Namma Metro: ಹಳದಿ ಮಾರ್ಗದಲ್ಲಿ ಏನಿದು ಹೊಸ ಗೊಂದಲ! ಪ್ರಯಾಣಿಕರು ದಂಡ ಕಟ್ಟಬೇಕೆ?

ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ನಾಗರಿಕರು ಮೂರು ವರ್ಷಗಳಿಂದ ಕಾಯುತ್ತಿದ್ದ 19 ಕಿಲೋ ಮೀಟರ್ 'ಹಳದಿ ಮೆಟ್ರೋ ಹೊಸ ಮಾರ್ಗ'ವನ್ನು ಆ.10ರಂದು ಪ್ರದಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಜನರ ಕಾಯುವಿಕೆ ಅಂತ್ಯಗೊಂಡ ಬೆನ್ನಲ್ಲೆ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಒಟ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ಇದೀಗ ಹಳದಿ ಮಾರ್ಗದಲ್ಲಿ ಹೊಸ ಗೊಂದಲ ಸೃಷ್ಟಿಯಾಗಿದೆ. ಹೆಚ್ಚು ಹೊತ್ತು ಕಾಯ್ದರೆ ಪ್ರಯಾಣಿಕರು ದಂಡ ಕಟ್ಟುವ ಅನಿವಾರ್ಯತೆ ಎದುರಿಸುವ ಸಾಧ್ಯತೆ ಇದೆ.

ಹೌದು, ಇದಕ್ಕೆ ನಿದರ್ಶನವೆಂಬಂತೆ ಪ್ರಯಾಣಿಕರೊಬ್ಬರು ಆರ್‌.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ರೈಲು ಮಿಸ್ ಮಾಡಿಕೊಂಡಿದ್ದಕ್ಕಾಗಿ ದಂಡ ಕಟ್ಟಿದ್ದಾರೆ. ಈ ಮಾರ್ಗದಲ್ಲಿ 25 ನಿಮಿಷಕ್ಕೆ ಒಂದರಂತೆ ಮೂರು ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ನಾಲ್ಕನೇ ರೈಲಿನ ಮೂರು ಬೋಗಿಗಳು ಈಗಷ್ಟೇ ಬೆಂಗಳೂರಿಗೆ ಆಗಮಿಸಿವೆ. ಹೆಚ್ಚುವರಿ ರೈಲುಗಳು ಕಾರ್ಯ ನಿರ್ವಹಣೆಗೆ ಸಮಯ ಹಿಡಯುಲಿದೆ.

BMRCL Fines 50 on Namma Metro Yellow Line Commuter Rule Causes Confusion

ಹೀಗಿರುವಾಗ ಮಂಗಳವಾರ (ಆ.13) ಪ್ರಯಾಣಿಕರೊಬ್ಬು ಪ್ಲಾಟ್‌ಫಾರ್ಮ್‌ನಲ್ಲಿ 20 ನಿಮಿಷಕ್ಕೂ ಹೆಚ್ಚು ಸಮಯ ಕಾಯ್ದಿದ್ದಕ್ಕೆ ಅವರಿಗೆ BMRCL 50 ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಪ್ಲಾರ್ಟ್ ಫಾರ್ಮ್‌ನಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದರೆ ದಂಡ ಕಟ್ಟಬೇಕು ಎಂಬ ನಿಯಮ ಇದೆ. ಆದರೆ ಇದು ಹೊಸ ಮಾರ್ಗಕ್ಕೆ ಅನ್ವಯಿಸುತ್ತಿರುವ ಕಾರಣ ಸಮಸ್ಯೆ ಉಂಟಾಗುವ ನಿರೀಕ್ಷೆ ಇದೆ. ಏಕೆಂದರೆ ಯೆಲ್ಲೋ ಮಾರ್ಗದಲ್ಲಿ ಒಂದು ರೈಲು ಬಂದು ಹೋದ ಬಳಿಕ ಇನ್ನೊಂದು ರೈಲು ಬರಲು 25 ನಿಮಿಷ ಬೇಕು. ಹಾಗಾದ್ರೆ ಹೆಚ್ಚಿನ ಜನದಟ್ಟಣೆ ಇದ್ದಾಗ ರೈಲು ಮಿಸ್ ಮಾಡಿಕೊಂಡವರೆಲ್ಲ ದಂಡ ಕಟ್ಟಬೇಕೆ? ಎಂಬ ಅನುಮಾನ, ಸಮಸ್ಯೆ ಪ್ರಯಾಣಿಕರಿಗೆ ಎದುರಾಗಿದೆ.

ಅಸಲಿಗೆ ಹಳದಿ ಮಾರ್ಗದಲ್ಲಿ ಆಗಿದ್ದೇನು?

ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸಲು ಪ್ರಯಾಣಿಕರೊಬ್ಬರು ಟಿಕೆಟ್ ಪಡೆದು ಒಳ ಬಂದಿದ್ದಾರೆ. ಆದರೆ ಮೆಟ್ರೋ ರೈಲು ರಶ್ ಇದ್ದ ಕಾರಣ ಆ ರೈಲನ್ನು ಮಿಸ್ ಮಾಡಿಕೊಂಡಿದ್ದಾರೆ. ಮುಂದಿನ ರೈಲು ಬರಲು 25 ನಿಮಿಷ ಬೇಕಾಗುತ್ತದೆ. ಇಲ್ಲಿ ಕಾಯುವ ಬದಲು ನಿಲ್ದಾಣದಿಂದ ಹೊರ ಬರಲು ಅವರು ನಿರ್ಧರಿಸಿದ್ದಾರೆ. ಹೊರ ಬರುವಾಗ ನೀವು 20 ನಿಮಿಷಕ್ಕು ಹೆಚ್ಚು ಸಮಯ ಪ್ಲಾಟ್‌ಫಾರ್ಮ್‌ನಲ್ಲಿದ್ದೀರಿ ಎಂದು 50 ರೂಪಾಯಿ ದಂಡ ವಿಧಿಸಲಾಗಿದೆ.

ನೇರಳೆ ಮಾರ್ಗ, ಹಸಿರು ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ಮೂರು ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸುತ್ತವೆ. ದಟ್ಟಣೆ ವೇಳೆ ಶಾರ್ಟ್ ಲೂಪ್ ರೈಲು ಸಂಚಾರ ವ್ಯವಸ್ಥೆ ಸಹ ಇದೆ. ಸಾಮಾನ್ಯ ಸಮಯದಲ್ಲಿ ಪ್ರತಿ ದಿನ ಈ ಮಾರ್ಗಗಳಲ್ಲಿ 10 ನಿಮಿಷಕ್ಕೆ ಒಂದಂತೆ ರೈಲು ಸಂಚರಿಸುತ್ತವೆ. ಇಲ್ಲಿ ಹೆಚ್ಚು ಸಮಯ ಕಾಯ್ದರೆ ದಂಡ ವಿಧಿಸಿದರೆ ಸರಿ ಎನ್ನಬಹುದು. ಆದರೆ ಮೂರೇ ರೈಲು ಓಡಾಡುವ ಹೊಸ ಮಾರ್ಗದಲ್ಲಿ ಈ ನಿಮಯ ಜಾರಿಯಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿದೆ.

ನಾನು ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುತ್ತೇನೆ ಎಂದು ದಂಡ ಕಟ್ಟಿದ ಪ್ರಯಾಣಿಕ ಬೇಸರ ವ್ಯಕ್ತಪಡಿಸಿದ್ದಾರೆ. ಆಕ್ರೋಶ ಹೊರ ಹಾಕಿದ್ದಾರೆ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲಿನ ಕೊರತೆ ಇದೆ. ಒಂದು ರೈಲಿನಲ್ಲಿ ಪ್ರಯಾಣಿಸಲು ಜನರು 25 ನಿಮಿಷ ಕಾಯಬೇಕಿದೆ. ಹೀಗಿದ್ದಾಗ ದಂಡ ನಿಯಮ ಬೇಕಾ? ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ BMRCL ಉತ್ತರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+