ಸಾವಿರ ಕೋಟಿ ತಲುಪುತ್ತಿದೆ ಬಿಎಂಟಿಸಿ ಸಾಲದ ಬಾಬ್ತು
ಬೆಂಗಳೂರು, ಜು.9: ಬಿಎಂಟಿಸಿಯ ಆದಾಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಪರ್ಕವಾಗಿರುವ ಬಿಎಂಟಿಸಿ, 5 ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ.
ಕಳೆದ ಐದು ವರ್ಷಗಳಲ್ಲಿ 971,62 ಕೋಟಿ ಸಾಲ ಮಾಡಿದ್ದು, 262.02 ಕೋಟಿ ಬಡ್ಡಿ ಕಟ್ಟಿದೆ. 2017-18ರಲ್ಲಿ 329,29 ಕೋಟಿ ಸಾಲ ಪಡೆದಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ನಿಗಮದ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ರೂ ನೇರ ಸಹಾಯ ಘೋಷಿಸಿದೆ.
ವಾಸ್ತವದಲ್ಲಿ ಈ ಮೊತ್ತದಿಂದ ನಿಗಮಕ್ಕೆ ದೊಡ್ಡ ಚೇತರಿಕೆ ಏನೂ ಸಿಗುವುದಿಲ್ಲ, ಈಗ ಬೆಳೆದಿರುವ ಸಾಲದ ಮೊತ್ತಕ್ಕೆ ಸರ್ಕಾರದ ಈ ಅಲ್ಪ ಸಹಾಯಧನ ಕೇವಲ ಬಡ್ಡಿ ಪಾವತಿಗೆ ಸಾಕಾಗುತ್ತದೆ. ಬಿಎಂಟಿಸಿಯು ನಗರಾದ್ಯಂತ ಕಫಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ. ಇದರ ಸದ್ಬಕೆಯಲ್ಲಿ ನಿಗಮ ಎಡವುತ್ತಿದೆ. ಕೇವಲ ಬಸ್ ಕಾರ್ಯಾಚರಣೆಯಿಂದ ಆದಾಯ ಗಳಿಸಲು ಸಾಧ್ಯವಿಲ್ಲ.

ನಗರದಲ್ಲಿ ನಮ್ಮ ಮೆಟ್ರೋ ರೈಲು ಕಾಯಾಚರಣೆ ಆರಂಭವಾದಾಗಿನಿಂದ ನಿಗಮದ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ನಿತ್ಯ 52 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಇದೀಗ 46 ಲಕ್ಷಕ್ಕೆ ಇಳಿದಿದೆ. ಮೆಟ್ರೋ ರೈಲು ಪ್ರಯಾಣಿಕರಿಗಾಘಿ ಒದಗಿಸಿರುವ ಫೀಡರ್ ಬಸ್ ಸೇವೆಯಿಂದಲೂ ನಿಗಮಕ್ಕೆ ನಷ್ಟವಾಗುತ್ತಿದೆ.
ಈ ಫೀಡರ್ ಬಸ್‌ಗಳಿಗೂ ನಿರೀಕ್ಷಿತ ಪ್ರಮಾಣದ ಪ್ರಯಾಣಿಕರಿಲ್ಲ. ಹಾಗೆಂದು ಬಸ್ ಕಾರ್ಯಾಚರಣೆ ನಿಲ್ಲಿಸುವಂತಿಲ್ಲ, ಈ ಫೀಡರ್ ಬಸ್ ಸೇವೆಯಿಂದ ನಿಗಮಕ್ಕೆ 1.5 ಕೋಟಿ ರೂ. ನಷ್ಟವಾಗುತ್ತಿದೆ.












Click it and Unblock the Notifications