ರಾಹುಲ್ ಸಂವಾದ ಕಾರ್ಯಕ್ರಮದ ಹೊರಗೆ ಕೈ-ಬಿಜೆಪಿ ಕಾರ್ಯಕರ್ತರ ಗಲಾಟೆ

ಬೆಂಗಳೂರು, ಮಾರ್ಚ್‌ 18: ರಾಹುಲ್ ಗಾಂಧಿ ಅವರು ಇಂದು ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ಟೆಕಿಗಳು ಮತ್ತು ಯುವ ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಭಾಗವಹಿಸಲು ಆಗಮಿಸಿದ್ದರು.

ಅವರು ಹೋಗುವ ರಸ್ತೆಯಲ್ಲಿ ರಾಹುಲ್ ಅವರನ್ನು ಕಾಣಲು ಸಾಕಷ್ಟು ಜನ ನಿಂತಿದ್ದರು, ರಾಹುಲ್ ಅವರ ವಾಹನ ಮಾನ್ಯತಾ ಟೆಕ್ ಪಾರ್ಕ್‌ನ ಒಳಗೆ ಸಭಾಂಗಣದ ಕಡೆಗೆ ಸಾಗುವ ವೇಳೆ ಅಲ್ಲಿ ನೆರದಿದ್ದ ಜನರಲ್ಲಿ ಕೆಲವರು 'ಮೋದಿ, ಮೋದಿ' ಎಂದು ಘೋಷಣೆಗಳನ್ನು ಕೂಗಿ ರಾಹುಲ್ ಅವರಿಗೆ ಮುಜುಗರ ಉಂಟುಮಾಡುವ ಪ್ರಯತ್ನ ಮಾಡಿದರು.

BJP-Congress party workers fight out side Rahul Gandhis Conversation

ಕೆಲವರು 'ಮತ್ತೊಮ್ಮೆ ಮೋದಿ', ಇನ್ನೂ ಇತ್ಯಾದಿ ಪ್ಲೇ ಕಾರ್ಡ್‌ಗಳನ್ನು ಹಿಡಿದು ಪ್ರದರ್ಶಿಸಿ, ಮೋದಿ ಪರ ಘೋಷಣೆಗಳನ್ನು ಕೂಗಿದರು.

ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಬೆಂಬಲಿಗರು ಸಹ 'ಚೌಕೀದಾರ್ ಚೋರ್ ಹೇ' ಎಂದು ಘೋಷಣೆಗಳನ್ನು ಕೂಗಿದರು. ಎರಡೂ ಕಡೆಯವರ ಘೋಷಣೆಗಳು ತಾರಕಕ್ಕೆ ಏರಿತು. ಎರಡೂ ಕಡೆಯ ಕಾರ್ಯಕರ್ತರ ನಡುವೆ ವಾಗ್ವಾದ ಸಹ ಸ್ಥಳದಲ್ಲಿ ನಡೆಯಿತು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+