BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
ಬೆಂಗಳೂರು, ಏಪ್ರಿಲ್, 19: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ಪಾದಚಾರಿ ಸೇತುವೆ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ಘೋಷಣೆ ಮಾಡಿದೆ. ಈ ಯೋಜನೆಯು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಹಾಗಾದರೆ ಇದಕ್ಕೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಮೇಲ್ಸೇತುವೆ ನಿರ್ಮಾಣವಾದರೆ, ಮೆಟ್ರೋ ಪ್ರಯಾಣಿಕರು ಮತ್ತು ಪಾದಚಾರಿಗಳಿಗೆ ತುಂಬಾ ಸಹಾಯ ಆಗಲಿದೆ. ಪಾದಚಾರಿ ಸೇತುವೆಯು ಹೆದ್ದಾರಿಯ ಎರಡು ಬದಿಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಮತ್ತು ಇಲ್ಲಿನ ಸ್ತಳೀಯ ನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲದಂತೆ ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದೆಡೆಗೆ ಹೋಗಲು ಸಹಾಯ ಆದಂತಾಗುತ್ತದೆ.

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು, ಎಸಿಎಸ್ ಎಂಜಿನಿಯರಿಂಗ್ ಕಾಲೇಜು, ರಾಜರಾಜೇಶ್ವರಿ ದಂತ ಕಾಲೇಜು, ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಆಸ್ಪತ್ರೆ, ಮತ್ತು ಐಸಿಎಫ್‌ಎಐ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಈ ಸೇತುವೆ ತುಂಬಾ ಪ್ರಯೋಜನಾ ಆಗಲಿದೆ.
ಇನ್ನು ಇಲ್ಲಿನ ಮೆಟ್ರೋ ನಿಲ್ದಾಣಕ್ಕೆ ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು 10,000ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಲೇ ಇರುತ್ತಾರೆ. ಸೇತುವೆ ನಿರ್ಮಾಣವಾದರೆ, ಪ್ರಯಾಣಿಕರಿಗೆ ತುಂಬಾ ಪ್ರಯೋಜನಾಕಾರಿಯಾದಂತಾಗುತ್ತದೆ.
ಇನ್ನು ಮೇಲ್ಸೇತುವೆಯು ₹2.22 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಇದು ಮೆಟ್ಟಿಲುಗಳು ಮತ್ತು ಲಿಫ್ಟ್‌ಗಳನ್ನು ಒಳಗೊಂಡಿರುತ್ತದೆ. ಈ ಮೂಲಸೌಕರ್ಯವು ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸುವವರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳಿಗೆ ಸುರಕ್ಷತೆ ದೃಷ್ಟಿಯಿಂದ ತುಂಬಾ ಪ್ರಯೋಜನಾವಾಗಲಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹೇಳಿದ್ದೇನು?: ಈ ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದೆಡೆಗೆ ದಾಟುವುದೇ ತುಂಬಾ ಕಷ್ಟಕರವಾಗಿತ್ತು. ಇನ್ನು ಈ ಸೇತುವೆ ನಿಇರ್ಮಾಣ ಆದರೆ ಸುರಕ್ಷಿತವಾಗಿ ದಾಟಲು ನಮಗೆ ತುಂಬಾ ಸುಲಭವಾಗುತ್ತದೆ ಎಂದು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಇಲ್ಲಿನ ಸಮೀಪದ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, ಈ ಸೇತುವೆಯು ವಿಶೇಷವಾಗಿ ಸಂಚಾರ ದಟ್ಟಣೆ ಸಂದರ್ಭದಲ್ಲಿ ನಮ್ಮ ಸಮಯವನ್ನು ಉಳಿಸುತ್ತದೆ ಮತ್ತು ಸುರಕ್ಷತೆಯನ್ನು ಸುಧಾರಿಸುತ್ತದೆ. ಪ್ರಸ್ತುತ, ಹೆಚ್ಚೆಚ್ಚು ವಾಹನಗಳು ಬಿಡುವಿಲ್ಲದೆ ಬುರುವುದರಿಂದ ನಾವು ರಸ್ತೆ ದಾಟಲು ತುಂಬಾ ಕಷ್ಟ ಪಡುವಂತಾಗಿದೆ ಎಂದು ಹೇಳಿದ್ದಾರೆ.
"ಹೆಚ್ಚಿನ ಸಂಚಾರ ದಟ್ಟಣೆಯಿಂದಾಗಿ ಹೆದ್ದಾರಿಯನ್ನು ದಾಟುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು ಹೊಸ ಸೇತುವೆ ನಿರ್ಮಾವಾದರೆ, ದೊಡ್ಡ ಪರಿಹಾರ ಸಿಕ್ಕಂತಾಗುತ್ತದೆ ಮತ್ತು ನಮ್ಮ ದೈನಂದಿನ ಪ್ರಯಾಣವನ್ನು ಸುಧಾರಿಸಿದಂತಾಗುತ್ತದೆ," ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ ಅಂತಾ ದಿ ಹಿಂದೂ ವರದಿ ಮಾಡಿದೆ. ಈ ಸೇತುವೆಗೆ ಹೆಚ್ಚುವರಿಯಾಗಿ 100 ಮೀಟರ್ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ, ಮೆಟ್ರೊ ನಿಲ್ದಾಣ ಇರುವ ಕಡೆಗೆ ಈ ಸೇತುವೆ ಸಂಪರ್ಕಿಸುತ್ತದೆ ಎಂದು ತಿಳಿದುಬಂದಿದೆ.












Click it and Unblock the Notifications