ಬಿಎಂಟಿಸಿ ಬಸ್ಸಿನ ಕ್ಷಣ-ಕ್ಷಣದ ಮಾಹಿತಿ ಇನ್ನು ಲಭ್ಯ

ಬೆಂಗಳೂರು, ಜು. 1 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಸಂಚರಿಸುವ ಜನರಿಗೆ ಇನ್ನು ಬಸ್ಸು ಎಷ್ಟುಹೊತ್ತಿಗೆ ಬರುತ್ತದೆ ಎಂದು ಕಾಯುವ ಅಗತ್ಯವಿಲ್ಲ. ನಿಲ್ದಾಣಕ್ಕೆ ಬಸ್ ಎಷ್ಟು ಹೊತ್ತಿಗೆ ಬರುತ್ತದೆ ಎಂಬ ಮಾಹಿತಿ ನಿಮಗೆ ಅಲ್ಲಿ ಲಭ್ಯವಾಗುತ್ತದೆ. ಅಕ್ಟೋಬರ್ ನಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಇಂಟಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಮೂಲಕ ಜನರಿಗೆ ಬಸ್ಸಿನ ಆಗಮನ ಮತ್ತು ನಿರ್ಗಮನದ ಬಗ್ಗೆ ಮಾಹಿತಿ ಒದಗಿಸುವ ಸೇವೆಯನ್ನು ಬಿಎಂಟಿಸಿ ಅಕ್ಟೋಬರ್ 31ರಿಂದ ಆರಂಭಿಸಿಲಿದೆ. ನೀವು ಬಸ್ಸಿಗಾಗಿ ಕಾಯುತ್ತ ನಿಂತಿರುವ ನಿಲ್ದಾಣದಲ್ಲಿಯೇ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಸ್ ನಿಲ್ದಾಣಕ್ಕೆ ಎಷ್ಟು ಹೊತ್ತಿಗೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.

BMTC

ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಕುಮಾರ ಪುಷ್ಕರ್ ಈ ಕುರಿತು ಮಾಹಿತಿ ನೀಡಿದ್ದು, ಸಂಸ್ಥೆಯ ಎಲ್ಲಾ ಬಸ್ಸುಗಳಿಗೂ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಇದರಿಂದಾಗಿ ಬಸ್ ಎಲ್ಲಿದೆ?, ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ಬರುತ್ತದೆ? ಮುಂತಾದ ಮಾಹಿತಿಗಳನ್ನು ಕ್ಷಣ-ಕ್ಷಣಕ್ಕೂ ಸಂಗ್ರಹಿಸಿ ಪ್ರಯಾಣಿಕರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. [ಪ್ರಯಾಣಿಕ ಸ್ನೇಹಿಯಾಗಲು ಬಿಎಂಟಿಸಿ ಸಿದ್ಧತೆ]

ಮೊದಲ ಹಂತದಲ್ಲಿ ಟಿಟಿಎಂಸಿ ನಿಲ್ದಾಣಗಳಲ್ಲಿರುವ ಟಿವಿಗಳಲ್ಲಿ ಈ ಮಾಹಿತಿ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. 35 ಬಸ್ ನಿಲ್ದಾಣಗಳಲ್ಲಿ ಟಿವಿ ಆಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು. ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರು ಸ್ಮಾರ್ಟ್ ಫೋನ್ ಮೂಲಕ ಬಸ್ಸಿನ ಮಾಹಿತಿ ಪಡೆಯಬಹುದಾಗಿದೆ ಅದಕ್ಕಾಗಿ ಮೊಬೈಲ್ ಆಪ್ಲಿಕೇಷನ್ ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. [ಬಿಎಂಟಿಸಿ ಪ್ರಯಾಣ ಮಾಹಿತಿಗೆ ಕಿಯೋಸ್ಕ್]

ಇದರಿಂದಾಗಿ ಸಂಸ್ಥೆಯ 6,700 ಬಸ್ಸುಗಳನ್ನು ಬಗ್ಗೆ ಮಾಹಿತಿ ಪಡೆಯಲು ಸಹಾಯಕವಾಗಲಿದೆ. ಟ್ರಾಫಿಕ್ ಜಾಮ್ ಉಂಟಾದಾಗ ಬಸ್ಸು ನಿಲ್ದಾಣ ತಲುಪುವ ಬಗ್ಗೆ ನಿಖರ ಮಾಹಿತಿ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಲಭ್ಯವಾಗಲಿದೆ. ಬಸ್ಸುಗಳು ಡಿಪೋದಿಂದ ಹೊರಟ ತಕ್ಷಣ ಅವುಗಳ ಕ್ಷಣ ಕ್ಷಣದ ಮಾಹಿತಿ ಇದರಿಂದ ಲಭ್ಯವಾಗಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+