ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಸರ್ ಎಂವಿ ಟರ್ಮಿನಲ್ ಗೆ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭ

|
Google Oneindia Kannada News

ಬೆಂಗಳೂರು ಜೂನ್ 6: ನೈರುತ್ಯ ರೈಲ್ವೆಯು ನಗರದ ಬೈಯಪ್ಪನಹಳ್ಳಿಯ ಸರ್‌. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಇಂದಿನಿಂದ (ಜೂನ್ 6) ರೈಲುಗಳ ಸಂಚಾರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಐದು ಮೆಟ್ರೋ ಫೀಡರ್ ಬಸ್ ಸೇವೆಯನ್ನು ಪ್ರಾರಂಭಿಸಿದೆ.

ಈ ಬಸ್‌ಗಳು ಸುತ್ತಮುತ್ತಲಿನ ಪ್ರದೇಶಗಳಿಂದ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಇದಕ್ಕಾಗಿ 10 ಬಸ್ ಗಳನ್ನು ನಿಯೋಜಿಸಿದೆ. ಇದು ಚನ್ನಸಂದ್ರ(ಬಸ್ ಸಂಖ್ಯೆ MF-1E), ಸೆಂಟ್ರಲ್ ಸಿಲ್ಕ್ ಬೋರ್ಡ್(MF-5), ಬಾಣಸವಾಡಿ ಮತ್ತು ಸುಬ್ಬಯ್ಯನಪಾಳ್ಯ(MF-7A), ನಾಗವಾರ(MF-7B) ಹಾಗೂ ಮೊನೆಕೊಳಲು ಕ್ರಾಸ್(MF-9) ನಿಂದ ಬೈಯಪ್ಪನಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಬಿಎಂಟಿಸಿ ಬಸ್ ಗಳು ಸಂಪರ್ಕ ಕಲ್ಪಿಸಲಿವೆ.

ವೈಟ್ ಟಾಪಿಂಗ್ ಕಾಮಗಾರಿ: ಮಲ್ಲೇಶ್ವರದಲ್ಲಿ ಪರ್ಯಾಯ ಮಾರ್ಗವೈಟ್ ಟಾಪಿಂಗ್ ಕಾಮಗಾರಿ: ಮಲ್ಲೇಶ್ವರದಲ್ಲಿ ಪರ್ಯಾಯ ಮಾರ್ಗ

ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ಈ ಮೆಟ್ರೋ ಫೀಡರ್ ಬಸ್ ಗಳು ಪ್ರತಿ ದಿನ 144 ಟ್ರಿಪ್ ಗಳು ಸಂಚರಿಸಲಿವೆ. ಸೋಮವಾರದಿಂದ ಬಿಎಂಟಿಸಿ ಬಸ್ ಗಳ ಸೇವೆ ಆರಂಭವಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಮಳೆ ಎಚ್ಚರಿಕೆ; ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸೋಮವಾರ ಮಳೆ ಬೆಂಗಳೂರಿನಲ್ಲಿ ಭಾರೀ ಮಳೆ ಎಚ್ಚರಿಕೆ; ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸೋಮವಾರ ಮಳೆ

ಇಂದಿನಿಂದ ಸರ್ ಎಂವಿ ಟರ್ಮಿನಲ್ ಕಾರ್ಯಾರಂಭ

ಇಂದಿನಿಂದ ಸರ್ ಎಂವಿ ಟರ್ಮಿನಲ್ ಕಾರ್ಯಾರಂಭ

315 ಕೋಟಿ ರುಪಾಯಿ ವೆಚ್ಚದ್ದಲ್ಲಿ ವಿಮಾನ ನಿಲ್ದಾಣದ ಮಾದರಿಯ ಸೌಲಭ್ಯಗೊಂದಿಗೆ ಬೆಂಗಳೂರಿನ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣವಾಗಿರುವ ಬೈಯಪ್ಪನಹಳ್ಳಿಯ ಸರ್‌. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಮೊದಲ ರೈಲು ಜೂನ್‌ 6 ರಂದು ರಾತ್ರಿ 7 ಗಂಟೆಗೆ ಹೊರಡಲಿದೆ. ವಾರಕ್ಕೆ ಮೂರು ಬಾರಿ ಇರುವ 12684 ಬಾಣಸವಾಡಿ-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಸರ್‌ ಎಂ.ವಿ. ಟರ್ಮಿನಲ್ ನಿಂದ ಹೊರಡುವ ಮೊದಲ ರೈಲಾಗಿದೆ. ಈ ರೈಲು ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಪ್ರತಿ ಸೋಮವಾರ, ಮಂಗಳವಾರ ಮತ್ತು ಗುರುವಾರದಂದು ಸಂಚರಿಸಲಿದೆ. ಅದೇ ರೀತಿ 12683 ಎರ್ನಾಕುಲಂ-ಬಾಣಸವಾಡಿ ರೈಲು ವಾರಕ್ಕೆ ಮೂರು ಬಾರಿ ಎರ್ನಾಕುಲಂ ರೈಲು ನಿಲ್ದಾಣದಿಂದ ಕಾರ್ಯಚಲಿಸಲಿದೆ.

ಬಾಣಸವಾಡಿ-ಕೊಚುವೆಲಿ ರೈಲು ಸಂಚಾರ

ಬಾಣಸವಾಡಿ-ಕೊಚುವೆಲಿ ರೈಲು ಸಂಚಾರ

ಇದರೊಂದಿಗೆ 16320 ಬಾಣಸವಾಡಿ-ಕೊಚುವೆಲಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಮಧ್ಯಾಹ್ನ 1.30 ಗಂಟೆಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ. ಜೂನ್ 10ರಿಂದ ಇದರ ಸಂಚಾರ ಆರಂಭವಾಗಲಿದೆ. 16319 ಕೊಚುವೆಲಿ-ಬಾಣಸವಾಡಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಶುಕ್ರವಾರ ಮತ್ತು ಭಾನುವಾರ ಬೆಳಗ್ಗೆ 10.10 ಗಂಟೆಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಣಸವಾಡಿ-ಪಾಟ್ನಾ ರೈಲು ಸಂಚಾರ

ಬಾಣಸವಾಡಿ-ಪಾಟ್ನಾ ರೈಲು ಸಂಚಾರ

22354 ಬಾಣಸವಾಡಿ-ಪಾಟ್ನಾ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಪ್ರತಿ ಭಾನುವಾರ ಸರ್‌. ಎಂ. ವಿ. ಟರ್ಮಿನಲ್ ನಿಂದ ಮಧ್ಯಾಹ್ನ 1.50 ಗಂಟೆಗೆ ಹೊರಡಲಿವೆ. ಜೂನ್ 12 ರಿಂದ ಇದರ ಸಂಚಾರ ಆರಂಭವಾಗಲಿದೆ. ಅದೇ ರೀತಿ ವಾಪಸು 22353 ಪಾಟ್ನಾ-ಬಾಣಸವಾಡಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಪಟ್ನಾ ನಿಲ್ದಾಣದಿಂದ ಹೊರಟು ಶನಿವಾರದಂದು ಸಂಜೆ 5.10 ಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.

ಒಟ್ಟು ಏಳು ಫ್ಲಾಟ್‌ಫಾರ್ಮ್ ಗಳಿವೆ

ಒಟ್ಟು ಏಳು ಫ್ಲಾಟ್‌ಫಾರ್ಮ್ ಗಳಿವೆ

314 ಕೋಟಿ ರೂ. ವೆಚ್ಚದಲ್ಲಿ 4,200 ಚದರ ಅಡಿ ವಿಸ್ತೀರ್ಣದಲ್ಲಿ ಟರ್ಮಿನಲ್ ನಿರ್ಮಾಣಗೊಂಡಿದೆ. ನಿತ್ಯ 50,000 ಪ್ರಯಾಣಿಕರು ತೆರಳಬಹುದಾದ ಸಾಮರ್ಥ್ಯ ಹೊಂದಿದೆ. ಇಲ್ಲಿ ಒಟ್ಟು ಏಳು ಫ್ಲಾಟ್‌ಫಾರ್ಮ್ ಗಳು ಇವೆ. ಪ್ರತಿ ದಿನ 50 ರೈಲುಗಳು ಟರ್ಮಿನಲ್ ನಿಂದ ಕಾರ್ಯನಿರ್ವಹಿಸಬಹುದಾಗಿದೆ. ಅಲ್ಲದೇ ಬೆಂಗಳೂರು ವಿಮಾನ ನಿಲ್ದಾಣದ ಮಾದರಿಯಲ್ಲಿ ಸೆಂಟ್ರಲೈಸ್ಡ್ ಎಸಿ ಸೌಲಭ್ಯ ಹೊಂದಿದೆ.

Recommended Video

Sidhu Moosewala ತಂದೆ ಹಾಗು Amit Shah ಭೇಟಿ ಹಿಂದಿನ ಕಾರಣವೇನು | #India | OneIndia Kannada

English summary
The BMTC will run five metro feeder services connecting the Sir M Visvesvaraya terminal from the neighbouring areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X