ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಆರ್‌ಸಿಎಲ್‌-ಮೆಟ್ರೊ ನೌಕರರ ಶೀತಲ ಸಮರ: ಸಾಫ್ಟ್ ಕೌನ್ಸಿಲ್ ತಟಸ್ಥ

By Nayana
|
Google Oneindia Kannada News

ಬೆಂಗಳೂರು, ಜು.14: ಹೈಕೋರ್ಟ್‌ ಹೊಸ ಆದೇಶವೊಂದನ್ನು ನೀಡಿದ್ದು ಇದರಿಂದ ಬಿಎಂಆರ್‌ಸಿಲ್‌ ನೌಕರರ ಸಂಘಕ್ಕೆ ಪರ್ಯಾಯವಾಗಿ ಆಡಳಿತ ಮಂಡಳಿಯು ರಚಿಸಿರುವ ಸ್ಟಾಫ್‌ ಕೌನ್ಸಿಲ್‌ನ ಚಟುವಟಿಕೆಗೆ ತಡೆ ಬಿದ್ದಿದೆ.

ಬಿಎಂಆರ್‌ಸಿಎಲ್‌ ಆಡಳಿತ ಮಂಡಳಿಯು ನೌಕರರ ಕೆಲವು ಬೇಡಿಕೆಗಳನ್ನು ಇಡೇರಿಸಲು ಒಪ್ಪಿಗೆ ನೀಡಿದ ಮಾತ್ರಕ್ಕೆ ಅವರ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳು ಬಗೆ ಹರಿದಿದೆ ಎಂದರ್ಥವಲ್ಲ ಇನ್ನೂ ಕೂಡ ಅವರ ನಡುವಿನ ಸಂಘರ್ಷ ಮುಂದುವರೆದಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ನೌಕರರ ಸಂಘದ ಬದಲಿಗೆ ತಮ್ಮ ಅಧೀನದಲ್ಲೇ ಸಂಘ ರಚಿಸಲು ಆಡಳಿತ ಮಂಡಳಿಯು ಸ್ಟಾಫ್‌ ಕೌನ್ಸಿಲ್‌ ರಚಿಸಿದೆ.

ಕರ್ನಾಟಕ ಬಜೆಟ್‌: ಮೆಟ್ರೋ 3ನೇ ಹಂತ ವಿಸ್ತರಣೆಗೆ ಸಾವಿರ ಕೋಟಿಕರ್ನಾಟಕ ಬಜೆಟ್‌: ಮೆಟ್ರೋ 3ನೇ ಹಂತ ವಿಸ್ತರಣೆಗೆ ಸಾವಿರ ಕೋಟಿ

ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಕೋರ್ಟ್‌ ವಿಚಾರಣೆಯಲ್ಲಿ ಎರಡೂ ಕಡೆಯ ಅಹವಾಲುಗಳನ್ನು ಆಲಿಸಿದ ಹೈಕೋರ್ಟ್‌, ಮುಂದಿನ ಆದೇಶದವರೆಗೆ ಸ್ಟಾಫ್‌ ಕೌನ್ಸಿಲ್‌ ಯಾವುದೇ ಕ್ರಮಗಳನ್ನು ಜಾರಿ ಮಾಡುವಂತಿಲ್ಲ ಎಂದು ಆದೇಶ ನೀಡಿದೆ. ಇದರಿಂದಾಗಿ ಸ್ಟಾಫ್‌ ಕೌನ್ಸಿಲ್‌ ಯಾವುದೇ ಕ್ರಮಗಳನ್ನು ಜಾರಿ ಮಾಡಲು ಸಾಧ್ಯವಾಗದೆ ಶಾಂತವಾಗಿದೆ.

BMRCL defuse soft council activities

ಇದು ನೌಕರರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದುಕೊಟ್ಟಿದೆ. ಮೆಟ್ರೋ ನೌಕರರು ರಚಿಸಿದ್ದ ಸಂಘಕ್ಕೆ ಆಡಳಿತ ಮಂಡಳಿಯಿಂದ ಇನ್ನೂ ಮಾನ್ಯತೆ ಸಿಕ್ಕಿಲ್ಲ, ನೌಕರರ ಸಂಘವನ್ನು ರದ್ದು ಮಾಡುವ ಉದ್ದೇಶದಿಂದ ಆಡಳಿತ ಮಂಡಳಿಯು ಸ್ಟಾಫ್‌ ಕೌನ್ಸಿಲ್‌ ರಚಿಸಿಕೊಂಡಿದೆ.

English summary
Following high court direction on employees union formation issue, BMRCL has defused activities of soft council of employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X