ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತೂ ಇಂತೂ ಈಡೇರಿದ ಮೆಟ್ರೋ ನೌಕರರ ಬೇಡಿಕೆಗಳು

By Nayana
|
Google Oneindia Kannada News

ಬೆಂಗಳೂರು, ಜೂನ್ 23: ಮೆಟ್ರೋ ರೈಲಿಗೆ ಆರು ಬೋಗಿಗಳ ಅಳವಡಿಕೆ ಜತೆಯಲ್ಲೇ ಮೆಟ್ರೋ ರೈಲು ನಿಗಮದ ಸಿಬ್ಬಂದಿಗಳ ಬಹುಕಾಲದ ಬೇಡಿಕೆಗೆ ಬಿಎಂಆರ್‌ಸಿಎಲ್ ಅಸ್ತು ಎಂದಿದೆ.

ನಮ್ಮ ಮೆಟ್ರೋದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸಾವಿರಾರು ಸಿಬ್ಬಂದಿಯಿದ್ದು, ಅವರು ಸಲ್ಲಿಸಿದ್ದ ಹಣಕಾಸು ಸಂಬಂಧಿತ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಸಮ್ಮತಿಸಿ, ನಿಗಮ ವ್ಯವಸ್ಥೆ ಮಾಡಿಕೊಟ್ಟಿದೆ.

ನಮ್ಮ ಮೆಟ್ರೋಗೆ ಆರು ಕೋಚ್‌ ಸೇವೆಯ ಗರಿ!ನಮ್ಮ ಮೆಟ್ರೋಗೆ ಆರು ಕೋಚ್‌ ಸೇವೆಯ ಗರಿ!

ಹಣಕಾಸು ಬೇಡಿಕೆಯಡಿ ನೌಕರರು ಕೋರಿದ್ದ ರಾತ್ರಿ ಪಾಳಿ ಭತ್ಯೆ, ಹೆಚ್ಚುವರಿ ಅವಧಿಯ ಕೆಲಸದ ಭತ್ಯೆ, ವಾಶಿಂಗ್ ವೆಚ್ಚ ಮತ್ತು ಪ್ರಯಾಣ ಭತ್ಯೆಯನ್ನು ನಿಗಮ ನೀಡಲಿದೆ. ಜತೆಗೆ ರಜಾದಿನಗಳಂದು ಹೆಚ್ಚುವರಿ ಕೆಲಸ ಮಾಡಿದಲ್ಲಿ, ಅದಕ್ಕೂ ಭತ್ಯೆ ಲಭ್ಯವಾಗಲಿದೆ.

BMRCL fulfills employees many demands finally

ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಮ್ಮ ಮೆಟ್ರೋ ನೌಕರರು ಮುಷ್ಕರ ನಡೆಸುವ ಆಲೋಚನೆ ಮಾಡಿದ್ದರು, ಆದರೆ ಕೊನೆಯ ಹಂತದಲ್ಲಿ ಹೈಕೋರ್ಟ್‌ ಬಿಎಂಆರ್‌ಸಿಎಲ್‌ ಅಧಿಕಾರಿಗಳ ಜತೆ ಸಂದಾನ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು, ಇದಾದ ಬಳಿಕ ಹಲವಾರು ಬಾರಿ ಸಂದಾನ ಸಭೆಗಳು ವಿಫಲವಾಗಿದ್ದವು. ಆದರೆ ಇದೀಗ ಅಧಿಕಾರಿಗಳು ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

ಹಣಕಾಸು ರಹಿತ ಬೇಡಿಕೆಗಳ ಪೈಕಿ, ಬಿಎಂಆರ್‌ಸಿಎಲ್ ಡಿಪೋದಲ್ಲಿ ಈಗಿರುವ ಕ್ಯಾಂಟಿನ್‌ಗಳಲ್ಲಿ ಸಬ್ಸಿಡಿ ದರದಲ್ಲಿ ಆಹಾರ ವಿತರಣೆ, ಬಿಎಂಆರ್‌ಸಿಎಲ್‌ ಉದ್ಯೋಗಿಗಳ ಕನ್ನಡ ಸಂಘಕ್ಕೆ ಮಾನ್ಯತೆ, 100ಕ್ಕೂ ಅಧಿಕ ಮಹಿಳಾ ಉದ್ಯೋಗಿಗಳಿರುವ ಸ್ಥಳದಲ್ಲಿ ಅನುಕೂಲವಾಗುವಂತೆ ವಿಶ್ರಾಂತಿ ಕೊಠಡಿ ಸೌಲಭ್ಯ, ಕೆಂಪೇಗೌಡ ನಿಲ್ದಾಣದಲ್ಲಿ 108 ಆಂಬುಲೆನ್ಸ್‌ಗೆ ಕಾಯಂ ನಿಲುಗಡೆ ವ್ಯವಸ್ಥೆ, ವಾರ್ಷಿಕ ಪ್ರಗತಿ ಪರಿಶೀಲನಾ ವರದಿ ಸಲ್ಲಿಕೆ.

BMRCL fulfills employees many demands finally

ಈಗಿರುವ ಸಮವಸ್ತ್ರ ಹೊರತುಪಡಿಸಿ ಹೆಚ್ಚುವರಿ ಜತೆ ಯೂನಿಫಾರ್ಮ್ ವಿತರಣೆ ಮತ್ತು ಸಿ ಅಂಡ್ ಆರ್‌ ನಿಯಮದ ಪ್ರಕಾರ ಸೌಲಭ್ಯ, ಬಡ್ತಿಗೆ ಕ್ರಮ ಸಹಿತ ಪ್ರಮುಖ ಬೇಡಿಕೆಗಳನ್ನು ನಿಗಮ ಈಡೇರಿಸಿದೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿಗಮ ಮತ್ತು ಸರಕಾರದ ವಿರುದ್ಧ ನಮ್ಮ ಮೆಟ್ರೋ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು.

English summary
The BMRCL has approved many demands including financial issues raised by the Namma Metro operational and maintenances employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X