ಹೆಬ್ಬಾಳ ಬಳಿ ಮೆಟ್ರೋಗಾಗಿ ₹551 ಕೋಟಿ ನೀಡಲು ಬಿಎಂಆರ್‌ಸಿಎಲ್‌ ಸಿದ್ಧ: ಪಿಸಿ ಮೋಹನ್‌

ಬೆಂಗಳೂರಿನಲ್ಲಿ ಹೆಬ್ಬಾಳದ ಬಳಿ ನಿರ್ಮಾಣವಾಗಲಿರುವ ನಮ್ಮ ಮೆಟ್ರೋ ಯೋಜನೆಗೆ ಭೂಮಿಯ ಕೊರತೆ ಎದುರಾಗಿದ್ದು, ಮಿಲಿಟರಿ ಹಾಗೂ ಇನ್ನಿತರ ಭೂಮಿಯನ್ನು ಮೆಟ್ರೋ ನಿಲ್ದಾಣಕ್ಕಾಗಿ ಪಡೆಯುವ ಕುರಿತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್‌ ಇಂದು ಮಹತ್ವದ ಸಭೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಸಂಸದ ಪಿಸಿ ಮೋಹನ್‌, ಹೆಬ್ಬಾಳದ 45 ಎಕರೆ ಭೂಮಿ ಬಿಎಂಆರ್‌ಸಿಎಲ್‌ಗೆ ಹೋಗಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ಆಸಕ್ತಿಯ ಕೊರತೆಯಿಂದಾಗಿ ಬೆಂಗಳೂರು ಮೆಟ್ರೋ ನಿರ್ಮಾಣ ಕಾರ್ಯವು ಈಗಾಗಲೇ ವಿಳಂಬವಾಗಿದೆ. ಹಳದಿ ಮಾರ್ಗ ಸಿದ್ಧವಾಗಿದೆ. ಆದರೆ, ರೈಲು ಖರೀದಿಯಲ್ಲಿನ ವಿಳಂಬದಿಂದಾಗಿ ಸ್ಥಗಿತಗೊಂಡಿದೆ. ಪಿಂಕ್ ಮಾರ್ಗವು 2026 ರವರೆಗೆ ಸಂಪೂರ್ಣವಾಗಿ ತೆರೆಯುವುದಿಲ್ಲ. ಮತ್ತೊಂದೆಡೆ ವಿಮಾನ ನಿಲ್ದಾಣಕ್ಕೆ ನೀಲಿ ಮಾರ್ಗವನ್ನು 2027ಕ್ಕೆ ಮುಂದಕ್ಕೆ ತಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

BMRCL Ready To Pay 551 Crore For 45 Acres In Hebbal Metro BJP MP PC Mohan

ಹೆಬ್ಬಾಳದ 45 ಎಕರೆ ಭೂಮಿ ನಮ್ಮ ಮೆಟ್ರೋಗೆ (ಬಿಎಂಆರ್‌ಸಿಎಲ್‌) ಹೋಗಬೇಕು. ಮೂರು ಮೆಟ್ರೋ ಮಾರ್ಗಗಳು ಮತ್ತು ಉಪನಗರ ರೈಲು ನಿಲ್ದಾಣವನ್ನು ಯೋಜಿಸಲಾಗಿದ್ದು, ಇದು ಬೆಂಗಳೂರಿನ ಸಾರಿಗೆ ಭವಿಷ್ಯಕ್ಕೆ ಅತಿ ಪ್ರಮುಖವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು ಅನುಮೋದಿಸಿದೆ. ಬಿಎಂಆರ್‌ಸಿಎಲ್ ಕೂಡ 551.15 ಕೋಟಿ ರೂಪಾಯಿ ಪಾವತಿಸಲು ಸಿದ್ಧವಾಗಿದೆ. ಕರ್ನಾಟಕ ಸರ್ಕಾರವು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಿಂತ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನ ಪ್ರಯಾಣಿಕರಿಗೆ ಮತ್ತಷ್ಟು ಸುಲಭ ಸಾರಿಗೆ ಸೇವೆ ಒದಗಿಸಲು ಮೆಟ್ರೋ, ಸುರಂಗ ರಸ್ತೆ, ರಸ್ತೆ ಸಾರಿಗೆ ಮತ್ತಿತರ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ಯೋಜನೆಗಳ ವಿಸ್ತರಣೆಗೆ ಸಂಬಂಧಿಸಿದಂತೆ ಇಂದು ವಿಧಾನಸೌಧದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್‌ ಅವರೊಂದಿಗೆ ಡಿಕೆ ಶಿವಕುಮಾರ್‌ ಸಮಾಲೋಚನೆ ನಡೆಸಿದ್ದಾರೆ.

BMRCL Ready To Pay 551 Crore For 45 Acres In Hebbal Metro BJP MP PC Mohan

ಹೆಬ್ಬಾಳದಲ್ಲಿ 45 ಎಕರೆ ಭೂಮಿಯಲ್ಲಿ ಸುರಂಗ ಮತ್ತು ಮೆಟ್ರೋ ಎಲ್ಲವೂ ಅಲ್ಲಿ ಒಟ್ಟಿಗೆ ಬರುತ್ತವೆ. ಏಕೆಂದರೆ ಅದು ನಗರದ ಒಂದು ಪ್ರಮುಖ ಜಂಕ್ಷನ್ ಆಗಿದೆ. ನಾವು ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದೇವೆ. ಹೇಗಾದರೂ ನಾವು ಅವರಿಗೆ ಪರಿಹಾರದ ಹಣ ಪಾವತಿಸುತ್ತೇವೆ. ಆದರೆ ಯಾವ ಕಾರಣಕ್ಕೂ ನಾವು ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದು ಬೆಂಗಳೂರಿನ ಪ್ರವೇಶ ಸೆಂಟರ್‌ ಆಗಿದ್ದು, ನಾವು ಇಡೀ ಪ್ರದೇಶವನ್ನು ಉನ್ನತೀಕರಿಸಲು ಬಯಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Take a Poll

ಏನಿದು ಯೋಜನೆ?

ಹೆಬ್ಬಾಳ ಮಾರ್ಗವಾಗಿ ಏರ್‌ಪೋರ್ಟ್‌ವರೆಗೆ ನಮ್ಮ ಮೆಟ್ರೋ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಆದರೆ ಹೆಬ್ಬಾಳ ಬಳಿ 45 ಎಕರೆ ಜಮೀನಿಗಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಸಲ್ಲಿಸಿದ್ದ ಪ್ರಸ್ತಾಪದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೆಬ್ಬಾಳದ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 45 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ. ಇದನ್ನು ತಮಗೆ ಹಸ್ತಾಂತರಿಸುವಂತೆ ಬಿಎಂಆರ್‌ಸಿಎಲ್‌ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿತ್ತು. ಕೆಐಎಡಿಬಿ ಅಧೀನದಲ್ಲಿರುವ 45 ಎಕರೆ ಜಮೀನಿನಲ್ಲಿ ಬಹು ಮಾದರಿಯ ಸಾರಿಗೆ ಕೇಂದ್ರ ನಿರ್ಮಾಣ ಮಾಡಲು ಮೆಟ್ರೋ ಯೋಜನೆ ರೂಪಿಸಿದೆ. ಹಾಗಾಗಿ ಆ ಜಮೀನು ನೀಡುವಂತೆ ಮೆಟ್ರೊ ನಿಗಮ ರಾಜ್ಯ ಸರ್ಕಾರಕ್ಕೆ ಪಟ್ಟು ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+