ಮಾ. 14ರಿಂದ 2 ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು, ಮಾರ್ಚ್ 13; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾರ್ಚ್ 14ರ ಸೋಮವಾರದಿಂದ ಎರಡು ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಿದೆ. ಹವಾನಿಯಂತ್ರಿತ ಮತ್ತು ಸಾಮಾನ್ಯ ಬಸ್‌ಗಳನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತದೆ.

ಪ್ರಯಾಣಿಕರ ಅನುಕೂಲಕ್ಕಾಗಿ ವಿ-129 (ಕೆಂಪೇಗೌಡ ಬಸ್ ನಿಲ್ದಾಣ-ಶಿವಾಜಿನಗರ) ಮತ್ತು ಜಿ-6ಎ (ಮೈಸೂರು ರಸ್ತೆ ಬಸ್ ನಿಲ್ದಾಣ-ಶಾಂತಿನಗರ ಟಿಟಿಎಂಸಿ) ಮಾರ್ಗವನ್ನು ಪರಿಚಯಿಸಲಾಗುತ್ತಿದೆ ಎಂದು ಬಿಎಂಟಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡುವ ಹವಾನಿಯಂತ್ರಿತ ವಜ್ರ ಸಾರಿಗೆ ಕೆ. ಆರ್. ವೃತ್ತ ಮಾರ್ಗವಾಗಿ ಶಿವಾಜಿನಗರ ಬಸ್ ನಿಲ್ದಾಣ ತಲುಪಲಿದೆ. ಈ ಮಾರ್ಗದ ಸಂಖ್ಯೆ ವಿ-129 ಎಂದು ಬಿಎಂಟಿಸಿ ಹೇಳಿದೆ.

bmtc

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ದೀಪಾಂಜಲಿ ನಗರ, ಬಾಪೂಜಿ ನಗರ, ಕೆ. ಆರ್. ಮಾರುಕಟ್ಟೆ ಫ್ಲೈ ಓವರ್ ಮೂಲಕ ಬಸ್ ಶಾಂತಿ ನಗರ ಟಿಟಿಎಂಸಿಗೆ ಸಂಚಾರ ನಡೆಸಲಿದೆ. ಈ ಮಾರ್ಗ ಜಿ-6ಎ ಆಗಿದ್ದು, ಸಾಮಾನ್ಯ ಬಸ್‌ಗಳು ಸಂಚಾರ ನಡೆಸಲಿವೆ.

ಬಸ್ ಸಂಚಾರದ ಸಮಯ; ಮಾರ್ಗ ವಿ-129 ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ 7.40, 8, 8.40, 9, 9.40, 10, 10.30, 11.15, 12, 12.30, 12.50, 13.15, 14.05, 14.25, 14.55, 15.25, 16, 16.20, 16.40, 17,17.30, 18, 19, 20ಕ್ಕೆ ಹೊರಡಲಿದೆ.

ಶಿವಾಜಿನಗರ ಬಸ್ ನಿಲ್ದಾಣದಿಂದ 8.10, 8.30, 9.10, 9.30,10.5, 10.35, 11.20, 12, 12.30, 13, 13.40, 14.15, 14.55, 15.30, 15.50, 16.10, 16.30, 16.50, 17.10, 17.30, 18, 18.30, 19.30, 20.30ಕ್ಕೆ ಹೊರಡಲಿದೆ.

ಜಿ 6-ಎ ಮಾರ್ಗ; ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 6, 6.35, 7.15, 8, 8.25, 8.45, 9.05, 9.30, 10, 10.20, 11, 11.25, 12, 12.20, 12.35, 13, 13.35, 14.15, 14.30, 15.05, 15.40, 16.10, 16.45, 17, 17.30, 17.55, 18.15, 18.40, 19, 19.45, 20.30, 21.05, 21.40, 22.15ಕ್ಕೆ ಬಸ್ ಹೊರಡಲಿದೆ.

ಶಾಂತಿನಗರ ಟಿಟಿಎಂಸಿಯಿಂದ 6, 6.35, 7.15, 8, 8.25, 8.45, 9.05, 9.30, 10, 10.40, 11.15, 11.40, 12, 12.20, 12.35, 13, 13.35, 14.15, 14.30, 15.05, 15.40, 16.20, 16.45, 17.10, 17.30, 18, 18.15, 18.35,19, 19.45, 20.30, 21.05, 21.40, 22.15.

ಮೊಬೈಲ್ ಆಪ್‌ನಲ್ಲೇ ಪಾಸು; ಬಿಎಂಟಿಸಿ ಮಾಸಿಕ, ದಿನದ ಪಾಸು ಪಡೆಯುವವರಿಗೆ ಸಿಹಿ ಸುದ್ದಿ ನೀಡಿದೆ. ಕೆಲವೇ ದಿನಗಳಲ್ಲಿ ಮೊಬೈಲ್ ಅಪ್ಲಿಕೇಶನ್‌ನಲ್ಲಿಯೇ ಪಾಸುಗಳನ್ನು ಪಡೆಯುವ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಬಿಎಂಟಿಸಿ ಪಾಸುಗಳನ್ನು ಪಡೆಯಲು ಟಿಟಿಎಂಸಿಗೆ ಹೋಗಿ ಕಾದು ನಿಲ್ಲುವುದು ತಪ್ಪಲಿದೆ. ಎರಡು ಅಥವ ಮೂರು ತಿಂಗಳಿನಲ್ಲಿ ಬಿಎಂಟಿಸಿಯ ಎಲ್ಲಾ ಬಸ್‌ ಪಾಸುಗಳು ಮೊಬೈಲ್ ಅಪ್ಲಿಕೇಶನ್‌ನಲ್ಲಿಯೇ ಲಭ್ಯವಾಗಲಿವೆ.

2019ರಲ್ಲಿ ಬಿಎಂಟಿಸಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ವಾಯು ವಜ್ರ ಪಾಸುಗಳನ್ನು ಮೊಬೈಲ್ ಮೂಲಕ ಪಡೆಯುವ ಸೇವೆಯನ್ನು ಬಿಎಂಟಿಸಿ ನಮ್ಮ ಪಾಸು ಎಂಬ ಹೆಸರಿನಲ್ಲಿ ಜಾರಿಗೊಳಿಸಿತ್ತು. ಈ ಸಾಮಾನ್ಯ ಬಸ್‌ಪಾಸುಗಳನ್ನು ಸಹ ಪಡೆಯಲು ಇದೇ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+