ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರದ ಕಾಯಿಲೆ

ಸುದ್ದಿಗಾರರ ಜೊತೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಮುಗಿದ ಕೂಡಲೇ ರಾಜ್ಯ ಸರ್ಕಾರ ಬಿಎಂಟಿಸಿ ದರ ಏರಿಕೆ ಮಾಡಿರುವುದು ಘೋರ ಅನ್ಯಾಯ. ಬಿಎಂಟಿಸಿ ವರ್ಷದೊಳಗೆ ಮೂರು ಬಾರಿ ದರವನ್ನು ಏರಿಕೆ ಮಾಡಿದೆ. ಬೆಲೆ ಏರಿಕೆ ಕಾಂಗ್ರೆಸ್ ಕೆಟ್ಟ ಜಾಯಮಾನ ಎಂದು ಅವರು ರಾಜ್ಯ ಸರ್ಕಾರವನ್ನು ಛೇಡಿಸಿದ್ದಾರೆ.
ದರ ಹೆಚ್ಚಿಸಿದರೆ ಎಲ್ಲಾ ಸರಿ ಹೋಗುತ್ತದೆ ಎಂದು ಬಿಎಂಟಿಸಿ ತಿಳಿದುಕೊಂಡಿದೆ.ಸರ್ಕಾರ ಈ ಕೂಡಲೇ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು.ಬೆಲೆ ಏರಿಸಿದ್ದನ್ನು ಖಂಡಿಸಿ ಶನಿವಾರ ಬಿಜೆಪಿ ಯುವ ಮೋರ್ಚಾ ಘಟಕದಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.[ಬಿಎಂಟಿಸಿ ಆಘಾತ: ಪ್ರಯಾಣಿಕರಿಗೆ ದರ ಏರಿಕೆ ಶಾಕ್]
ಆಮ್ ಆದ್ಮಿ ಖಂಡನೆ: ಒಂದೇ ವರ್ಷದೊಳಗೆ ಬಿಎಂಟಿಸಿ ಮತ್ತೊಮ್ಮೆ ದರವನ್ನು ಏರಿಸಿದ್ದಕ್ಕೆ ಆಮ್ ಆದ್ಮಿ ಪಕ್ಷ ನಾಯಕ,ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಖಂಡಿಸಿದ್ದಾರೆ. ಸಾಮಾನ್ಯ ವರ್ಗ ಮತ್ತು ಬಡ ಜನರು ಹೆಚ್ಚುವರಿಯಾಗಿ 300 ರೂ ಪಾವತಿ ಮಾಡಬೇಕಾದ ಸೃಷ್ಟಿ ಎದುರಾಗಿದೆ. ಬಿಎಂಟಿಸಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಎಸ್‌ಯುಸಿಐ ಖಂಡನೆ: ಬಿಎಂಟಿಸಿ ದರ ಏರಿಕೆಯನ್ನು ಸೋಶಿಯಲಿಷ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ ಸಂಘಟನೆ ಖಂಡಿಸಿದೆ. ದಿನದ ಪಾಸ್,ಬಸ್‌ದರವನ್ನು ಏರಿಸುವ ಮೂಲಕ ಬಡ ಜನರ ಮೇಲೆ ಸರ್ಕಾರ ಬರೆ ಏಳೆದಿದೆ. ಬಿಎಂಟಿಸಿ ಈ ಕೂಡಲೇ ದರ ಏರಿಕೆಯನ್ನು ಹಿಂಪಡೆಯದಿದ್ದರೆ ಹೋರಾಟ ಮಾಡುವುದಾಗಿ ಎಸ್‌ಯುಸಿಐನ ಸಂಘಟನೆಯ ಕಾರ್ಯದರ್ಶಿ ಡಾ.ಡಿ.ಆರ್ ಮಂಜುನಾಥ್ ಎಚ್ಚರಿಸಿದ್ದಾರೆ.ಪ್ರತಿ ವರ್ಷ ನೂರಾರು ಬಸ್‌ಗಳನ್ನು ಖರೀದಿಸದೇ ಈಗ ಇರುವ ಬಸ್‌ಗಳಲ್ಲೇ ಪ್ರಯಾಣ ದರವನ್ನು ಇಳಿಸಬೇಕೆಂದು ಬಿಎಂಟಿಸಿಯನ್ನು ಮಂಜುನಾಥ್ ಆಗ್ರಹಿಸಿದ್ದಾರೆ.












Click it and Unblock the Notifications