ಮೆಟ್ರೋ ಆಯ್ತು ಈಗ ಬಿಎಂಟಿಸಿ ವಿರುದ್ಧ ಕನ್ನಡಿಗರ ಹೋರಾಟದ ಧ್ವನಿ

ಬೆಂಗಳೂರು, ಜನವರಿ 31: ನಮ್ಮ ಮೆಟ್ರೋದಲ್ಲಿ ಅನವಶ್ಯಕವಾಗಿ ಹಿಂದಿ ಬಳಕೆ ಮಾಡಿದ್ದರ ವಿರುದ್ಧ ಕನ್ನಡಿಗರು ಹೋರಾಟ ಮಾಡಿ ಕೊನೆಗೂ ಯಶಸ್ವಿಯಾಗಿದ್ದರು.

ಇದೀಗ ಬಿಎಂಟಿಸಿಯಲ್ಲಿ ಕೂಡ ಹಿಂದಿ ಬಳಕೆ ಮಾಡಲಾತ್ತಿದ್ದು, ಕನ್ನಡ ಪರ ಹೋರಾಟಗಾರರು ಇನ್ನೊಂದು ಸುತ್ತಿನ ಹೋರಾಟಕ್ಕೆ ತಯಾರಾಗಬೇಕು ಎಂದು ಕರೆ ಕೊಟ್ಟಿದ್ದಾರೆ.

ಬಸ್‌ಗಳ ರಿಯಲ್ ಟೈಮ್ ಮಾಹಿತಿ ಬೇಕು ಎಂದು ಪ್ರಯಾಣಿಕರು ಒತ್ತಾಯ ಮಾಡುತ್ತಿದ್ದರು. ಇದೀಗ ಬಸ್‌ಗಳ ರಿಯಲ್ ಟೈಮ್ ಮಾಹಿತಿಯನ್ನು ಬಸ್‌ ನಿಲ್ದಾಣಗಳಲ್ಲಿ ಡಿಸ್‌ಪ್ಲೇ ಹಾಕಲು ಮುಂದಾಗಿದೆ ಆದರೆ ಡಿಸ್‌ಪ್ಲೇ ಫಲಕದಲ್ಲಿ ಮಾಹಿತಿ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಇರಲಿದೆ. ಇದು ಕನ್ನಡಿಗರ ಕಣ್ಣು ಕೆಂಪಾಗಿಸಿದೆ.

BMTC To Provide Real Time Bus Information in Hindi Too

ಕನ್ನಡ, ಇಂಗ್ಲಿಷ್ ಭಾಷೆ ಎರಡಲ್ಲಿದ್ದರೆ ಸಾಕು ಹಿಂದಿ ಯಾಕೆ ಬೇಕು ಕನ್ನಡ ಬಾರದವರಿಗೆ ಇಂಗ್ಲಿಷ್ ಸಾಮಾನ್ಯವಾಗಿ ಅರ್ಥವಾಗುತ್ತದೆ. ಇಲ್ಲವಾದಲ್ಲಿ ಕನ್ನಡ ಕಲಿಯಲು ಅದನ್ನು ಬಿಟ್ಟು ಹಿಂದಿಯಲ್ಲಿ ಯಾಕೆ ಮಾಹಿತಿ ನೀಡಬೇಕೆಂದು ಕೆಲವು ಕನ್ನಡ ಪರ ಹೋರಾಟಗಾರರು ಧ್ವನಿ ಎತ್ತಿದ್ದಾರೆ.

ಮೆಟ್ರೋ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ಒಟ್ಟು ಒಂದು ಸಾವಿರ ಕಡೆಗಳಲ್ಲಿ ಮಾಹಿತಿ ಫಲಕ ಅಳವಡಿಸಲಾಗುತ್ತದೆ.ಇದೀಗ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಪಿಐಎಸ್ ಫಲಕಗಳಿವೆ.

ಬಿಎಂಟಿಸಿ ಇತ್ತೀಚೆಗೆ ಟೆಂಡರ್ ಕರೆದಿತ್ತು. ಎಷ್ಟು ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಆ ಮಾರ್ಗದಲ್ಲಿ ಮುಂದಿನ ಬಸ್‌ ಎಷ್ಟು ಗಂಟೆಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಫೆಬ್ರವರಿ ಅಂತ್ಯದೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಬಿಎಂಟಿಸಿಯು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ಯಾನಿಕ್ ಬಟನ್ಸ್‌, 12 ವಿಡಿಯೋ ವಾಲ್‌ಗಳು, ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಹಾಗೂ ಎರಡು ಟಚ್‌ಸ್ಕ್ರೀನ್ ಕಿಯಾಸ್ಕ್‌ನ್ನು ಅಳವಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+