BMTC: ಟಿಕೆಟ್ ದರ ಏರಿಕೆ ಬಳಿಕ ಬಿಎಂಟಿಸಿ ದರ ಎಲ್ಲಿಗೆ, ಎಷ್ಟು?
ಬೆಂಗಳೂರು, ಜನವರಿ 05: ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದಂತೆ ರಾಜ್ಯದಲ್ಲಿ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಜನವರಿ 5 ರಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ. ಭಾನುವಾರ ಎಲ್ಲಿಂದ, ಎಲ್ಲಿಗೆ? ಎಷ್ಟು ದರ? ಎಂದು ಚರ್ಚೆಗಳು ಜೋರಾಗಿವೆ. ಪ್ರಯಾಣಿಕರು ಸರಿಯಾದ ಮಾಹಿತಿ ಇಲ್ಲದೇ ನಿರ್ವಾಹಕರ ಜೊತೆ ವಾಗ್ವಾದ ನಡೆಸುತ್ತಿರುವ ಪ್ರಕರಣಗಳು ಸಾಮಾನ್ಯವಾಗಿದೆ.
ಶನಿವಾರ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಪರಿಷ್ಕರಿಸಲು ಅಂತಿಮ ಆದೇಶವನ್ನು ಹೊರಡಿಸಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪುಷ್ಪ ವಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ. ಈ ಆದೇಶವನ್ನು ಸಚಿವ ಸಂಪುಟವು ದಿನಾಂಕ 02.01.2025ರಲ್ಲಿ ನೀಡಿರುವ ಅನುಮೋದನೆಯನ್ವಯ ಹೊರಡಿಸಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರು ನಗರದ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನರು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಭಾನುವಾರದಿಂದಲೇ ಬಿಎಂಟಿಸಿ ಬಸ್ ದರ ಪರಿಷ್ಕರಣೆಯಾಗಿದೆ. ಪ್ರಕಟಣೆಯಲ್ಲಿ ಪ್ರಮುಖ ಮಾರ್ಗದಲ್ಲಿ ಎಷ್ಟು ದರ ಪರಿಷ್ಕರಣೆ? ಎಂದು ಬಿಎಂಟಿಸಿ ಮಾಹಿತಿ ನೀಡಿದೆ.
ಪ್ರಮುಖ ಮಾರ್ಗ, ಹಾಲಿ ಇರುವ, ಪರಿಷ್ಕೃತ ದರ ಪಟ್ಟಿ
* 15E ಮೆಜೆಸ್ಟಿಕ್- ಕುಮಾರಸ್ವಾಮಿ ಲೇಔಟ್: 25 ರೂ. ಇದ್ದ ದರ 28 ರೂ.ಗೆ ಏರಿಕೆ
* 25A ಮಜೆಸ್ಟಿಕ್- ಬಿಟಿಎಂ ಲೇಔಟ್: 25 ರೂ. ನಿಂದ 28 ರೂ.
* 45D ಮೆಜೆಸ್ಟಿಕ್- ಎಜಿಎಸ್ ಲೇಔಟ್: 25 ರೂ. ನಿಂದ 28 ರೂ.
* 80A ಮೆಜೆಸ್ಟಿಕ್- ನಂದಿನಿ ಲೇಔಟ್: 25 ರೂ. ನಿಂದ 28 ರೂ.
* 90E ಮೆಜೆಸ್ಟಿಕ್ - ಯಶವಂತಪುರ ರೈಲು ನಿಲ್ದಾಣ: 20 ರೂ. ನಿಂದ 23 ರೂ.
* 96G ಮೆಜೆಸ್ಟಿಕ್ - ಮೆಜೆಸ್ಟಿಕ್- ಶಂಕರ್‌ನಾಗ್ ಬಸ್ ನಿಲ್ದಾಣ: 20 ರೂ. ನಿಂದ 23 ರೂ.
* 143 ಕೆಆರ್ ಮಾರ್ಕೆಟ್ - ನೀಲಸಂದ್ರ ಬಸ್ ನಿಲ್ದಾಣ: 20 ರೂ. ನಿಂದ 23 ರೂ.
* 171G ಮೆಜೆಸ್ಟಿಕ್ - ಕೋರಮಂಗಲ ಮೊದಲ ಬ್ಲಾಕ್: 25 ರೂ. ನಿಂದ 28 ರೂ.
* 210N ಮೆಜೆಸ್ಟಿಕ್ - ಉತ್ತರಹಳ್ಳಿ: 25 ರೂ. ನಿಂದ 28 ರೂ.
* 252 ಮೆಜೆಸ್ಟಿಕ್ - ಪೀಣ್ಯ 2ನೇ ಹಂತ : 25 ರೂ. ನಿಂದ 28 ರೂ.
* 300E ಶಿವಾಜಿನಗರ ಬಸ್ ನಿಲ್ದಾಣ - ಕೆಆರ್ ಪುರ: 25 ರೂ. ನಿಂದ 28 ರೂ.
* 276 ಮೆಜೆಸ್ಟಿಕ್ - ವಿದ್ಯಾರಣ್ಯಪುರ ಬಸ್ ನಿಲ್ದಾಣ: 25 ರೂ. ನಿಂದ 28 ರೂ.












Click it and Unblock the Notifications