Tour Package: ಪ್ರವಾಸಿಗರಿಗೆ ಸಿಹಿ ಸುದ್ದಿ, BMTC 'ಘಾಟಿ-ಈಶಾ ಪೌಂಡೇಶನ್' ಟೂರ್ ಪ್ಯಾಕೇಜ್‌ಗೆ ಚಾಲನೆ
ಬೆಂಗಳೂರು, ಜೂನ್ 21: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪ್ರವಾಸಿಗರ ಅನುಕೂಲಕ್ಕಾಗಿ ಇತ್ತೀಚೆಗೆ ದಿವ್ಯದರ್ಶನ ಎಂಬ ಹೆಸರಿನ ಟೂರ್ ಪ್ಯಾಕೇಜ್ ಘೋಷಿಸಿತ್ತು. ಇದೀಗ ''ಘಾಟಿ ಈಶ ಫೌಂಡೇಷನ್" ಎಂಬ ಹೆಸರಿನಡಿಯಲ್ಲಿ ವಾರಾಂತ್ಯ ದಿನಗಳಾದ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಹವಾನಿಯಂತ್ರಿತ ಬಸ್ಸಿನೊಂದಿಗೆ ಪ್ರವಾಸಿ ಸಾರಿಗೆ ಸೌಲಭ್ಯ ಸೇವೆ ಆರಂಭಿಸಿದೆ. ಸದ್ಯ ಈ ಸೇವೆಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಸುತ್ತಮುತ್ತಲಿನ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಬಿಎಂಟಿಸಿ ಈ ಟೂರ್ ಪ್ಯಾಕೇಜ್ ಘೋಷಿಸಿದೆ. ಒಂದು ದಿನದ ಟೂರ್ ಪ್ಯಾಕೇಜ್ ಇದ್ದಾಗಿದ್ದು, ನಗರದ ಬನಶಂಕರಿಯಿಂದ ನೇರವಾಗಿ ಈಶಾಗೆ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ನೇರವಾಗಿ ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್‌ನ ಆದಿಯೋಗಿ ಶಿವನ ದೇಗುಲಕ್ಕೆ ಕರೆದೊಯ್ಯಲಿವೆ.

ಬಿಎಂಟಿಸಿ 'ವೇಗದೂತ ಸೇವೆಗಳು' ಹಾಗೂ 'ಘಾಟಿ ಈಶ ಫೌಂಡೇಷನ್' ಪ್ಯಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗದ ಲೋಕಾರ್ಪಣೆಗೆ ಇಂದು ಚಾಲನೆ ನೀಡಿ ರಾಮಲಿಂಗಾ ರೆಡ್ಡಿ ಅವರು ಮಾತನಾಡಿದರು. ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃತಾವಲಂಬಿತರಿಗೆ ₹1.5 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ ಅನ್ನು ಇಂದು ವಿತರಿಸಿದ್ದೇವೆ. ಬಿಎಂಟಿಸಿ ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ಅನುಕೂಲಕ್ಕೆ ಪ್ರವಾಸಿ ಸ್ಥಳಗಳಿಗೆ ಟೂರ್ ಪ್ಯಾಕೇಜ್ ಘೋಷಿಸಿದೆ ಎಂದು ತಿಳಿಸಿದರು. ಬಿಎಂಟಿಸಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟೂರ್ ಪ್ಯಾಕೇಜ್ ದರ, ಸಮಯ & ನಿಲ್ದಾಣಗಳು
ಈಶಾ ಫೌಂಡೇಶನ್‌ಗೆ ಇಂದಿನಿಂದ (ಜೂನ್ 21ರಿಂದ) ಹೆಚ್ಚುವರಿ ಬಸ್ ಸೇವೆಗಳು ಲಭ್ಯವಾಗಲಿವೆ. ಇದರಲ್ಲಿ ಕೆಲವು ಧಾರ್ಮಿಕ ಸ್ಥಳಗಳು (ದೇವಾಲಯ) ಒಳಗೊಂಡಿದೆ. ಕೆಂಪೇಗೌಡ ಮೆಜೆಸ್ಟಿಕ್ ನಿಂದ ಬಸ್ ಬೆಳಗ್ಗೆ 09ಕ್ಕೆ ಸಂಚಾರ ಆರಂಭವಾಗುತ್ತದೆ. ಅಲ್ಲಿಂದ ಶ್ರೀ ನೇದಾಲಂಜನೇಯ ಸ್ವಾಮಿ ದೇವಸ್ಥಾನ, ನಂತರ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಜ್ಞಾನತಿರ್ಥ ಲಿಂಗ (ಮುದ್ದೇನಹಳ್ಳಿ), ಶ್ರೀ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾಘ್ನಿ ಮಠ (ಸ್ಕಂದಗಿರಿ), ಅಲ್ಲಿಂದ ಕಲ್ಯಾಣಿ (ಕಾರಂಜಿ) ಮುಂದೆ ಈಶಾ ಫೌಂಡೇಶನ್ ತಲುಪಲಾಗುತ್ತದೆ. ಮರಳಿ ರಾತ್ರಿ 09 ಗಂಟೆಗೆ ಪ್ರವಾಸಿ ಬಸ್ ಮೆಜೆಸ್ಟಿಕ್ ಬಂದು ತಲುಪುತ್ತದೆ.
ಬಿಎಂಟಿಸಿ “ವೇಗದೂತ ಸೇವೆಗಳು” (Express) ಹಾಗೂ “ಘಾಟಿ ಈಶ ಫೌಂಡೇಷನ್” ಪ್ಯಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗದ ಲೋಕಾರ್ಪಣೆಗೆ ಇಂದು ಚಾಲನೆ ನೀಡಿ, ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃತಾವಲಂಬಿತರಿಗೆ ₹1.5 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ ಅನ್ನು ಇಂದು ವಿತರಿಸಿದೆ.
— Ramalinga Reddy (@RLR_BTM) June 20, 2025
ಸಂಸ್ಥೆಯ ವ್ಯವಸ್ಥಾಪಕ… pic.twitter.com/YipSPeA9Wr
ಟಿಕೆಟ್ 600 ರೂಪಾಯಿ ನಿಗದಿ
ಒಬ್ಬ ಪ್ರವಾಸಿಗೆ ಟಿಕೆಟ್ 600 ರೂಪಾಯಿ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಮುಂಗಡ ಕಾಯ್ದಿರಿಸಲು ನೀವು www.ksrtc.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಜೊತೆಗೆ ಈ https://bit.ly/4ebRVmr ಲಿಂಕ್ ಅನ್ನು ಸಹ ಬಳಸಿ ನೀವು ಮಾಹಿತಿ ಪಡೆಯಬಹುದಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications