ಸಿಎಎ ವಿವಾದ; ಕಾಲೇಜು ವಿದ್ಯಾರ್ಥಿನಿಯರಿಗೆ 'ನೀವು ಭಾರತೀಯರಲ್ಲ' ಎಂದರು..!

ಬೆಂಗಳೂರು,

ಜನವರಿ
9:
ರಾಷ್ಟ್ರೀಯ
ಪೌರತ್ವ
ತಿದ್ದುಪಡಿ
ಕಾಯ್ದೆಯ
(ಸಿಎಎ)
ರಾಜಕೀಯ
ಬಿಸಿ
ಈಗ
ಕಾಲೇಜುಗಳಿಗೂ
ತಟ್ಟಿದೆ.
ಸಿಎಎ
ಬಗ್ಗೆ
ಜನಜಾಗೃತಿ
ಮೂಡಿಸುವ
ನಿಟ್ಟಿನಲ್ಲಿ
ಬಿಜೆಪಿ
ಕಾರ್ಯಕರ್ತರು
ಹಮ್ಮಿಕೊಂಡಿರುವ
ಸಹಿ
ಸಂಗ್ರಹ
ಅಭಿಯಾನ
ವಿವಾದ
ಸೃಷ್ಟಿಸಿದೆ.

id="toptextpromo">
id='are-slot-1'
class='oiad
oi-axt
oiadv'>

ಬಿಜೆಪಿ

ಕಾರ್ಯಕರ್ತರು
ವಿದ್ಯಾರ್ಥಿಗಳಿಗೆ
ಸಿಎಎ
ಬಗ್ಗೆ
ಅರಿವು
ಮೂಡಿಸಿ
ಸಹಿ
ಸಂಗ್ರಹಿಸಲು
ಕೋರಮಂಗಲದ
ಜ್ಯೋತಿ
ನಿವಾಸ
ಕಾಲೇಜಿಗೆ
ಭೇಟಿ
ನೀಡಿದಾಗ,
ಅಲ್ಲಿನ
ವಿದ್ಯಾರ್ಥಿನಿಯರು
ಹಾಗೂ
ಬಿಜೆಪಿ
ಕಾರ್ಯಕರ್ತರು
ನಡುವೆ
ನಡೆದ
ಗಲಾಟೆ
ಕರ್ನಾಟಕದಲ್ಲಿ
ಮತ್ತೊಂದು
ಸುತ್ತಿನ
ಸಿಎಎ
ಪರ-ವಿರೋಧದ
ಚರ್ಚೆಗೆ
ನಾಂದಿ
ಹಾಡಿದೆ.
ಬಗ್ಗೆ
ಕಾಂಗ್ರೆಸ್
ವಿರೋಧ
ವ್ಯಕ್ತಪಡಿಸಿದ್ದು,
'ಕರ್ನಾಟಕದ
ಬಿಜೆಪಿ
ಕಾರ್ಯಕರ್ತರು
ಗೂಂಡಾಗಳಾಗಿ
ಬದಲಾಗಿದ್ದಾರೆ'
ಎಂದು
ಆರೋಪಿಸಿದೆ.

id='are-slot-2'
class='oiad
oi-axt
oiadv'>

ಕಾಲೇಜು ಬಳಿ ಆಗಿದ್ದೇನು?

ಕಾಲೇಜು ಬಳಿ ಆಗಿದ್ದೇನು?

ಸಿಎಎ ಪರ ಸಹಿ ಸಂಗ್ರಹ ಅಭಿಯಾನದ ಸಲುವಾಗಿ ಬುಧವಾರ ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕಾಲೇಜು ಬಳಿ ಬಿಜೆಪಿ ಕಾರ್ಯಕರ್ತರು ಬಂದಿದ್ದರು. ಈ ವೇಳೆ ಸಿಎಎ ಪರ ಘೋಷಣೆ ಕೂಗಿ, ಅದರ ಪರವಾಗಿರುವಂತಹ ಬ್ಯಾನರ್‌ಗಳನ್ನು ಗೋಡೆಗೆ ಕಟ್ಟಿದ್ದಾರೆ. ಇಷ್ಟೇ ಅಲ್ಲದೇ, ಅಲ್ಲಿದ್ದ ವಿದ್ಯಾರ್ಥಿನಿಯರಿಗೆ ಸಿಎಎ ಪರ ಘೋಷಣೆ ಕೂಗಿ ಮತ್ತು ಸಹಿ ಮಾಡಿ ಎಂದು ಬಲವಂತ ಮಾಡಿದ್ದಾರೆ.

ನೀವು ಭಾರತೀಯರಲ್ಲ ಎಂದರು!

ನೀವು ಭಾರತೀಯರಲ್ಲ ಎಂದರು!

ಬಿಜೆಪಿ ಕಾರ್ಯಕರ್ತರ ಬಲವಂತಕ್ಕೆ ವಿದ್ಯಾರ್ಥಿನಿಯರು ಮತ್ತು ಪ್ರಾಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿದಾಗ ಬಿಜೆಪಿ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ "ನಿಮಗೆ ಪೌರತ್ವದ ಬಗ್ಗೆ ಕಾಳಜಿಯಿಲ್ಲ, ನೀವು ನಿಮ್ಮ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ಭಾರತದ ಬಗ್ಗೆ ಮೊದಲು ಕಾಳಜಿ ವಹಿಸಿ. ಪೌರತ್ವ ಕಾಯ್ದೆ ಬಗ್ಗೆ ತಿಳಿದುಕೊಳ್ಳದ ನೀವು ಭಾರತೀಯರಲ್ಲ' ಎಂದು ವಿದ್ಯಾರ್ಥಿನಿಯರನ್ನ ತರಾಟೆಗೆ ತೆಗೆದುಕೊಂಡರು. ಇದಕ್ಕೆ ವಿದ್ಯಾರ್ಥಿನಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಾಗ್ವಾದ ನಡೆಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಅಲ್ಲಿಂದ ಕಳಿಸಿದ್ದಾರೆ.

ಶಾಸಕಿ ಸೌಮ್ಯ ರೆಡ್ಡಿ ಕಿಡಿ

ಘಟನೆಯನ್ನು ಖಂಡಿಸಿ ಜಯನಗರ ಕಾಂಗ್ರೆಸ್ ಶಾಸಕಿ ಬಿಜೆಪಿ ಕಾರ್ಯಕರ್ತರು ವಿದ್ಯಾರ್ಥಿನಿಯರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಾಕಿ, ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಘಟನೆಯನ್ನು ಖಂಡಿಸಿ, ಸಿಎಂ ಯಡಿಯೂರಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಗುಂಡಾಗಿರಿ ಪ್ರದರ್ಶಿಸಲು ನಿಮಗೇಷ್ಟು ಧೈರ್ಯ? ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವರು ಏನಂದ್ರು?

ಗೃಹ ಸಚಿವರು ಏನಂದ್ರು?

ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಸ್ವತಃ ವಿದ್ಯಾರ್ಥಿನಿಯರಯ ಪ್ರತಿಭಟನೆ ಕೂಡ ನಡೆಸಿದರು. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ಸ್ಥಳೀಯ ಪೋಲೀಸರಿಗೆ ಸೂಚನೆ ನೀಡಿದ್ದೇನೆ. ಘಟನೆ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇನೆ. ತನಿಖೆಯ ನಂತರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+