ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪೋಸ್ಟರ್ ವಾರ್
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜನ ಪರ ಆಡಳಿತ ನಡೆಸುವಲ್ಲಿ ವಿಫಲವಾಗುತ್ತಿದೆ ಎಂದು ಬಿಜೆಪಿ ಕಿಡಿ ಕಾರುತ್ತಿದೆ. ಈ ಬೆನ್ನಲ್ಲೆ ಇದನ್ನೇ ಬಿಜೆಪಿ ಅಸ್ತ್ರವನ್ನಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ಹರಿ ಹಾಯುತ್ತಿದೆ. ಸದ್ಯ ರಾಜ್ಯದಲ್ಲಿ ಏರುತ್ತಿರುವ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಾಯಕರು ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಈಗ ಬೆಲೆ ಏರಿಕೆ ವಿರುದ್ಧ ಮತ್ತೊಮ್ಮೆ ಬಿಜೆಪಿ ಪೋಸ್ಟರ್ ವಾರ್ ನಡೆಸಿದೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಘೋಷಣೆಗಳೇ ಈಗ ಸರ್ಕಾರಕ್ಕೆ ಹೊರೆ ಆಗುತ್ತಿವೆ. ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ರಾಜ್ಯ ಸರ್ಕಾರ ನಾನಾ ಮಾರ್ಗಗಳ ಮೊರೆ ಹೋಗುತ್ತಿದೆ. ಮೊನ್ನೆ ಮೊನ್ನೆ ಹಾಲಿನ ದರವನ್ನು ಸಹ ಹೆಚ್ಚಿಸಿದೆ. ಬಿಜೆಪಿ ಇದನ್ನೇ ಅಸ್ತ್ರವನ್ನಾಗಿಸಿಕೊಂಡು ವಾರ್ ಆರಂಭಿಸಿದೆ.

ಪೋಸ್ಟರ್ ವಾರ್
ಅಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪರ್ಸೆಂಟೆಜ್ ಸರ್ಕಾರ ಎಂಬ ಆರೋಪ ಕೇಳಿ ಬಂದಿತ್ತು. ಆಗ ಕಾಂಗ್ರೆಸ್ ಸ್ಕ್ಯಾನರ್‌ನಲ್ಲಿ ಆಗಿನ ಸಿಎಂ ಫೋಟೋ ಬಳಸಿ ಪೋಸ್ಟರ್ ವಾರ್ ನಡೆಸಿತ್ತು. ಕಾಂಗ್ರೆಸ್‌ನ ಈ ನಡೆ ರಾಜ್ಯದಲ್ಲಿ ಬಹುವಾಗಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಬಿಜೆಪಿ ಕಾಂಗ್ರೆಸ್ ಹಾಕಿ ಹೋದ ಮಾರ್ಗದಲ್ಲಿ ಹೆಜ್ಜೆಗಳನ್ನು ಇಡುತ್ತಿದೆ.
ಹಾಲಿನ ದರ ಏರಿಕೆ ಆಗಿರುವುದಕ್ಕೆ ಬಿಜೆಪಿ ವಿಭಿನ್ನವಾಗಿ ಪೋಸ್ಟರ್ ವಾರ್ ನಡೆಸಿದೆ. ಅಂದು ಕಾಂಗ್ರೆಸ್ ಅನುಸರಿಸಿದ ಮಾರ್ಗವನ್ನೇ ಇಂದು ಬಿಜೆಪಿ ಅನುಸರಿಸಿದ್ದು, ಹಾಲಿನ ಪ್ಯಾಕೆಟ್ ಮೇಲೆ ಹಾಲಿ ಸಿಎಂ ಫೋಟೋ ಹಾಕಿದೆ. ಅಲ್ಲದೆ ಬೆಲೆ ಏರಿಕೆಯ ವಿರುದ್ಧ ಧ್ವನಿ ಎತ್ತಿದೆ. ಬಿಜೆಪಿ ತನ್ನ ಸಾಮಾಜಿಕ ತಾಣದಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ಈ ಪೋಸ್ಟರ್ ಸದ್ಯ ಸಖತ್ ವೈರಲ್ ಆಗುತ್ತಿದೆ.
ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ಪೆಟ್ರೋಲ್ ಹಾಗೂ ಡಿಸೆಲ್ ಮೇಲಿನ ಸೆಸ್ ಹೆಚ್ಚಿಸಿತ್ತು. ಆಗಲು ಸರ್ಕಾರ, ಪ್ರತಿ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಈಗ ಹಾಲಿನ ದರ ಏರಿಸಿ ಜನ ಸಾಮಾನ್ಯರ ಮೇಲೆ ಬರೆ ಹಾಕಿದೆ ಎಂದು ಬಿಜೆಪಿ ಕಿಡಿ ಕಾರುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ನೀತಿಯ ವಿರುದ್ಧ ಬಿಜೆಪಿ ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುವ ಪ್ಲ್ಯಾನ್ ಮಾಡಿಕೊಂಡಿದೆ.
ಏನ್ ಹೇಳ್ತಾರೆ ಸಿಎಂ?
ನಂದಿನ ಹಾಲಿನ ದರವನ್ನು ಏರಿಕೆ ಮಾಡಿದ್ದನ್ನು ಪ್ರಶ್ನಿಸಿದಾಗ ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರ ಯಾವುದೇ ಬೆಲೆಯನ್ನು ಹೇರಿಕೆ ಮಾಡಿಲ್ಲ. ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಹೀಗಾಗಿ ಅದನ್ನು ಸರಿದೂಗಿಸಲು ಒಂದು ಪ್ಯಾಕೇಟ್‌ಗೆ 50 ಎಂಎಲ್ ಹಾಲನ್ನು ಹೆಚ್ಚವರಿಯಾಗಿ ನೀಡಿ, ಎರಡು ರೂಪಾಯಿ ಹೆಚ್ಚಿಗೆ ಪಡೆಯುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಬೆಲೆ ಏರಿಕೆಯ ನೇರ ಪರಿಣಾಮ ರಾಜ್ಯದ ಜನರ ಮೇಲೆ ಆಗುತ್ತಿದೆ. ಪೆಟ್ರೋಲ್, ಡಿಸೇಲ್ ದರಗಳು ಏರಿಕೆ ಆಗಿದ್ದು, ಮಳೆ ಆಗದೇ ಇರುವುದರಿಂದ ರಾಜ್ಯದಲ್ಲಿ ಆಹಾರ ಪದಾರ್ಥಗಳು, ತರಕಾರಿಗಳ ಬೆಲೆ ಗಗನಕ್ಕೆ ಮುಟ್ಟಿದೆ. ಸರ್ಕಾರ ಈಗಾಗಲೇ ಮುದ್ರಾಂಕ ಶುಲ್ಕ ಹೆಚ್ಚಳ, ಜನನ ಮರಣ ಪ್ರಮಾಣಪತ್ರ ಶುಲ್ಕ ಹೆಚ್ಚಳದ ವಿರುದ್ಧವೂ ಜನರು ಹೈರಾಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications