ. ಈಗ ಬಿಎಂಟಿಸಿಯಲ್ಲಿರುವ ಬಸ್‌ಗಳ ಸಂಖ್ಯೆ 6,634.

800 ಎಲೆಕ್ಟ್ರಿಕ್ ಬಸ್

800 ಎಲೆಕ್ಟ್ರಿಕ್ ಬಸ್

ಬಿಎಂಟಿಸಿ ಪರಿಸರ ಸ್ನೇಹಿಯಾಗಬೇಕು ಎಂಬುದು ಹಲವು ದಿನಗಳ ಬೇಡಿಕೆ. 80 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಯನ್ನು ಬಿಎಂಟಿಸಿ ಅಂತ್ಯಗೊಳಿಸಿತ್ತು. ಆದರೆ, ಕೆಲವು ದಿನಗಳ ಹಿಂದೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಬಿಎಂಟಿಸಿಯ ಕೆಲವು ಭ್ರಷ್ಟ ನೌಕರರು ಎಲೆಕ್ಟ್ರಿಕ್ ಬಸ್ ಖರೀದಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದ್ದರು. ಆದ್ದರಿಂದ, ಪ್ರಕ್ರಿಯೆ ಸ್ಥಗಿತಗೊಂಡಿದೆ.

English summary
Bangalore Metropolitan Transport Corporation (BMTC) will scrap 800 old city buses. Corporation will scrap buses either over 11 years old or have run more than 8.5 lakh km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X