ಹೈಕಮಾಂಡಿಗೆ ಕಪ್ಪ ಆರೋಪ: ಸಾಕ್ಷಿ ನೀಡಿ ಉತ್ತರಿಸಿದ ಬಿಜೆಪಿ

ಬೆಂಗಳೂರು, ಮಾರ್ಚ್ 22: ಹೈಕಮಾಂಡಿಗೆ ಕಪ್ಪ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿ ಎಸ್ ಯಡಿಯೂರಪ್ಪ ಮತ್ತು ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಸಂಭಾಷಣೆ ನಡೆಸಿದ ದಾಖಲೆಗಳ ಬಗ್ಗೆ ಕಾಂಗ್ರೆಸ್ ಮತ್ತೆ ಧ್ವನಿ ಏರಿಸಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಆದರೆ ಈ ಆರೋಪ ಶುದ್ಧ ಸುಳ್ಳು ಎಂದು ಆರೋಪಿಸಿರುವ ಬಿಜೆಪಿ, ಡೈರಿಯಲ್ಲಿ ಬಿ ಎಸ್ ಯಡಿಯೂರಪ್ಪ ಬರೆದಿದ್ದಾರೆ ಎನ್ನಲಾದ ಸಾಲುಗಳಲ್ಲಿರುವುದು ಯಡಿಯೂರಪ್ಪ ಅವರ ಕೈಬರಹವಲ್ಲ ಎಂದು ಟ್ವೀಟ್ ಮಾಡಿದೆ. ಜೊತೆಗೆ ಯಡಿಯೂರಪ್ಪ ಅವರ ಕೈಬರಹದ ಕೆಲವು ಸಾಲುಗಳನ್ನೂ ಈ ಟ್ವೀಟ್ ನಲ್ಲಿ ಲಗತ್ತಿಸಿದೆ.

BJP reaction to Diary allegation from Congress

"ರಣದೀಪ್ ಸುರ್ಜೇವಾಲಾ ಅವರು ಮಾಧ್ಯಮ ಮಿತ್ರರ ಅಮೂಲ್ಯ ಸಮಯವನ್ನು ಸುಳ್ಳು ಆರೋಪಕ್ಕಾಗಿ ವ್ಯರ್ಥಮಾಡಿದ್ದಾರೆ. ಈ ಆರೋಪ ತಿರುಳಿಲ್ಲದ್ದು, ಮತ್ತು ಕಾಂಗ್ರೆಸ್ಸಿಗರೇ ಸೃಷ್ಟಿಸಿದ ನಕಲಿ ಡೈರಿ ಇದು.
ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಕೈಬರಹ ಮತ್ತು ಸಹಿ ಎರಡೂ ಸುಳ್ಳು ಎಂಬುದಕ್ಕೆ ಇಲ್ಲಿದೆ ಸಾಕ್ಷಿ."ಎಂದು ಯಡಿಯೂರಪ್ಪ ಕೈಬರಹದ ಸಾಲುಗಳಿರುವ ಪ್ರತಿಯನ್ನೂ ಟ್ವಿಟ್ಟರ್ ನಲ್ಲಿ ಲಗತ್ತಿಸಿದೆ.

ಯಡಿಯೂರಪ್ಪ ಅವರು ಕಪ್ಪ ಕಾಣಿಕೆ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ. ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರು ನೀಡಿದ್ದಾರೆ ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಗ್ರಹಿಸಿದ್ದರು.

ವಿಎಸ್ ಉಗ್ರಪ್ಪ, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿಯನ್ನು 2017ರಲ್ಲಿ ಬಿಡುಗಡೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+