BMTC: 10,000 ಬಸ್ ಕೊರತೆ ಬಗ್ಗೆ ಟೀಕೆ: ಬರೀ ಟ್ವೀಟ್ ಮಾಡೋದಲ್ಲ ಚರ್ಚೆಗೂ ಬನ್ನಿ, ಮೋಹನ್ ದಾಸ್‌ಪೈಗೆ ಓಪನ್ ಸವಾಲ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಸೇವೆ ಸಲ್ಲಿಸುವ ಬಿಎಂಟಿಸಿ ಬಸ್‌ಗಳ ಕೊರತೆ 10,000ಕ್ಕೂ ಅಧಿಕವಿದೆ. ಇದರಲ್ಲಿ ಅರ್ಧಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದೆ. ಜನರಿಗೆ ಉತ್ತಮ ಸೇವೆ ಸಿಗುತ್ತಿಲ್ಲ. ಇಲಾಖೆ ಖರೀದಿ ಪ್ರಕ್ರಿಯೆ ವಿಳಂಬ ಕುರಿತು ಉದ್ಯಮಿ ಮೋಹನ್ ದಾಸ್ ಪೈ ಅವರು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪೈ ಅವರಿಗೆ ಬಹಿರಂಗ ಸವಾಲೆಸೆದಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಅವರು ಗುರುವಾರ ಎಕ್ಸ್ ಖಾತೆಯಲ್ಲಿ ಬೆಂಗಳೂರು ನಗರ ಸಾರಿಗೆ, ಬಸ್ ಖರೀದಿ, ಇಲಾಖೆ ಆಡಳಿತ ಕುರಿತು ವಿವರ ನೀಡಿದ್ದಾರೆ. ಈ ವೇಳೆ 'ಸಚಿವರಾಗಿ ನೀವು ಸಾರ್ವಜನಿಕರಿಗೆ ಉತ್ತಮ ಸೇವೆ ಖಚಿತಪಡಿಸುವಲ್ಲಿ ವಿಫಲರಾಗಿದ್ದೀರಿ' ಎಂದು ಟೀಕಿಸಿ ಮೋಹನ್ ದಾಸ್ ಪೈ ಅವರ ವಿರುದ್ಧ ಹರಿಹಾಯ್ದರು.

ಮುಖಾ ಮುಖಿ ಚರ್ಚೆಗೆ ಬನ್ನಿ: ಸಚಿವರು ಆಹ್ವಾನ
'ನೀವು ಬರೀ ಟ್ವೀಟ್ ಮಾಡುತ್ತಲೇ ಇರುತ್ತೀರಾ? ಅಥವಾ ಬಿಎಂಟಿಸಿ ವ್ಯವಸ್ಥಾಪಕರು ನಿಮ್ಮೊಂದಿಗೆ ಯಾವುದೇ ವೇದಿಕೆಯಲ್ಲೂ ಚರ್ಚಿಸಲು ಸಿದ್ಧರಿದ್ದಾರೆ. ನೇರವಾಗಿ ಬಂದು ಸತ್ಯವನ್ನು ಮುಖಾ ಮುಖಿ ಚರ್ಚೆ ಮಾಡಲು ಬನ್ನಿ. ನಿಮ್ಮ ದೃಷ್ಟಿಕೋನವು ಕೇವಲ ಪಕ್ಷಪಾತ ಮಾತ್ರವಲ್ಲದೇ ಮೂಲಭೂತವಾಗಿ ಮೂಢನಂಬಿಕೆಯಿಂದಲೂ ಕೂಡಿದೆ' ಎಂದ ಸಚಿವರು ಚರ್ಚೆಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಸರ್ಕಾರದ ಬಸ್ ಖರೀದಿ ಯೋಜನೆ: ಸರ್ಕಾರದ ವೈಫಲ್ಯ ಆರೋಪ
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ನಾಗರಿಕರೊಬ್ಬರು 'ಸರ್ಕಾರ ಹೊಸ ಯೋಜನೆಯಡಿ 4000ಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳ ಖರೀದಿಸಲಿದೆ. ಈ ಯೋಜನೆಯಡಿ ಎರಡು ವರ್ಷಗಳಲ್ಲಿ 10,000 ಬಸ್‌ಗಳನ್ನು ನಿಗಮಕ್ಕೆ ಸೇರ್ಪಡೆ ಮಾಡುವ ಗುರಿ ಇದೆ. ಆದರೆ ಬಸ್ ಕೊರತೆಯೇ 10,000 ಕ್ಕಿಂತ ಹೆಚ್ಚಿರುವಾಗ ಎರಡು ವರ್ಷಗಳಲ್ಲಿ ಆ ಕೊರತೆಯು 11,000 ಆಗಲಿದೆ. ಅಂದ ಮೇಲೆ ಸದ್ಯ ನಾಲ್ಕು ಸಾವಿರ ಬಸ್ ಸೇರ್ಪಡೆಯ ಚಿಂತನೆಯಿಂದ ಕೊರತೆಯ ಅರ್ಧದಷ್ಟು ನೀಗಿಸಿದಂತಾಗುವುದಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದರು.
ಸರ್ಕಾರದ ಈ ಹಿಂದಿನ ಪ್ರಕಟಣೆ, ಕ್ರಮಗಳ ವೇಗವನ್ನು ನೋಡಿದರೆ, ಎರಡು ವರ್ಷಗಳಲ್ಲಿ ನಾಲ್ಕು ಸಾವಿರ ಬಸ್‌ಗಳ ಖರೀದಿಯು ಆಗಿಬಿಡುತ್ತದೆ ಎಂದು ನನಗನಿಸುವುದಿಲ್ಲ. ಚಲನಶೀಲತೆಯ ಅಗತ್ಯಗಳನ್ನು ಪೂರೈಸಲು ಹೊಸ ಬಸ್‌ಗಳನ್ನು ನಿಯೋಜಿಸುವ ಡೇಟಾ ಆಧಾರಿತ ವ್ಯವಸ್ಥೆಯನ್ನು ಬಿಎಂಟಿಸಿ ಹೊಂದಿಲ್ಲ. ಮಾರ್ಗ ತರ್ಕಬದ್ಧಗೊಳಿಸುವಿಕೆ ಅಪೂರ್ಣವಾಗಿದೆ. ಇದೆಲ್ಲವನ್ನು ಸಮಾನವಾಗಿ ಪರಿಹರಿಸಬೇಕು. ಇಲ್ಲವಾದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ.
ಸರ್ಕಾರದ ಈ ಮೇಲಿನ ಗುರಿಗಳು ಘೋಷಣೆ ಆಗಿದ್ದು ಫಲಿತಾಂಶ ತಲುಪುವ ಗುರಿಗಳಲ್ಲ. 500 ಮೀಟರ್ ಒಳಗೆ ಬಸ್ ನಿಲ್ದಾಣಗಳು ಇರಬೇಕು. ಮತ್ತು ಈ ನಿಲ್ದಾಣಗಳಲ್ಲಿ ಕನಿಷ್ಠ ಪ್ರತಿ ಅರ್ಧಗಂಟೆಗೊಮ್ಮೆ ಬಸ್ ಸೇವೆ ಇರಬೇಕು. ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ಎಕ್ಸ್ ಪೋಸ್ಟ್ ಮಾಡಿದ್ದರು. ಇದನ್ನು ಉದ್ಯಮಿ ಮೋಹನ್ ದಾಸ್ ಪೈ ಅವರು ರಿಪೋಸ್ಟ್ ಮಾಡಿಕೊಂಡು ಸರ್ಕಾರವನ್ನು ಟೀಕಿಸಿದ್ದರು.

ಖಾಸಗಿಯವರಿಗೆ ಅವಕಾಶ ನೀಡಿ: ಮೋಹನ್ ದಾಸ್ ಪೈ
'ಕಳೆದ 3 ವರ್ಷಗಳಿಂದ ಬೆಂಗಳೂರಿನ ನಾಗರಿಕರು ಬಸ್‌ಗಳ ಕೊರತೆ ಎದುರಿಸುತ್ತಿದ್ದಾರೆ. ಸರಿಯಾದ ಸಾರ್ವಜನಿಕ ಸಾರಿಗೆ ಸೇವೆ ಸಿಗುತ್ತಿಲ್ಲ. ದಯವಿಟ್ಟು ಖಾಸಗಿ ಬಸ್‌ಗಳಿಗೆ ಸೇವೆ ಒದಗಿಸಲು ಅವಕಾಶ ನೀಡಿ. ಸಚಿವರಾಗಿ ನೀವು ಪಿಎಸ್‌ಯು (Public Sector Undertakings) ಮಾತ್ರ ಕೆಲಸ ಮಾಡುತ್ತದೆ ಎಂದು ಹೇಳುವ ನಿಮ್ಮ ವರ್ತನೆ ಸರಿಯಲ್ಲ. ನಿಮ್ಮ ಮೂಢನಂಬಿಕೆಯ ಮನೋಭಾವದಿಂದಲೇ ಸಾಕಷ್ಟು ಸಾರ್ವಜನಿಕ ಸಾರಿಗೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೀರಿ. ಏಕೆ? ಸರ್ಕಾರವಾಗಲಿ, ಖಾಸಗಿಯವರಾಗಲಿ ಯಾರು ಒದಗಿಸಿದರೂ ಜನರಿಗೆ ಸಾರ್ವಜನಿಕ ಸಾರಿಗೆಯ ಅಗತ್ಯವಿದೆ ಎಂದು ಹೇಳಿದ್ದರು.
ನೀವು ಬ್ಯಾಲೆನ್ಸ್ ಶೀಟ್ ಮಾತ್ರವೇ ನೋಡುತ್ತೀರಿ: ಸಚಿವ
ಇದಕ್ಕೆ ಪ್ರತಿಕ್ರಿಯಿಸಿರುವ ರಾಮಲಿಂಗಾ ರೆಡ್ಡಿ ಅವರು ಮುಖಾ ಮುಖಿ ಚರ್ಚೆಗೆ ಕರೆದರು. ನಿಮ್ಮ ದೃಷ್ಟಿಕೋನ ಮೂಢನಂಬಿಕೆಯಿಂದ ಕೂಡಿದೆ. ನೀವು ಸಾರ್ವಜನಿಕ ಸೇವೆ ನೋಡುವ ಬ್ಯಾಲೆನ್ಸ್ ಶೀಟ್ ಅನ್ನು ನೋಡುತ್ತೀರಿ. ನಾನು 1.5 ಕೋಟಿ ನಾಗರಿಕರನ್ನು ನೋಡುತ್ತೇನೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ 650 ಕೋಟಿಗೂ ಅಧಿಕ ಉಚಿತ ಪ್ರಯಾಣ ನೀಡಿದ್ದೇವೆ. ಇದು ಕೇವಲ "ಯೋಜನೆ" ಅಲ್ಲ. ಇದು ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಚಲನಶೀಲತೆ-ನೇತೃತ್ವದ ಆರ್ಥಿಕ ಸಬಲೀಕರಣವಾಗಿದೆ ಎಂದು ತಿರುಗೇಟು ನೀಡಿದರು.
ಖಾಸಗಿಯವರಿಗಿಂತ ಭಿನ್ನವಾಗಿ ಸೇವೆ ನೀಡುತ್ತಿದ್ದೇವೆ. ದೂರದ ಹಳ್ಳಿಯಲ್ಲಿ ವಿದ್ಯಾರ್ಥಿ ಮತ್ತು ಗ್ರಾಮೀಣ ನಾಗರಿಕರಿಗೆ ಬಸ್ ಸೇವೆ ಇದೆ. ಅದಕ್ಕಾಗಿ 30ರಷ್ಟು ನಷ್ಟ ಎದುರಾದರೂ ಬಸ್ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಶೇಕಡಾ 40ರಷ್ಟು ಲಾಭವು ದೂರ ಮಾರ್ಗದ ಕಾರ್ಯಾರಣೆಯಿಂದ ಉಳಿಯುತ್ತದೆ. ರಾಜ್ಯಾದ್ಯಂತ ಶೇಕಡಾ 98ರಷ್ಟು ಹಳ್ಳಿಗಳಿಗೆ ಬಸ್ ಸಂಪರ್ಕವಿದೆ. ಇದು ನಾವು ಸಮಾಜಕ್ಕೆ ಸಲ್ಲಿಸುವ ಸೇವೆ ರೀತಿ ಎಂದು ಸಚಿವರು ವಿವರಿಸಿದರು.
For Minister @RLR_BTM All we have got is shortage of buses and lack of public transport for last 3 years. (Earlier too) Please allow private buses to provide service. As Minister you have thoroughly failed to ensure adequate public transport because of your dogmatic attitude… https://t.co/Is2FC17Z8p
— Mohandas Pai (@TVMohandasPai) January 29, 2026
ರಾಜ್ಯದಲ್ಲಿ 26,054 ಬಸ್, ಬೆಂಗಳೂರಲ್ಲಿ 66,000 ಟ್ರಿಪ್ ಸೇವೆ
ಕರ್ನಾಟಕ ಸಾರಿಗೆ ಇಲಾಖೆ 26,054 ಬಸ್‌ಗಳನ್ನು ನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮಾತ್ರ, ನಾವು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತೇವೆ. 1,686 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ 7,108 ಬಸ್‌ಗಳ ಸಮೂಹದೊಂದಿಗೆ, ನಾವು ಪ್ರತಿದಿನ 13 ಲಕ್ಷ ಕಿ.ಮೀ ಮತ್ತು 66,000 ಟ್ರಿಪ್‌ಗಳ ಸೇವೆ ನೀಡುತ್ತಿದ್ದೇವೆ. ಇದು ದೇಶದಲ್ಲಿ ಅತೀ ದೊಡ್ಡ ದಾಖಲೆ ಎಂದರು.
5,800ಕ್ಕೂ ಅಧಿಕ ಹೊಸ ಬಸ್ ಖರೀದಿ
ಈ ಪ್ರಮಾಣ ಸೇವೆ ಮತ್ತು ದಕ್ಷ ಆಡಳಿತಕ್ಕೆ ಹೋಲಿಕೆ ಆಗುವ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತದ ಒಂದೇ ಒಂದು ನಗರ ಅಥವಾ ರಾಜ್ಯವನ್ನು ನನಗೆ ತೋರಿಸಿ ಎಂದು ಗುಡುಗಿದ್ದಾರೆ. ಕಳೆದ 2 ವರ್ಷಗಳಲ್ಲಿ 5,800ಕ್ಕೂ ಅಧಿಕ ಹೊಸ ಬಸ್‌ಗಳನ್ನು ಖರೀದಿಸಿದ್ದೇವೆ. 2026 ರ ಮಾರ್ಚ್ ತಿಂಗಳಲ್ಲಿ ಇನ್ನೂ 2,000ಕ್ಕೂ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ತಿಳಿಸಿದರು.
Mr. @TVMohandasPai, Our BMTC MD is enough to handle a face-to-face debate with you on any platform.
— Ramalinga Reddy (@RLR_BTM) January 29, 2026
Kindly come and discuss the facts with them directly. Are you ready to step up, or will you just keep tweeting?
Your view is not just biased—it is fundamentally dogmatic.
You… https://t.co/F2nR7Tk1yN
ಬಿಜೆಪಿ ಅವಧಿಯಲ್ಲಿ ಪ್ರಶ್ನಿಸಲಿಲ್ಲ ಏಕೆ?
ಬಿಜೆಪಿ ಅಧಿಕಾರಾವಧಿಯಲ್ಲಿ (2019-2023) ನೇಮಕಾತಿ ಸ್ಥಗಿತಗೊಂಡಿತ್ತು. ಸಾರಿಗೆ ನಿಗಮಗಳನ್ನು ಕೊಳೆಯಲು ಬಿಟ್ಟಾಗ, ನೀವು ಒಂದೇ ಒಂದು ಪ್ರಶ್ನೆಯನ್ನು ಎತ್ತಲಿಲ್ಲ ಏಕೆ?. ಜನಪರ ಸರ್ಕಾರ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ನಿಮ್ಮ "ಕಾರ್ಪೊರೇಟ್ ಕಾಳಜಿ" ಏಕೆ ಎಚ್ಚರಗೊಳ್ಳುತ್ತದೆ? ಲಾಭ ಕಡಿಮೆಯಾದ ಕ್ಷಣ ಖಾಸಗಿ ನಿರ್ವಾಹಕರು ಮುಚ್ಚುತ್ತಾರೆ. ಬೆಂಗಳೂರಿನ ದಿನಗೂಲಿ ಗಳಿಸುವ ಸಾಮಾನ್ಯ ವ್ಯಕ್ತಿಗೆ ಅದು ಹೇಗೆ ಸಹಾಯ ಮಾಡುತ್ತದೆ? ಎಂದು ಪೈ ಅವರನ್ನು ಪ್ರಶ್ನಿಸಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications