ಬೆಂಗಳೂರಿನ 'ಮಂತ್ರಿ' ಮಾಲ್ ಮತ್ತೆ ಬೀಗ: ಲೈಸೆನ್ಸ್ ರದ್ದುಗೊಳಿಸಿದ ಬಿಬಿಎಂಪಿ
ಬೆಂಗಳೂರು, ಮಾರ್ಚ್ 16: ಬಹಳ ಕಾಲದಿಂದಲೂ ಕೋಟಿ ಕೋಟಿ ತೆರಿಗೆ ಹಣ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೀಗ ಜಡಿದಿದೆ. ಲೈಸೆನ್ಸ್ ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.
ಹೌದು, ಶನಿವಾರ ಬೆಳಗ್ಗೆಯೇ ಮಂತ್ರಿ ಮಾಲ್ ಗೆ ತೆರಳಿದ ಬಿಬಿಎಂಪಿ ಅಧಿಕಾರಿಗಳು ತೆರಿಗೆ ಪಾವತಿಸದ ಕಾರಣ ಮಾಲ್ ಸೀಲ್ ಮಾಡಿದ್ದಾರೆ. ಮಂತ್ರಿ ಮಾಲ್ ಒಟ್ಟು 32 ಕೋಟಿ ರೂಪಾಯಿ ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿತ್ತು ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.

ತೆರಿಗೆ ಬಾಕಿ ಉಳಸಿಕೊಂಡಿದ್ದ ಮಂತ್ರಿ ಮಾಲ್‌ಗೆ ಬಿಬಿಎಂಪಿ ಒನ್‌ಟೈಮ್ ಪೇಪೆಂಟ್‌ಗೆ ಅವಕಾಶ ನೀಡಿತ್ತು. ಆದರೂ ಸಹಿತ ತೆರಿಗೆ ಪಾವತಿಸದೇ ನಿರ್ಲಕ್ಷ್ಯ ವಹಿಸಿತ್ತು. ಹೀಗಾಗಿ ಬಿಬಿಎಂಪಿಯು ಮಾಲ್ ಅನ್ನು ಸೀಲ್ ಮಾಡಿ ಬಾಗಿಲು ಹಾಕಿತು.
ಬುದ್ಧಿ ಕಲಿಯದ ಮಾಲ್
ಈ ಹಿಂದೆಯು ಕೆಲವು ಬಾರಿ ಇದೇ ತೆರಿಗೆ ಬಾಕಿ ಪಾವತಿಸದ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ನಾಲ್ಕು ಬಾರಿ ಮಂತ್ರಿ ಮಾಲ್‌ಗೆ ಬೀದ್ ಜಡಿದಿತ್ತು. ಆದರೂ ಬುದ್ಧಿ ಕಲಿಯದ ಮಂತ್ರಿ ಮಾಲ್ ಆಡಳಿತ ಮಂಡಳಿ ತನ್ನ ತೆರಿಗೆ ಪಾವತಿಯಲ್ಲಿ ನಿರ್ಲಕ್ಷ್ಯ ಮುಂದುವರೆಸಿತ್ತು.
ಮಾಲ್ ಮುಂದೆ ನೋಟಿಸ್
ಮಂತ್ರಿ ಮಾಲ್ನ ಮುಖ್ಯ ದ್ವಾರಕ್ಕೆ ಬೀಗ ಹಾಕುವುದರೊಂದಿಗೆ ಬಿಬಿಎಂಪಿ ನೋಟಿಸ್ ಸಹ ಅಂಟಿಸಲಾಗಿದೆ. ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 06 ರ ಸುತ್ತೊಲೆ ಪ್ರಕಾರ, ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ಪರವಾನಗಿಯನ್ನು ಅಮಾನತು ಮಾಡಲಾಗಿದೆ.

ಬಿಬಿಎಂಪಿ ಆದೇಶ ಮೇರೆಗೆ ಬಾಕಿ ಆಸ್ತಿ ತೆರಿಗೆಗಳನ್ನು ಪಾವತಿಸದ ಕಾರಣಕ್ಕಾಗಿ ಆಸ್ತಿಯನ್ನು ಸೀಲ್ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಲ್ ಮುಂದೆ ಬ್ಯಾನರ್ ಅಳಡಿಸಿದ್ದಾರೆ.












Click it and Unblock the Notifications