ಬೆಳಗಾವಿಯಲ್ಲಿ ಲಕ್ಷ ಜನರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ: ಬಿಎಸ್‌ವೈ
ಬೆಂಗಳೂರು, ನವೆಂಬರ್ 29: ಬೆಳಗಾವಿ ಅಧಿವೇಶನದ ಪ್ರಾರಂಭದ ವೇಳೆ ಒಂದು ಲಕ್ಷ ಜನರನ್ನು ಬೆಳಗಾವಿಯಲ್ಲಿ ಸೇರಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ನಗರದಲ್ಲಿ ಇಂದು ಯೋಜಿಸಿದ್ದ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅನೀತಿ, ವಿಳಂಬ ನೀತಿಗಳ ವಿರುದ್ಧ ಬಿಜೆಪಿಯು ಬೆಳಗಾವಿ ಅಧಿವೇಶನದ ಸಮಯ ಭಾರಿ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ಈ ಬರ ಅಧ್ಯಯನಕ್ಕೆ 6 ತಂಡಗಳಾಗಿ ಪ್ರವಾಸ ಹಾಗೂ ವಿಧಾನಸಭಾ ಕಲಾಪದ ವೇಳೆ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಎರಡನೆಯ ನಿರ್ಣಯವನ್ನು ಇಂದಿನ ಶಾಸಕಾಂಗ ಸಭೆಯಲ್ಲಿ ತಗೆದುಕೊಳ್ಳಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಕಳೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಆದ ಹಿನ್ನಡೆ ಮತ್ತು ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಸಹ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಲಾಯಿತು ಎಂದು ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.












Click it and Unblock the Notifications