ಬಿಜೆಪಿ ವರ್ಚುಯಲ್‌ ಜನ ಸಂವಾದ ಭರ್ಜರಿ ಯಶಸ್ಸು: ಶೆಟ್ಟರ್

ಬೆಂಗಳೂರು ಜೂನ್‌ 15: ''ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡಿರುವ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನದ ಕರ್ನಾಟಕ ಜನ ಸಂವಾದ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ'' ಎಂದು ಮಾನ್ಯ ಬೃಹತ್, ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್‌ ಅವರು ಹೇಳಿದರು.

ನಗರದಲ್ಲಿಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರವರ ವರ್ಚುಯಲ್‌ rallyಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಕರೋನಾ ಸಂಕಷ್ಟ ಕಾಲದಲ್ಲಿ ಜನರನ್ನು ಯಶಸ್ವಿಯಾಗಿ ತಲುಪಲು ಆಯೋಜಿಸಿದ್ದ ಈ ಜನ ಸಂವಾದ ಕಾರ್ಯಕ್ರಮ ತನ್ನ ಗುರಿಯನ್ನು ತಲುಪಿದೆ.

ಬಿಜೆಪಿ ಕಾರ್ಯಾಲಯಗಳು, ಮನೆ ಮನೆಗಳು ಹಾಗೂ ತಮ್ಮ ಮೊಬೈಲ್‌ಗಳ ಮೂಲಕ ಈ ರ್ಯಾಲಿಯಲ್ಲಿ ಭಾಗವಹಿಸಿದ ಕೋಟ್ಯಾಂತರ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 6 ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ತಮ್ಮ ಎರಡನೇ ಅವಧಿಯ ಮೊದಲ ವರ್ಷ ದ ಸಾಧನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

BJPs Virtual Rally a big success: Jagadish Shettar

ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೋಟ್ಯಾಂತರ ಕಾರ್ಯಕರ್ತರನ್ನು ತಲುಪುವುದು ಸುಲಭ ಕಾರ್ಯವನ್ನು. ಇಂತಹ ಹೊಸತನಗಳಿಗೆ ಯಾವಾಗಲೂ ಸಿದ್ದವಾಗಿರುವ ಭಾರತೀಯ ಜನತಾ ಪಕ್ಷ ಹೊಸದೊಂದು ಗುರಿಯನ್ನು ತಲುಪಿದೆ ಎಂದು ಹೇಳಿದರು.

BJPs Virtual Rally a big success: Jagadish Shettar

''ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾರವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 6 ವರ್ಷಗಳಲ್ಲಿ 6 ದಶಕಗಳಿಂದ ಬಾಕಿ ಇದ್ದ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ವಿಶ್ವದಲ್ಲೇ ಅತ್ಯಂತ ಪರಿಣಾಕಾರಿಯಾಗಿ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಿದೆ. ಬಹಳಷ್ಟು ಸ್ವಲ್ಪ ಸಮಯದಲ್ಲಿ ದೇಶ ಈ ಮಹಾಮಾರಿಯನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಮಾಡುವಲ್ಲಿ ಪ್ರಧಾನಿಗಳ ಕೊಡುಗೆ ಬಹಳಷ್ಟಿದೆ'' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+