ಈಶ್ವರಪ್ಪ, ರೆಡ್ಡಿ, ಪ್ರಭಾಕರ ಕೋರೆ ನಾಮಪತ್ರ ಸಲ್ಲಿಕೆ

ಬೆಂಗಳೂರು, ಜೂ.7 : ಕಾಂಗ್ರೆಸ್ ಪಕ್ಷ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಮುಂದುವರೆಸಿದ್ದರೆ, ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ, ಬಿಜೆಪಿಯಿಂದ ಪ್ರಭಾಕರ ಕೋರೆ ಮತ್ತು ವಿಧಾನಪರಿಷತ್ ಚುನಾವಣೆ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಶನಿವಾರ ವಿಧಾಸಭೆ ಕಾರ್ಯದರ್ಶಿ ಮತ್ತು ಚುಣಾವಣಾಧಿಕಾರಿಯಾದ ಓಂಪ್ರಕಾಶ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಕೆ.ಎಸ್.ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ. [ಕುಪೇಂದ್ರ ರೆಡ್ಡಿ ಜೆಡಿಎಸ್ ಅಭ್ಯರ್ಥಿ]

ರಾಜ್ಯಸಭೆಗೆ ಮರು ಆಯ್ಕೆ ಬಯಸುತ್ತಿರುವ ಪ್ರಭಾಕರ ಕೋರೆ ಅವರು ಶನಿವಾರ ತಮ್ಮ ನಾಮಪತ್ರವನ್ನು ಓಂ ಪ್ರಕಾಶ್ ಅವರಿಗೆ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿಚ ಅನಂತ್ ಕುಮಾರ್, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮುಂತಾದ ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು. ಚಿತ್ರಗಳಲ್ಲಿ ನೋಡಿ ವಿಧಾನಸೌಧದಲ್ಲಿ ಕೇಸರಿ ಪಡೆ [ರಾಜ್ಯಸಭೆಗೆ ಸದಸ್ಯರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?] (ಚಿತ್ರಗಳು : ಪ್ರಹ್ಲಾದ್ ಜೋಶಿ ಫೇಸ್ ಬುಕ್)

ವಿಧಾನಸೌಧದಲ್ಲಿ ಬಿಜೆಪಿ ನಾಯಕರು

ವಿಧಾನಸೌಧದಲ್ಲಿ ಬಿಜೆಪಿ ನಾಯಕರು

ರಾಜ್ಯಸಭೆ ಮತ್ತು ವಿಧಾನಪರಿಷತ್ತಿನ ಚುನಾವಣೆ ನಾಮಪತ್ರ ಸಲ್ಲಿಸಲು ಬಿಜೆಪಿ ನಾಯಕರು ಶನಿವಾರ ವಿಧಾನಸೌಧಕ್ಕೆ ಆಗಮಿಸಿದ್ದರು. ರಾಜ್ಯಸಭೆ ಚುನಾವಣೆಗೆ ಪ್ರಭಾಕರ ಕೋರೆ, ವಿಧಾನಪರಿಷತ್ ಚುನಾವಣೆಗೆ ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಸಿದರು.

ಶಂಕರಮೂರ್ತಿ ಭೇಟಿ ಮಾಡಿದ ನಾಯಕರು

ಶಂಕರಮೂರ್ತಿ ಭೇಟಿ ಮಾಡಿದ ನಾಯಕರು

ರಾಜ್ಯಸಭೆಗೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಪ್ರಭಾಕರ ಕೋರೆ ಅವರು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ಭೇಟಿ ಮಾಡಿದರು.

ಈಶ್ವರಪ್ಪ, ಶಂಕರಮೂರ್ತಿ ಭೇಟಿ

ಈಶ್ವರಪ್ಪ, ಶಂಕರಮೂರ್ತಿ ಭೇಟಿ

ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಕೆ.ಎಸ್.ಈಶ್ವರಪ್ಪ ಪರಿಷತ್ ಸಭಾಪತಿ ಮತ್ತು ಶಿವಮೊಗ್ಗ ಜಿಲ್ಲೆಯವರಾದ ಡಿ.ಎಚ್.ಶಂಕರಮೂರ್ತಿ ಅವರನ್ನು ಭೇಟಿ ಮಾಡಿದರು.

ಅನಂತ್ ಕುಮಾರ್, ಜೋಶಿ ಸಾಥ್

ಅನಂತ್ ಕುಮಾರ್, ಜೋಶಿ ಸಾಥ್

ನಾಮಪತ್ರ ಸಲ್ಲಿಸಲು ಬಂದ ಉಭಯ ನಾಯಕರಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಮತ್ತು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆ

ವಿಧಾಸಭೆ ಕಾರ್ಯದರ್ಶಿ ಮತ್ತು ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಗಳ ಚುಣಾವಣಾಧಿಕಾರಿಯಾದ ಓಂಪ್ರಕಾಶ್ ಅವರಿಗೆ ಉಭಯ ನಾಯಕರು ನಾಮಪತ್ರ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+