ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ರಾಜ್ಯ ಬಿಜೆಪಿ ನಾಯಕರು

ಬೆಂಗಳೂರು, ಆಗಸ್ಟ್ 17: ವಾಜಪೇಯಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ರಾಮಚಂದ್ರ ಗೌಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರ ಉಪಸ್ಥಿತಿಯಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಅಗಲಿದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಗಲಿದ ಮಹಾನ್ ಚೇತನದ ಭಾವಚಿತ್ರಕ್ಕೆ ಪಕ್ಷದ ಕಾರ್ಯಾಲಯ ಮುಂಭಾಗದಲ್ಲಿ ಪಕ್ಷದ ಮುಖಂಡರು, ಸಾರ್ವಜನಿಕರು ಪುಷ್ಪಾಂಜಲಿ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ಅಟಲ್ ಜೀ ಅವರ ಅವಿರತ ಸೇವೆಯನ್ನು ಸ್ಮರಿಸಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಅಟಲ್ ಜೀ ಅವರಿಗೆ ಅಟಲ್ ಜೀ ಅವರೇ ಸಾಟಿ. ವಾಜಪೇಯಿ ಅವರು ಇದ್ದ ಬಿಜೆಪಿಯಲ್ಲಿ ಇದ್ದೇವೆ ಎನ್ನುವುದೇ ನಮ್ಮ ಪುಣ್ಯ, ಅವರ ಪ್ರಾಮಾಣಿಕತೆಯಲ್ಲಿನ ಒಂದು ತುಣುಕು ನಾವಾಗೋಣ ಎಂದರು.

BJP leaders in Bengaluru pay last respect to Vajpayee

ಶಂಕರಮೂರ್ತಿ ಅವರು ವಾಜಪೇಯಿ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲಕು ಹಾಕಿದರು.
'ವಾಜಪೇಯಿ ರಾಜಕಾರಣಿಯಾಗದೇ ಇದ್ದರೆ ದೇಶದ ಶ್ರೇಷ್ಠ ಕವಿಯಾಗುತ್ತಿದ್ದರು,ಇಲ್ಲವೇ ಉತ್ತಮ ಪತ್ರಕರ್ತ ರಾಗುತ್ತಿದ್ದರು. 1981ರ ಚುನಾವಣೆಯಲ್ಲಿ ವಾಜಪೇಯಿ ಅವರನ್ನು ಹಳ್ಳಿಹಳ್ಳಿಗಳಲ್ಲಿ ಪ್ರವಾಸ ಮಾಡಿಸಿದೆವು. ಪರಿಣಾಮವಾಗಿ 18ಸ್ಥಾನ ಗಳಿಸಿದೆವು. ಆಗ ಸಮ್ಮಿಶ್ರ ಸರ್ಕಾರ ಕ್ಕೆ ವಾಜಪೇಯಿ ಅವರು ಶರತ್ತು ರಹಿತ ಬೆಂಬಲ ಘೋಷಿಸಿದರು' ಎಂದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ ವಾಜಪೇಯಿಯವರು ಹೇಳಿದ ನ ದೈನ್ಯಂ...ನ ಪಲಾಯನಂ...ಎನ್ನುವ ಮಾತುಗಳನ್ನು ಸ್ಮರಿಸಿಕೊಂಡರು. 'ನಾವಿಂದು ಪಕ್ಷದಲ್ಲಿ ವಿವಿಧ ಹಂತದಲ್ಲಿ ಅಧಿಕಾರ ಅನುಭವಿಸಿದೇವೆ. ಅದಕ್ಕೆ ಪ್ರತಿಯೊಬ್ಬರ ಜನಮಾನಸದಲ್ಲಿರುವ ವಾಜಪೇಯಿ ಅವರೇ ಕಾರಣ' ಎಂದರು.

BJP leaders in Bengaluru pay last respect to Vajpayee

ವಿರೋಧಪಕ್ಷಗಳು, ಪಾಕಿಸ್ತಾನ ಎಲ್ಲರೂ ಅವರನ್ನು ಕೊಂಡಾಡಿದ್ದಾರೆ. ಆದ್ದರಿಂದಲೇ ಅಟಲ್ ಜೀ ಆಜಾತಶತ್ರು ಎಂದು ಕರೆಯಲ್ಪಟ್ಟಿದ್ದಾರೆ ಎಂದು ಅಶೋಕ್ ಹೇಳಿದರು. ನಾಯಕರಾದ ವಿ.ಸೋಮಣ್ಣ, ಜಗ್ಗೇಶ್, ಚಿ.ನಾ.ರಾಮು, ಅಬ್ದುಲ್ ಅಜೀಂ, ಭಾರತಿ ಶೆಟ್ಟಿ, ಶಿವರಾಂ, ಡಿ.ಎಸ್.ವೀರಯ್ಯ, ಪಿ.ಎನ್.ಸದಾಶಿವ, ಪದ್ಮನಾಭ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+