• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ?

|
   ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ? | Oneindia Kannada

   ಬೆಂಗಳೂರು, ನವೆಂಬರ್ 30: ಗುರುವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಕ್ಷೇತ್ರದ ಉಸ್ತುವಾರಿ ಮತ್ತು ಸಂಚಾಲಕ ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ಪಕ್ಷದ ನಾಯಕರಲ್ಲಿ ಅಸಮಾಧಾನಗಳು ವ್ಯಕ್ತವಾಗಿವೆ ಎನ್ನಲಾಗಿದೆ.

   ಪಕ್ಷದ ವಿವಿಧ ನಾಯಕರು ತಮಗೆ ವಹಿಸಲಾಗಿರುವ ಕ್ಷೇತ್ರಗಳ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಹೀಗಾಗಿ ಕೂಡಲೇ ಅವುಗಳನ್ನು ಬದಲಿಸಬೇಕು ಎಂದು ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ.

   ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನವೆಂಬರ್ 23ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಲ್ಲ 28 ಲೋಕಸಭೆ ಕ್ಷೇತ್ರಗಳಿಗೆ ಪಕ್ಷದ ಉಸ್ತುವಾರಿ ಮತ್ತು ಸಂಚಾಲಕರನ್ನು ನೇಮಿಸಿದ್ದರು.

   ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ

   ಅವರಲ್ಲಿ ಕೆಲವು ಶಾಸಕರು ಮತ್ತು ನಾಯಕರು ತಮಗೆ ವಹಿಸಿರುವ ಜಿಲ್ಲೆಯನ್ನು ಬದಲಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಕೆಲವು ಮುಖಂಡರು ಜಿಲ್ಲೆಗೆ ನೇಮಿಸಿರುವ ಉಸ್ತುವಾರಿಗಳನ್ನು ಬದಲಿಸುವಂತೆಯೂ ಬೇಡಿಕೆ ಇರಿಸಿದ್ದಾರೆ.

   ಈಶ್ವರಪ್ಪ, ಸೋಮಣ್ಣ ಪಟ್ಟು

   ಈಶ್ವರಪ್ಪ, ಸೋಮಣ್ಣ ಪಟ್ಟು

   ತಮಗೆ ನೀಡಿರುವ ಮೈಸೂರು-ಕೊಡಗು ಉಸ್ತುವಾರಿಯನ್ನು ಬದಲಿಸುವಂತೆ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ತಮ್ಮನ್ನು ಬದಲಿಸಿ ಬೇರೆ ಕ್ಷೇತ್ರ ನೀಡುವಂತೆ ವಿ. ಸೋಮಣ್ಣ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.

   ಬೆಳಗಾವಿಯಲ್ಲಿ ಲಕ್ಷ ಜನರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ: ಬಿಎಸ್‌ವೈ

   ಒಕ್ಕಲಿಗರಿಗೆ ನೀಡಿ

   ಒಕ್ಕಲಿಗರಿಗೆ ನೀಡಿ

   ಕೋಲಾರ ಕ್ಷೇತ್ರದ ಸಂಚಾಲಕ ಜವಾಬ್ದಾರಿಯನ್ನು ವೈ. ಸಂಪಂಗಿ ಅವರಿಗೆ ವಹಿಸಲಾಗಿದೆ. ಆದರೆ, ಅವರನ್ನು ಬದಲಿಸುವಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಕೋಲಾರ ಕ್ಷೇತ್ರವು ಮಹತ್ವದ್ದಾಗಿರುವುದರಿಂದ ಅಲ್ಲಿಗೆ ಒಕ್ಕಲಿಗರನ್ನು ಸಂಚಾಲಕರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಲಾಗಿದೆ.

   ಬಿಜೆಪಿ ಶಾಸಕಾಂಗ ಸಭೆ: ಶಾಸಕರಿಗೆ ಅಧಿಕಾರದ ಭರವಸೆ ನೀಡಿದ ಬಿಎಸ್‌ವೈ

   ಉತ್ತರ ಕ್ಷೇತ್ರದ ಉಸ್ತುವಾರಿ

   ಉತ್ತರ ಕ್ಷೇತ್ರದ ಉಸ್ತುವಾರಿ

   ಬೆಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಲಾಗಿರುವ ಬಿ.ಎಚ್. ಕೃಷ್ಣಾರೆಡ್ಡಿ ಅವರನ್ನು ಬದಲಾಯಿಸುವಂತೆ ಸಂಸದ ಡಿವಿ ಸದಾನಂದಗೌಡ ಅವರು ಯಡಿಯೂರಪ್ಪ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

   ಯಾರಿಗೆ ಯಾವ ಕ್ಷೇತ್ರ?

   ಯಾರಿಗೆ ಯಾವ ಕ್ಷೇತ್ರ?

   ಮೈಸೂರು-ಕೊಡಗು - ಕೆ.ಎಸ್.ಈಶ್ವರಪ್ಪ, ಚಾಮರಾಜನಗರ - ಎಲ್.ನಾಗೇಂದ್ರ, ಮಂಡ್ಯ - ಇ.ಅಶ್ವತ್ಥ ನಾರಾಯಣ್, ಹಾಸನ - ಸಿ.ಟಿ.ರವಿ, ದಕ್ಷಿಣ ಕನ್ನಡ - ಸುನೀಲ್ ಕುಮಾರ್, ಉಡುಪಿ-ಚಿಕ್ಕಮಗಳೂರು - ಆರಗ ಜ್ಞಾನೇಂದ್ರ, ಶಿವಮೊಗ್ಗ - ವಿಶ್ವೇಶ್ವರ ಹೆಗಡೆ ಕಾಗೇರಿ

   ಉತ್ತರ ಕನ್ನಡ -ಲಿಂಗರಾಜ ಪಾಟೀಲ್, ಹಾವೇರಿ - ಬಸವರಾಜ ಬೊಮ್ಮಾಯಿ, ಧಾರವಾಡ - ಗೋವಿಂದ ಕಾರಜೋಳ, ಬೆಳಗಾವಿ - ಮಹಾಂತೇಶ ಕವಟಗಿಮಠ್, ಚಿಕ್ಕೋಡಿ - ಸಂಜಯ್ ಪಾಟೀಲ್, ಬಾಗಲಕೋಟೆ - ಸಿ.ಸಿ.ಪಾಟೀಲ್, ವಿಜಯಪುರ - ಲಕ್ಷ್ಮಣ ಸವದಿ, ಬೀದರ್ - ಅಮರನಾಥ ಪಾಟೀಲ್

   ಬೆಂಗಳೂರು-ಸುತ್ತಮುತ್ತ

   ಬೆಂಗಳೂರು-ಸುತ್ತಮುತ್ತ

   ಬೆಂಗಳೂರು ಗ್ರಾಮಾಂತರ - ಅಶ್ವತ್ಥ ನಾರಾಯಣ್, ಚಿಕ್ಕಬಳ್ಳಾಪುರ - ವಿ.ಸೋಮಣ್ಣ, ಕೋಲಾರ - ಕಟ್ಟಾ ಸುಬ್ರಮಣ್ಯ ನಾಯ್ಡು, ಬೆಂಗಳೂರು ದಕ್ಷಿಣ - ಸುಬ್ಬನರಸಿಂಹ, ಬೆಂಗಳೂರು ಕೇಂದ್ರ - ಡಾ.ಅಶ್ವತ್ಥ ನಾರಾಯಣ್, ಬೆಂಗಳೂರು ಉತ್ತರ - ಬಿ.ಎಚ್.ಕೃಷ್ಣಾ ರೆಡ್ಡಿ

   ಕಲಬುರಗಿ - ಎನ್.ರವಿಕುಮಾರ್, ರಾಯಚೂರು - ಹಾಲಪ್ಪ ಆಚಾರ್, ಕೊಪ್ಪಳ - ಬಿ.ಶ್ರೀರಾಮುಲು, ಬಳ್ಳಾರಿ -ಜಗದೀಶ್ ಶೆಟ್ಟರ್, ದಾವಣಗೆರೆ - ಆಯನೂರು ಮಂಜುನಾಥ್, ಚಿತ್ರದುರ್ಗ - ವೈ.ಎ.ನಾರಾಯಣಸ್ವಾಮಿ, ತುಮಕೂರು - ಅರವಿಂದ ಲಿಂಬಾವಳಿ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Reports says, some BJP leaders expressed thier unhappiness on the distribution of Lok Sabha constituency incharge in the Party meeting on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more