ಬಿಎಂಆರ್ ಸಿಎಲ್ ಮೆಟ್ರೋ ಸಿಬ್ಬಂದಿ ನೇಣಿಗೆ ಶರಣು

ಬೆಂಗಳೂರು, ಅಕ್ಟೋಬರ್ 05: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್(ಬಿಎಂಆರ್ ಸಿಎಲ್) ನಮ್ಮ ಮೆಟ್ರೋ ಸಿಬ್ಬಂದಿಯೊಬ್ಬರು ಖಿನ್ನತೆಗೆ ಒಳಗಾಗಿ ಆತ್ಮಹತ್ಮೆ ಮಾಡಿಕೊಂಡಿರುವ ಘಟನೆ ಸುಂಕದಕಟ್ಟೆಯಲ್ಲಿ ಗುರುವಾರ ನಡೆದಿದೆ.

ಸುಂಕದಕಟ್ಟೆಯ ನಿವಾಸಿ ಸಂತೋಷ್ (30), ಮೆಟ್ರೋ ಕ್ವಾರ್ಟಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗಮಿಸಿರುವ ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

BMRCL employee commits suicide

ಬಿಎಂ ಆರ್ ಸಿಎಲ್ ನ ಆಪರೇಷನ್ ಅಂಡ್ ಮೆಂಟೈನೆನ್ಸ್ ವಿಭಾಗದಲ್ಲಿ ಸಂತೋಷ್ ಕುಮಾರ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲ್ಸದ ಒತ್ತಡದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ.

ತನ್ನ ಸಾವಿಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಸೂಸೈಡ್ ನೋಟ್ ಕೂಡಾ ಬರೆದಿದ್ದಾನೆ. ಕೆಲಸದ ಒತ್ತಡ ಅಷ್ಟೇ ಅಲ್ಲ, ಕಿರುಕುಳವನ್ನು ಅನುಭವಿಸಿದ್ದ ಎಂದು ಮೆಟ್ರೋ ಯೂನಿಯನ್ ಆರೋಪಿಸಿದೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+