BMTC: ಇನ್ಮುಂದೆ ಈ ದೂರದ ಜಿಲ್ಲೆಗಳಿಗೂ ಬಿಎಂಟಿಸಿ ಬಸ್ ಸೇವೆ: ಇಲ್ಲಿದೆ ಮಾಹಿತಿ
BMTC Good News: ರಾಜ್ಯ ರಾಜಧಾನಿ ಜೀವನಾಡಿ ಸಾರಿಗೆಯಾಗಿರುವ ಬಿಎಂಟಿಸಿ ಪ್ರಯಾಣಿಕ ಅನುಕೂಲಕ್ಕೆ ತಕ್ಕಂತೆ ಸೇವೆಯನ್ನು ವಿಸ್ತರಣೆ ಮಾಡುತ್ತಲಿದೆ. ಇದೀಗ ಎಬಿಎಂಟಿಸಿ ಬಸ್ ಸೇವೆಯನ್ನು 80 ಕಿಲೋ ಮೀಟರ್‌ವರೆಗೂ ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಬೆಂಗಳೂರು ಗ್ರಾಮಂತರ ಜಿಲ್ಲೆಗಳಿಗೆ ಈ ಸೇವೆ ಲಭ್ಯವಾಗಿದೆ ಎಂದು ತಿಳಿಸಿದೆ ಅಂತಾ ವರದಿಯಾಗಿದೆ. ಹಾಗಾದ್ರೆ, ಯಾವ್ಯವಾ ಮಾರ್ಗಗಳಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲಿರುವ ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿನಿತ್ಯ ಏನಿಲ್ಲ ಅಂದರೂ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಐಟಿ ಕಾರಿಡಾರ್, ವಸತಿ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಬಿಎಂಟಿಸಿ ಬಸ್‌ಗಳು ಮಹತ್ವದ ಪಾತ್ರ ವಹಿಸಿವೆ.

ಯಾವೆಲ್ಲಾ ಭಾಗಗಳಿಗೆ ಬಿಎಂಟಿಸಿ ಸೇವೆ?
ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳು ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ಸೇವೆ ಕಲ್ಪಿಸಲು ಸಿದ್ಧತೆ ನಡೆಸಿದೆ. ಈವರೆಗೂ ಬಿಎಂಟಿಸಿ ಬಸ್‌ಗಳು 40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಸಂಚಾರ ಮಾಡುತ್ತಿದ್ದರೆ. ಆದರೆ, ಇನ್ಮುಂದೆ ರಾಮನಗರ, ಕನಕಪುರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೂ ಸೇವೆ ವಿಸ್ತರಣೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ನಿರ್ಧಾರದಿಂದ ಪ್ರಯಾಣಿಕರಿಗೆ ಸಂತಸಗೊಂಡಿದ್ದಾರೆ ಎನ್ನಲಾಗಿದೆ.
ಸಂತಸಗೊಂಡ ಪ್ರಯಾಣಿಕರು
ಬಿಎಂಟಿಸಿ ಕೈಗೊಂಡಿರುವ ಹೊಸ ನಿರ್ಧಾರ ಪ್ರಯಾಣಿಕರಲ್ಲಿ ಹರ್ಷ ಮೂಡಿಸಿದೆ. ಇತ್ತಿಚೆಗೆ ನಗರ ವ್ಯಾಪ್ತಿಯೊಳಗೆ ಮಾತ್ರ ಸೀಮಿತವಾಗಿದ್ದ ಬಸ್ ಸೇವೆಯನ್ನು ಇದೀಗ ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ವಿಸ್ತರಿಸಲಾಗುತ್ತಿದೆ. ಈ ಕ್ರಮದಿಂದ ಸಾರ್ವಜನಿಕರಿಗೆ ಅಷ್ಟೇ ಅಲ್ಲದೆ, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ನಗರಕ್ಕೆ ಬರುತ್ತಿರುವವರು ಹಾಗೂ ಚಿಕಿತ್ಸಾ ಅಗತ್ಯಗಳಿಗೆ ಪ್ರಯಾಣಿಸುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಬಿಎಂಟಿಸಿಯಲ್ಲೇ ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರಿಸಿ ಸುಮಾರು 6,750 ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸುಮಾರು ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದು, ದಿನಕ್ಕೆ ಸರಾಸರಿ 13 ಲಕ್ಷ ಕಿಲೋ ಮೀಟರ್‌ಗಳಷ್ಟು ಸಂಚಾರ ಮಾಡುತ್ತವೆ. ಈಗ 80 ಕಿಲೋ ಮೀಟರ್‌ವರೆಗೆ ವಿಸ್ತರಣೆ ಮಾಡಲು ಮುಂದಾಗಿದೆ. ಈ ಮೂಲಕ ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಸಂಸ್ಥೆ ಮುಂದಾಗಿದೆ.
ಎಲ್ಲಿಂದ ಎಲ್ಲಿವರೆಗೂ ಬಿಎಂಟಿಸಿ ಬಸ್ ಸೇವೆ?
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ರಾಮನಗರ, ಬನಶಂಕರಿ ಬಸ್ ನಿಲ್ದಾಣದಿಂದ ಕನಕಪುರ, ಮೆಜಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಕಡೆಗೆ ಬಸ್ಸುಗಳು ಸಂಚರಿಸಲಿವೆ. ಈ ವಿಸ್ತರಣೆ ಪ್ರಯಾಣಿಕರ ಸಮಯ ಹಾಗೂ ವೆಚ್ಚ ಉಳಿತಾಯಕ್ಕೆ ಸಹಕಾರಿ ಆಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಬಿಎಂಟಿಸಿ ಬಸ್ ಸೇವೆಯ ಈ ಹೊಸ ಹೆಜ್ಜೆ ಗ್ರಾಮಾಂತರ ಪ್ರದೇಶಗಳ ಜನರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ವಿಶೇಷ ಸಂದರ್ಭಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಬಿಎಂಟಿಸಿ ಸೇವೆ
ಹಬ್ಬ-ಹರಿದಿನ ಸಂದರ್ಭಗಳಲ್ಲಿ ಪ್ರಯಾಣಿಕ ದಟ್ಟಣೆ ನಿಯಂತ್ರಣ ಮಾಡಲು ಬೇರೆ ಬೇರೆ ಜಿಲ್ಲೆಗಳಿಗೆ ಬಿಎಂಟಿಸಿ ಬಸ್‌ಗಳ ಸೇವೆಯನ್ನು ಒದಗಿಸಲಾಗುತ್ತದೆ. ಇದರಿಂದ ದಟ್ಟಣೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುವುದಲ್ಲದೆ, ಪ್ರಯಾಣಿಕರಿಗೂ ಕೂಡ ಹೆಚ್ಚು ಅನುಕೂಲ ಆಗಲಿದೆ. ಅದರಲ್ಲೂ, ದೀಪಾವಳಿ, ಚುನಾವಣೆಗಳ ಸಮಯ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬಿಎಂಟಿಸಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಬಂದಿದೆ.












Click it and Unblock the Notifications